ಹಾಸನ ಟಿಕೆಟ್‌ ವಿಚಾರದಲ್ಲಿ ಶಕುನಿಗಳ ಕೈವಾಡ, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದ ಕುಮಾರಣ್ಣ

| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2023 | 6:47 PM

ಹಾಸನ ಟಿಕೆಟ್‌ ವಿಚಾರದಲ್ಲಿ ಶಕುನಿಗಳ ಕೈವಾಡವಿದ್ದು, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದು ಹೆಚ್​ಡಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮತ್ತೊಮ್ಮೆ ಪರೋಕ್ಷವಾಗಿ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

ಹಾಸನ ಟಿಕೆಟ್‌ ವಿಚಾರದಲ್ಲಿ ಶಕುನಿಗಳ ಕೈವಾಡ,  ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದ ಕುಮಾರಣ್ಣ
ಎಚ್ ಡಿ ಕುಮಾರಸ್ವಾಮಿ
Follow us on

ರಾಯಚೂರು: ದಳಪತಿಗಳ ಕೋಟೆ ಹಾಸನದಲ್ಲಿ ಟಿಕೆಟ್ ಗೊಂದಲದಿಂದಾಗಿ ಕಾರ್ಯಕರ್ತರಲ್ಲಿ ಹೆಜ್ಜೆ ಹೆಜ್ಜೆಗೂ ತಳಮಳ ಶುರುವಾಗಿದೆ. ಹಾಸನ ಕಣದ ಟಿಕೆಟ್​​ಗೆ ದೊಡ್ಡ ಸಮರ ನಡೀತಿವೆ. ಟಿಕೆಟ್​ಗಾಗಿ ರೇವಣ್ಣ ಫ್ಯಾಮಿಲಿ ಮತ್ತು ಕುಮಾರಣ್ಣ ನಡುವೆ ಯುದ್ಧವೇ ನಡೆಯುತ್ತಿದೆ. ಈ ಟಿಕೆಟ್ ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ರೇವಣ್ಣ ಮೌನ ಮುರಿದಿದ್ದು, ಹಾಸನ ಟಿಕೆಟ್​​ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟು ಹೊಸ ಆಟ ಕಟ್ಟಿದ್ದಾರೆ. ಮತ್ತೊಂದೆಡೆ ಹೆಚ್​ಡಿ ಕುಮಾರಸ್ವಾಮಿ ಹಾಸನ ಟಿಕೆಟ್‌ ವಿಚಾರದಲ್ಲಿ ಶಕುನಿಗಳ ಕೈವಾಡವಿದ್ದು, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Hassan JDS Ticket Fight: ಕುಮಾರಸ್ವಾಮಿ ಭಾವುಕರಾದ ಬೆನ್ನಲ್ಲೇ ಮೌನ ಮುರಿದ ಹೆಚ್.ಡಿ.ರೇವಣ್ಣ

ರಾಯಚೂರಿನ ಸಿಂಧನೂರಿನಲ್ಲಿ ಮತಾನಾಡಿದ ಕುಮಾರಸ್ವಾಮಿ, ಭವಾನಿ ರೇವಣ್ಣಗೆ ಸೂಕ್ತ ಸಮಯದಲ್ಲಿ ಸೂಕ್ತ ಜವಾಬ್ದಾರಿ ನೀಡುತ್ತೇವೆ. ಮಕ್ಕಳು ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ನಾವು ತೀರ್ಮಾನ ಕೈಗೊಳ್ಳುತ್ತೇವೆ. ಹೆಚ್​ಡಿ ರೇವಣ್ಣ ಹೇಳಿದ ಮೇಲೆ ಅದೇ ಅಂತಿಮ. ಹಾಸನದಲ್ಲಿ ರಾಜಕೀಯದಲ್ಲಿ ಶಕುನಿಗಳ ಕೈವಾಡ ಆರೋಪ ಇದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದರು.

ಮಕ್ಕಳು ಅವರವರ ಭಾವನೆಗಳನ್ನ ವ್ಯಕ್ತಪಡಿಸುತ್ತಾರೆ. ರೇವಣ್ಣ ಅವರು ಹೇಳಿದ್ದರಿಂದ ಅದು ಮುಗಿದು ಹೋಗಿದೆ. ಭವಾನಿ ರೇವಣ್ಣ ರಾಜ್ಯ ರಾಜ್ಯಕಾರಣದಲ್ಲಿ ಉಳಿತಾರೋ ಇಲ್ಲ ಸ್ಥಳೀಯ ಮಟ್ಟದ ರಾಜಕಾರಣದಲ್ಲಿ ಇರ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಯಾವ ಸೂಕ್ತ ಸಮಯದಲ್ಲಿ ಯಾವ ಸ್ಥಾನಮಾನದಲ್ಲಿ ಕೆಲಸ ಮಾಡಬೇಕು. ಆ ಜವಾಬ್ದಾರಿಯನ್ನ ಕೊಡುತ್ತೇವೆ. ಭವಾನಿ ರೇವಣ್ಣಗೆ ಸೂಕ್ತ ಸಮಯದಲ್ಲಿ ಸೂಕ್ತ ಜವಾಬ್ದಾರಿ ನೀಡುತ್ತೇವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಪರೋಕ್ಷವಾಗಿ ಈ ಬಾರಿ ಹಾಸನ ಟಿಕೆಟ್ ಇಲ್ಲ ಎಂದು ಪುನರುಚ್ಚರಿಸಿದರು.

ಇನ್ನು ಭವಾನಿ ಹಾಗೂ ಅವರ ಮಕ್ಕಳಾದ ಪ್ರಜ್ವಲ್ ರೇವಣ್ಣ ಸೂರಜ್ ರೇವಣ್ಣ ಟಿಕೆಟ್​ ಪಡೆಯಲೇಬೇಕೆಂದು ಹಠಕ್ಕೆ ಬಿದ್ದಿದ್ದಿದ್ದಾರೆ. ಆದ್ರೆ, ಇದರ ಹಿಂದೆ ಶಕುನಿಗಳ ಕೈವಾಡ ಇದ್ದು. ಅವರು ಈ ರೀತಿ ಮಾಡಿಸುತ್ತಿದ್ದಾರೆ ಎನ್ನುವುದು ಕುಮಾರಸ್ವಾಮಿ ಅವರ ಆರೋಪವಾಗಿದೆ. ಹಾಗಾದ್ರೆ, ಯಾರು ಆ ಶಕುನಿ? ಆ ಶಕುನಿ ಸ್ವಪಕ್ಷದಲ್ಲಿ ಇದ್ದಾರೋ ಅಥವಾ ವಿರೋಧ ಪಕ್ಷದಲ್ಲಿ ಇದ್ದಾರೋ? ಎನ್ನುವ ಚರ್ಚೆಗಳು ಶುರುವಾಗಿವೆ.

Published On - 6:47 pm, Sun, 29 January 23