ಉತ್ತರ ಕನ್ನಡ: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಕುಮಟಾ ಹೊಳೆಗದ್ದೆ ಟೋಲ್​ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಮಹಿಳೆ ಹಾಗೂ ಓರ್ವ ಪುರುಷನಿಗೆ ಗಾಯವಾಗಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಘಟನೆ ಕುರಿತು ಪೊಲೀಸ್​ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಉತ್ತರ ಕನ್ನಡ: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು
ಕುಮಟಾ ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 17, 2024 | 5:25 PM

ಉತ್ತರ ಕನ್ನಡ, ಫೆ.17: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ (Uttara kannada) ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್​(Kumata Holegadde toll)ನಲ್ಲಿ ನಡೆದಿದೆ. ಮಹಿಳೆ ಹಾಗೂ ಓರ್ವ ಪುರುಷನಿಗೆ ಗಾಯವಾಗಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಟೋಲ್​ನಲ್ಲಿ ಫಾಸ್ಟ್ ಟ್ಯಾಗ್ ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ಜಗಳವಾಗಿದೆ. ಈ ವೇಳೆ ರೊಚ್ಚಿಗೆದ್ದ ಟೋಲ್ ಸಿಬ್ಬಂದಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ವಾಹನದ ಗ್ಲಾಸ್ ಪುಡಿ ಮಾಡಿದ್ದಾನೆ.

ಮಂಗಳೂರು ನಗರದ ಪಲ್ನೀರಿನ ಮುಜೀಜ್ ಎಂಬಾತನ ಕುಟುಂಬ, ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತಿದ್ದರು. ಈ ವೇಳೆ ಕುಮಟಾ ಟೋಲ್ ಗೇಟ್​ನಲ್ಲಿ ಫಾಸ್ಟ್ ಟ್ಯಾಗ್​ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಟೋಲ್ ಸಿಬ್ಬಂದಿಗಳಾದ ಕಿರಣ್, ಸತೀಶ್ ಹಾಗೂ ಮಂಜುನಾಥ್ ಎಂಬುವವರಿಂದ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ಸಹ ಸಿಬ್ಬಂದಿ ಮಜೀಜ್ ಸೈಯದ್ ರವರ ಕಾರಿನ ಗಾಜು ಪುಡಿ ಮಾಡಿದ್ದಲ್ಲದೆ, ಮಹಿಳೆಯರ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆಯಿಷಾ, ಫಾತೀಮಾ, ಮಜೀಜ್ ಸೈಯದ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ಸಿರುಗುಪ್ಪ ಹಾಸ್ಟೆಲ್ ಅಡುಗೆ ಸರಿಯಿಲ್ಲ ಎಂದು ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ವಾರ್ಡನ್​​ ಹಲ್ಲೆ

ಅಳಿಯನ ಮೇಲಿನ ಸಿಟ್ಟಿನಿಂದ ರಸ್ತೆ ಪಕ್ಕದಲ್ಲಿ ನಿಂತವರಿಗೆ ಏಟು ಬಿತ್ತು

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಕಾರು ಡಿಕ್ಕಿಯಾದ ಘಟನೆ ನಡೆದಿದೆ. ಅಳಿಯನ ಮೇಲಿನ ಸಿಟ್ಟಿನಿಂದ ರಸ್ತೆ ಪಕ್ಕದಲ್ಲಿ ನಿಂತವರಿಗೆ ಏಟು ಬಿದ್ದಿದ್ದು, ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಕೂಡಲೇ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಸಂಬಂಧಿಕರಿಬ್ಬರು ಜಗಳವಾಡಿ ಪರಿಸ್ಥಿತಿ ವಿಕೋಪಕ್ಕೆ‌ ಹೋಗಿದೆ. ಇದರ ಪರಿಣಾಮ ಕಾರ್ ಡಿಕ್ಕಿಪಡಿಸಲು ಬಂದ ಸಂದರ್ಭದಲ್ಲಿ ಐವರಿಗೆ ತಗುಲಿ ಗಾಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Sat, 17 February 24