ಶಾಸಕಿ ಪುತ್ರ, ಪಿಎ ಸೇರಿ ಕಾನ್ಸ್​ಟೇಬಲ್​ ಮೇಲೆ ಹಲ್ಲೆ; ಘಟನೆ ನಡೆದು ಆರು ದಿನವಾದ್ರೂ ಎಂಎಲ್​ಎ ಪುತ್ರನ ಬಂಧನವಿಲ್ಲ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 18, 2024 | 7:27 AM

 ದೇವದುರ್ಗ ಕ್ಷೇತ್ರದ ಶಾಸಕಿ ಪುತ್ರ ಹಾಗೂ ಪಿಎ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಪ್ರಭಾವಿಗಳ ಬಂಧನವಾಗಿಲ್ಲ. ಪೊಲೀಸ್ ಇಲಾಖೆ ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಆರೋಪ ಕೇಳಿಬಂದಿದ್ದು, ಇತ್ತ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ದೇವದುರ್ಗ ಠಾಣೆ ಸಿಬ್ಬಂದಿ ಭದ್ರತೆ ಕೋರಿ ಪತ್ರ ಬರೆದಿದ್ದಾರೆ.

ಶಾಸಕಿ ಪುತ್ರ, ಪಿಎ ಸೇರಿ ಕಾನ್ಸ್​ಟೇಬಲ್​ ಮೇಲೆ ಹಲ್ಲೆ; ಘಟನೆ ನಡೆದು ಆರು ದಿನವಾದ್ರೂ ಎಂಎಲ್​ಎ ಪುತ್ರನ ಬಂಧನವಿಲ್ಲ!
ದೇವದುರ್ಗ ಎಂಎಲ್​​ಎ ಶಾಸಕಿ ಪುತ್ರನಿಂದ ಹಲ್ಲೆ
Follow us on

ರಾಯಚೂರು, ಫೆ.18: ಜಿಲ್ಲೆಯ ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮಾ ನಾಯಕ್(karemma nayak) ಅವರ ಪುತ್ರ ಸಂತೋಷ್ ಹಾಗೂ ಅವರ ಪಿಎ ಇಲಿಯಾಸ್ ಸೇರಿ ಎಂಟು ಜನ ದೇವದುರ್ಗ(Devadurga) ಠಾಣೆ ಕಾನ್ಸ್​ಟೇಬಲ್ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಹಲ್ಲೆಗೊಳಗಾದ ಕಾನ್ಸ್ ಟೇಬಲ್ ಹನಮಂತರಾಯ ಕೃತ್ಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ. ಅಕ್ರಮ ಮರಳುಗಾರಿಕೆ ಟ್ರಾಕ್ಟರ್ ವಶಕ್ಕೆ ಪಡೆದ ವಿಚಾರವಾಗಿ ಶಾಸಕಿ ಪುತ್ರ ಹಲ್ಲೆ ನಡೆಸಿರುವುದಾಗಿ ಕಾನ್ಸ್​ ಟೇಬಲ್ ಹನಮಂತರಾಯ ಆರೋಪಿಸಿದ್ದರು. ಶಾಸಕಿ ಪುತ್ರನ ದರ್ಪದ ವಿರುದ್ಧ ಮೊನ್ನೆ(ಫೆ.16) ಕಾಂಗ್ರೆಸ್ ಮಹಿಳಾ ಘಟಕ ಕೆರಳಿತ್ತು. ನಿನ್ನೆ ಕನ್ನಡ ಪರ ಸಂಘಟನೆಗಳು ಈ ಘಟನೆಯನ್ನ ಖಂಡಿಸಿದ್ದವು. ಪೊಲೀಸ್ ಕಾನ್ಸ್​ಟೇಬಲ್ ಮೇಲೆ ಹಲ್ಲೆ ನಡೆದು ಆರು ದಿನವಾದ್ರೂ ಈವರೆಗೆ ಶಾಸಕಿ ಪುತ್ರನ ಬಂಧನವಾಗದೇ ಇರೋದಕ್ಕೆ ರಾಜಕೀಯ ಒತ್ತಡ ಎ ಹೇಳಲಾಗುತ್ತಿದೆ. ಶಾಸಕಿ ಪುತ್ರನ ಬಂಧನವಾಗದೇ ಇರುವುದು ಸಾರ್ವಜನಿಕರ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಬೆಳವಣಿಗೆ ಬೆನ್ನಲ್ಲೇ ದೇವದುರ್ಗ ಲಾ ಆಂಡ್ ಆರ್ಡರ್ ಠಾಣೆ ಹಾಗೂ ಟ್ರಾಫಿಕ್ ಠಾಣೆ ಸಿಬ್ಬಂದಿ ಭದ್ರತೆ ಜೊತೆ ಇತರೆ ವಿಷಯಗಳನ್ನ ಪ್ರಸ್ತಾಪಿಸಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ. ತಮ್ಮ ಮೇಲೆ ಕಾರ್ಯನಿರ್ವಹಣೆ ವೇಳೆ ರಾಜಕೀಯ ಒತ್ತಡ, ಇತರೆ ಕಿರಿಕಿರಿ ಬಗ್ಗೆ ಪೊಲೀಸ್ ಸಿಬ್ಬಂದಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ದೇವದುರ್ಗ ಲಾ ಆಂಡ್ ಆರ್ಡರ್ ಠಾಣೆಯ 36 ಜನ ಹಾಗೂ ಟ್ರಾಫಿಕ್​ ನ 23 ಸಿಬ್ಬಂದಿ ಸೇರಿ ಒಟ್ಟು 59 ಜನ ಸಹಿ ಮಾಡುವ ಮೂಲಕ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಶಾಸಕಿ ಪುತ್ರ, ಪಿಎಯಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ; ಸಹಿ ಆಂದೋಲನ ಶುರು ಮಾಡಿದ ಕಾನ್ಸ್ಟೇಬಲ್​ಗಳು

ಘಟನೆ ನಡೆದ ಈವರೆಗೆ ಆರೋಪಿಗಳ ಬಂಧನವಾಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿಗೆ ರಕ್ಷಣೆ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಬೇಸರ ಹೊರಹಾಕಿರುವ ಸಿಬ್ಬಂದಿ ವರ್ಗಾವಣೆಯತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು, ಹೋರಾಟಗಾರರು ಕೂಡ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಘಟನೆಗೆ ಕಾರಣವಾದರ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ಅಷ್ಟೇ ಅಲ್ಲದೇ ಶಾಸಕಿ ಆರೋಪಿಸದಂತೆ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ