ರಾಯಚೂರು: ರಾಯಚೂರು ನಗರದ ಕಾಂಗ್ರೆಸ್ (Congress) ಕಚೇರಿಯಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ಕಚ್ಚಾಡಿದ್ದಾರೆ. ಸಭೆಯಲ್ಲು ಕಾರ್ಯಕರ್ತರ ಮಧ್ಯೆ ಮೊದಲು ವಾಗ್ವಾದ ಶುರುವಾಗಿದೆ. ವಾಗ್ವಾದ ತಾರಕಕ್ಕೆ ಏರಿ ತಳ್ಳಾಟ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಸಭೆಯಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಸಿಂಧನೂರು ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಎನ್ ಎಸ್ ಬೋಸರಾಜ್ ಹಾಗೂ ಕೆಪಿಸಿಸಿ ವಕ್ತಾರ ಎ.ವಸಂತ ಕುಮಾರ್ ಸೇರಿ ಹಲವು ಮುಖಂಡರು ಭಾಗಿಯಾಗಿದ್ದರು.
ಬಿಜೆಪಿ ಪಕ್ಷ ನಮ್ಮ ಶತ್ರು: ಬಿಜೆಪಿ ವಿರುದ್ದ ಗುಡುಗಿದ ಕಾಂಗ್ರೆಸ್ ಮಾಜಿ ಸಚಿವೆ ಉಮಾಶ್ರೀ
ಮಂಡ್ಯ: ‘ಭಾರತ ದೇಶದ ಭವಿಷ್ಯ ಕರಾಳವಾಗಿ ಕಾಣುತ್ತಿದೆ. ನಮ್ಮ ಶತ್ರು ಯಾರು ಅಂದರೆ ಮುಖ್ಯವಾಗಿ ಬಿಜೆಪಿ ಪಕ್ಷ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ನ ಮಾಜಿ ಸಚಿವೆ ಉಮಾಶ್ರೀ ಗುಡುಗಿದರು. ಎಷ್ಟು ವರ್ಷ ಬದುಕಿರುತ್ತೇವೊ ನಮಗೆ ಗೊತ್ತಿಲ್ಲ. ಇನ್ನೂ 10 ವರ್ಷ ಮುಂದೆ ನೆನೆಸಿಕೊಂಡರೆ ಭಾರತ ಕರಾಳವಾಗಿದೆ. ಬಿಜೆಪಿಯವರ ಕೈಯಿಗೆ ದೇಶ ಕೊಟ್ರೆ ಬಹಳ ಕರಾಳ ದಿನ ಎದುರಿಸುತ್ತಿರಿ. ಅರ್ಥ ಮಾಡಿಕೊಳ್ಳಿ. ಮೀಸಲಾತಿ ರದ್ದು ಮಾಡುತ್ತಾರೆ. ಇನ್ಫೋಸಿಸ್ ಐಟಿ ಕಂಪನಿಯಲ್ಲಿ ಮೀಸಲಾತಿ ಕೊಡ್ತಾರಾ ಎಂದು ಪ್ರಶ್ನಿಸಿದರು. 98.98% ಇರುವ ಮಕ್ಕಳಿಗೆ ಮಾತ್ರ ಕೆಲಸ ಕೊಡುತ್ತಾರೆ. ನಮ್ಮ ಮಕ್ಕಳು ಎಸ್ಸಿ, ಎಸ್ಟಿಗೆ ಮೀಸಲಾತಿ ಇಲ್ಲ. 55%,60% ತೆಗೆದರೆ ನಮ್ಮ ಮಕ್ಕಳಿಗೆ ಸಿಗಲ್ಲ ಕೆಲಸ. ಚೆನ್ನಾಗಿ ಓದುವ ಮಕ್ಕಳು ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳು ಕೆಲಸ ಗೀಟಿಸಿಕೊಂಡಿರುತ್ತಾರೆ. ನಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಹೇಗೆ ಕೆಲಸ ತಗೋಳುತ್ತಾರೆ. ಯೋಚನೆ ಮಾಡಿ, ಮಕ್ಕಳ ಭವಿಷ್ಯ ಬಹಳ ಕಷ್ಟ ಇದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Mon, 26 September 22