ಹಾಸನ ಟಿಕೆಟ್ ಜಿದ್ದಾ ಜಿದ್ದಿಗೆ ಬಿಳಿ ಬಾವುಟ ಹಾರಿಸಿದ ರೇವಣ್ಣ: ಕ್ಷೇತ್ರದಿಂದ ಹಿಂದೆ ಸರಿತಾರಾ ಭವಾನಿ ರೇವಣ್ಣ? ಸೂರಜ್ ಭಾವನಾತ್ಮಕ ಟ್ವೀಟ್
ಹಾಸನ ಟಿಕೆಟ್ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದು, ಸುದ್ದಿ ಗೋಷ್ಠಿ ಮಾಡುವ ಮೂಲಕ ಹೆಚ್ಡಿ ರೇವಣ್ಣ ಜಿದ್ದಾ ಜಿದ್ದಿಗೆ ತೆರೆಳೆದಿದ್ದಾರೆ. ಈಗ ದೊಡ್ಡಗೌಡ್ರು ಟಿಕೆಟ್ ಯಾರಿಗೆ ನೀಡಲಿದ್ದಾರೆ ಕಾದು ನೋಡಬೇಕಿದೆ.
ಹಾಸನ: ಹಾಸನ ವಿಧಾನಸಭಾ ಟಿಕೆಟ್ ವಿಚಾರವಾಗಿ ಜೆಡಿಎಸ್ ಕುಟುಂಬದಲ್ಲಿ ಬಿರುಕು ಮೂಡಿದ್ದು, ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna), ಪತ್ನಿ ಭವಾನಿ ರೇವಣ್ಣ (Bhavni Revanna) ಹಾಸನ ಟಿಕೆಟ್ ನನಗೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಹೆಚ್ಡಿ ರೇವಣ್ಣ ನಿನ್ನೆ (ಜ.29) ಸುದ್ದಿಗೋಷ್ಠಿ ನಡೆಸಿ ಟಿಕೆಟ್ ಜಿದ್ದಾ ಜಿದ್ದಿಗೆ ಬಿಳಿ ಬಾವುಟ ಹಾರಿಸಿದ್ದಾರೆ. ಆದರೆ ರೇವಣ್ಣ ತಂತ್ರ ಯಶಸ್ವಿಯಾಗುವುದೆ ಯಕ್ಷ ಪ್ರಶ್ನೆಯಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumarswamy) ಹೇಳಿಕೆ ಬಳಿಕವೂ ಭವಾನಿ ರೇವಣ್ಣ ಹಾಸನ ಕ್ಷೇತ್ರದಲ್ಲಿನ ಆಕ್ಟೀವ್ ಆಗಿದ್ದರು.
ಹಾಸನ ಕ್ಷೇತ್ರದಲ್ಲಿ ಭವಾನಿ ಹೊರತು ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಕುಮಾರಸ್ವಾಮಿ ಈಗಾಗಲೆ ಹೇಳಿದ್ದಾರೆ. ರೇವಣ್ಣ ಹಾಸನದ ಟಿಕೆಟ್ ಹಂಚಿಕೆ ಕುಮಾರಸ್ವಾಮಿ ತೀರ್ಮಾನವೇ ಅಂತಿಮ ಅಂದಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಹೇಳಿಕೆ ರೇವಣ್ಣ ಪರೋಕ್ಷವಾಗಿ ಬೆಂಬಲ ನೀಡಿದ್ರಾ? ಇನ್ನು ರೇವಣ್ಣ ಹೇಳಿಕೆ ಬಳಿಕ ಅಂತಿಮ ತೀರ್ಮಾನದ ವರೆಗೆ ದೊಡ್ಡಗೌಡರ ಸೊಸೆ ತಾತ್ಕಾಲಿಕವಾಗಿ ಹಾಸನ ಕ್ಷೇತ್ರದಿಂದ ಹಿಂದೆ ಸರಿತಾರಾ ಎಂದು ಕಾದು ನೋಡಬೇಕಿದೆ. ಈ ಮಧ್ಯೆ ಭವಾನಿ ರೇವಣ್ಣ ಕರ್ನಾಟಕದ ಅಮ್ಮ, ಕರುನಾಡಿನ ಮಹಿಳೆಯರ ಶಕ್ತಿ ಎಂದು ಭವಾನಿ ಅಭಿಮಾನಿಗಳು ಟ್ರೆಂಡ್ ಸೃಷ್ಟಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹಾಸನ ಟಿಕೆಟ್ ವಿಚಾರದಲ್ಲಿ ಶಕುನಿಗಳ ಕೈವಾಡ, ಆ ಶಕುನಿ ಯಾರೆಂದು ಸೂಕ್ತ ಸಮಯದಲ್ಲಿ ತಿಳಿಸುವೆ ಎಂದ ಕುಮಾರಣ್ಣ
ಇಬ್ಬರ ಕಿತ್ತಾಟದಲ್ಲಿ ಯಾರಿಗೆ ಟಿಕೆಟ್ ?
ಇವರಿಬ್ಬರ ಕಿತ್ತಾಟದಲ್ಲಿ ಜೆಡಿಎಸ್ ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೆ ಎಂಬ ಪ್ರಶ್ನೆ ಮೂಡಿದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಎರಡು ಬಣಗಳಾಗಿ ಮಾರ್ಪಟ್ಟಿದ್ದಾರೆ. ಕಾರ್ಯಕರ್ತರ ನಡುವೆ ಸಂಘರ್ಷದಿಂದ ಟಿಕೇಟ್ ಹಂಚಿಕೆ ಮತ್ತಷ್ಟು ತಲೆನೋವಾಗೋದು ಬಹುತೇಕ ಖಚಿತವಾಗಿದೆ. ಒಡೆದ ಕಾರ್ಯಕರ್ತರ ಮನಸ್ಸುಗಳನ್ನು ಒಂದು ಗೂಡಿಸಲು ವರಿಷ್ಠರು ಯಾವ ಮದ್ದು ಅರೀತಾರೆ ತಿಳಿಯಬೇಕಾಗಿದೆ.
ಈಗಾಗಲೆ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಹಾಗೂ ಹೆಚ್.ಪಿ. ಸ್ವರೂಪ್ ಎಂಬ ಕಾರ್ಯಕರ್ತರ ಬಣ ಸೃಷ್ಟಿಯಾಗಿದೆ. ಸ್ವರೂಪ್ಗೆ ಟಿಕೆಟ್ ನೀಡಿದರೇ ವಾನಿ ರೇವಣ್ಣ ಬಣ ಕೆಲಸ ಮಾಡೋದು ಅನುಮಾನ. ಭವಾನಿ ರೇವಣ್ಣಗೆ ಟಿಕೆಟ್ ನೀಡಿದರೇ, ಸ್ವರೂಪ್ ಬಣ ಕೆಲಸ ಮಾಡೋದು ಅನುಮಾನ. ಇನ್ನು ರೇವಣ್ಣ ಮಾತ್ರ ಕುಮಾರಸ್ವಾಮಿ, ದೇವೇಗೌಡ್ರು ಹಾಗೂ ಸಿಎಂ ಇಬ್ರಾಹಿಂ ಅವರ ತೀರ್ಮಾನವೇ ಅಂತಿಮ ಎಂದಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ನಿತ್ಯ ಜಾಗಟೆ ಹೊಡೆಯುವ ಗಿರಾಕಿ: ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಭಾವನಾತ್ಮಕವಾಗಿ ಟ್ವೀಟ್ ಮಾಡಿದ ರೇವಣ್ಣ ಪುತ್ರ ಡಾ.ಸೂರಜ್
ಡ್ಯಾಮೇಜ್ ಕಂಟ್ರೋಲ್ಗೆ ಎಂಎಲ್ಸಿ ಡಾ.ಸೂರಜ್ ರೇವಣ್ಣ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. “ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು” ಎಂದು ಟ್ವೀಟ್ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಗೆಲ್ಲಿಸುವ ಶಕ್ತಿ ಪಕ್ಷಕ್ಕಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ