ರಾಯಚೂರು: 14 ಲಕ್ಷ ಪುಟಗಳ ದಾಖಲೆಗಳು ಡಿಜಿಟಲೀಕರಣ; ಜಿಲ್ಲಾಡಳಿತದ ಕಾರ್ಯ ಕರ್ನಾಟಕಕ್ಕೆ ಮಾದರಿ

| Updated By: ganapathi bhat

Updated on: Mar 02, 2022 | 11:06 AM

ಸದ್ಯ ರಾಯಚೂರು, ದೇವದುರ್ಗ, ಸಿರವಾರ ಹಾಗೂ ಮಾನವಿ ತಾಲೂಕುಗಳ ದಾಖಲೆಗಳ ಸ್ಕ್ಯಾನ್ ಮಾಡಿದ್ದು, ಕೆಟಿಟಿಪಿ ಕಾಯ್ದೆ ಅನುಸಾರ ಇ- ಟೆಂಡರ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ.

ರಾಯಚೂರು: 14 ಲಕ್ಷ ಪುಟಗಳ ದಾಖಲೆಗಳು ಡಿಜಿಟಲೀಕರಣ; ಜಿಲ್ಲಾಡಳಿತದ ಕಾರ್ಯ ಕರ್ನಾಟಕಕ್ಕೆ ಮಾದರಿ
14 ಲಕ್ಷ ಪುಟಗಳ ದಾಖಲೆಗಳು ಡಿಜಿಟಲೀಕರಣ
Follow us on

ರಾಯಚೂರು: ಇಲ್ಲಿನ ಜಿಲ್ಲಾಡಳಿತ ಕೈಗೊಂಡಿರುವ ಡಿಜಿಟಲೀಕರಣ ಕಾರ್ಯ ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದೆ. ಡಿಜಿಟಲೀಕರಣದ ಮೂಲಕ 80- 90 ವರ್ಷ ಹಳೆಯ ದಾಖಲೆಗಳಿಗೆ ಮರುಜೀವ ಕೊಡಲಾಗಿದೆ. ಸುಮಾರು 14 ಲಕ್ಷ ಪುಟಗಳ ದಾಖಲೆಗಳು ಡಿಜಿಟಲೀಕರಣ ಮಾಡಲಾಗಿದೆ. ರಾಯಚೂರಿನ ಸಹಾಯಕ ಆಯುಕ್ತ ರಜನಿಕಾಂತ್ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಒಂದು ದಾಖಲೆಗಾಗಿ 3-4 ತಿಂಗಳು ಅಲೆಯೋ ಸ್ಥಿತಿ ಮಾಯವಾಗಿ, ಇದೀಗ ಒಂದೇ ನಿಮಿಷದಲ್ಲಿ ಎಲ್ಲಾ ಡಾಕ್ಯುಮೆಂಟ್ ಸಿಗುವಂತೆ ಮಾಡಲಾಗಿದೆ. ಸದ್ಯ ರಾಯಚೂರು, ದೇವದುರ್ಗ, ಸಿರವಾರ ಹಾಗೂ ಮಾನವಿ ತಾಲೂಕುಗಳ ದಾಖಲೆಗಳ ಸ್ಕ್ಯಾನ್ ಮಾಡಿದ್ದು, ಕೆಟಿಟಿಪಿ ಕಾಯ್ದೆ ಅನುಸಾರ ಇ- ಟೆಂಡರ್ ಮೂಲಕ ಡಿಜಿಟಲೀಕರಣ ಮಾಡಲಾಗಿದೆ.

ದಶಕದ ಹಳೆ ದಾಖಲೆಗಳಾಗಿರುವ ಕೃಷ್ಣಾ ಮೇಲ್ಡಂಡೆ ಯೋಜನೆ (ಯುಕೆಪಿ), ತುಂಗಾಭದ್ರಾ ಯೋಜನೆ, ಒಟ್ಟು 14 ಲಕ್ಷ ಪುಟಗಳನ್ನು ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಣ ಮಾಡಿದ್ದಾರೆ. ಬಳಿಕ ಸಾಫ್ಟ್ ಕಾಫಿ ಕೂಡ ಕಂಪ್ಯೂಟರ್​ಗಳಿಗೆ ಅಳವಡಿಕೆ ಆಗಿದೆ. ಇನಾಂ ಭೂಮಿ, ಭೂಸ್ವಾಧೀನ ದಾಖಲೆಗಳು, ಭೂ ವಿವಾದ ವ್ಯಾಜ್ಯಗಳ ದಾಖಲೆಗಳ ಡಿಜಿಟಲೀಕರಣ ಆಗಿದೆ.

ಜೊತೆಗೆ ರೆಕಾರ್ಡ್ ರೂಂನಲ್ಲಿ ಮೂಲ ದಾಖಲೆಗಳನ್ನು ಬಂಡಲ್ ಗಳಲ್ಲಿ ಸಂಗ್ರಹಣೆ ಮಾಡಲಾಗಿದೆ. 80-90 ವರ್ಷದ ದಾಖಲೆಗಳ ನಂಬರ್ ಬರೆದು ಬಂಡಲ್ ಗಳಲ್ಲಿ ಜೋಡಣೆ ಮಾಡಲಾಗಿದೆ. ಹಾರ್ಡ್ ಕಾಪಿ ಕೂಡ ಸುಲಭವಾಗಿ ಸಿಗುವಂತೆ ಜೋಡಿಸಲಾಗಿದೆ. ಕೇವಲ ಸರ್ವೇ ನಂಬರ್ ಎಂಟ್ರಿ ಮಾಡಿದರೆ ಇಡೀ ದಾಖಲೆ ಕೈಗೆಟುಕುವಂತೆ ಹಾಗೂ ಕಂಪ್ಯೂಟರ್ ನಲ್ಲಿ ನಂಬರ್ ಉಲ್ಲೇಖಿಸಿದರೇ, ಇಡೀ ಸಾಫ್ಟ್ ಕಾಪಿ ಲಭ್ಯ ಆಗುವಂತೆ ಜೋಡಣೆ ಮಾಡಲಾಗಿದೆ.

ಇದನ್ನೂ ಓದಿ: ರಾಯಚೂರು: ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿ ಹಣ ಏಣಿಕೆ; ಮೂರೇ ತಿಂಗಳಲ್ಲಿ 38 ಲಕ್ಷ ರೂಪಾಯಿ ಹಣ ಜಮೆ

ಇದನ್ನೂ ಓದಿ: ಕ್ಯಾಷ್ ಬ್ಯಾಕ್ ಆಸೆಯಿಂದ ₹3 ಲಕ್ಷ ಕಳೆದುಕೊಂಡ ವಿದ್ಯಾರ್ಥಿ, ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು