Raichur Bandh: ನವೋದಯ ಸಂಸ್ಥೆ ನಡೆ ವಿರೋಧಿಸಿ ಇಂದು ರಾಯಚೂರು ಬಂದ್​ಗೆ ಕರೆ ಕೊಟ್ಟ ಸಂಘಟನೆಗಳು

| Updated By: ganapathi bhat

Updated on: Mar 07, 2022 | 7:28 AM

ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆರೋಪ ಕೇಳಿ ಬಂದಿದ್ದು ನವೋದಯ ಸಂಸ್ಥೆಯಿಂದ ಕೋರ್ಟ್‌ಗೆ ರಿಟ್ ಅರ್ಜಿ ವಿಶೇಷ ಸ್ಥಾನಮಾನದಡಿ ಮೆಡಿಕಲ್ ಸೀಟು ನೀಡದಿರಲು ರಿಟ್ ಸಲ್ಲಿಸಿರುವ ಹಿನ್ನೆಲೆ ವಿವಿಧ ಸಂಘಟನೆಗಳಿಂದ ನಾಳೆ ರಾಯಚೂರು ನಗರದಲ್ಲಿ ಪ್ರತಿಭಟನೆ ನಡೆಯಲಿದೆ.

Raichur Bandh: ನವೋದಯ ಸಂಸ್ಥೆ ನಡೆ ವಿರೋಧಿಸಿ ಇಂದು ರಾಯಚೂರು ಬಂದ್​ಗೆ ಕರೆ ಕೊಟ್ಟ ಸಂಘಟನೆಗಳು
ನವೋದಯ ಸಂಸ್ಥೆ
Follow us on

ರಾಯಚೂರು: ನಾಳೆ ಮಾರ್ಚ್ 7 ರಂದು ರಾಯಚೂರು ನಗರ ಸಂಪೂರ್ಣವಾಗಿ ಬಂದ್ ಆಗಿಲಿದೆ.ರಾಯಚೂರು ನಗರದಲ್ಲಿರೊ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಧೋರಣೆ ಖಂಡಿಸಿ, ಬಂದ್ಗೆ ಕರೆ ನೀಡಲಾಗಿದೆ. ರಾಯಚೂರು ನಗರದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ರಾಯಚೂರು ಬಂದ್ ನಡೆಯಲಿದೆ. ರಾಯಚೂರು ಬಂದ್ ಗೆ ಬಹುತೇಕ ಎಲ್ಲಾ ಕ್ಷೇತ್ರದವರು ಬೆಂಬಲ ನೀಡಿದ್ದಾರೆ. ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕೂಡ ಬಂದ್ನಲ್ಲಿ ಭಾಗಿಯಾಗಲಿದ್ದಾರೆ ಅಂತ ಶಾಸಕ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ನಾಳೆ ಬಂದ್ಗೆ ಕರೆ ನೀಡೊರೋದಕ್ಕೆ ಕಾರಣ ರಾಯಚೂರು ನಗರದಲ್ಲಿರೊ ನವೋದಯ ಮೆಡಿಕಲ್‌ ಕಾಲೇಜು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆಂದೇ‌ 371(ಜೆ) ಕಲಂನಡಿ ವಿಶೇಷ ಸ್ಥಾನ ನೀಡಲಾಗಿದೆ. ಹೀಗಿದ್ರೂ, ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮಾತ್ರ 371(ಜೆ) ಮೀಸಲಾತಿಯನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಮೆಡಿಕಲ್ ಸೀಟು ಹಂಚಿಕೆ ಮಾಡ್ತಿರೊ ಆರೋಪ ಕೇಳಿಬಂದಿದೆ. ಮೆಡಿಕಲ್ ಓದ್ಬೇಕು ಅನ್ನೊ ಮಹದಾಸೆ ಹೊಂದಿರೊ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮಹಾನ್ ಅನ್ಯಾಯ ಮಾಡಲಾಗ್ತಿದೆ ಅಂತ ಹೋರಾಟಗಾರರು ಆರೋಪಿಸಿದ್ದಾರೆ. ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಧೋರಣೆಯಿಂದ ಈ ಸಾಲಿನ ಸುಮಾರು 106 ವಿದ್ಯಾರ್ಥಿಗಳು ಭವಿಷ್ಯ ಅತಂತ್ರದಲ್ಲಿದೆ ಅನ್ನೋದು ಹೋರಾಟಗಾರರ ಆರೋಪ.

ಅಷ್ಟಕ್ಕು ನವೋದಯ ಮೆಡಿಕಲ್ ಕಾಲೇಜು ಪ್ರಾರಂಭವಾಗಿದ್ದು, ಭಾಷಾ ಅಲ್ಪಸಂಖ್ಯಾತರ ಖೋಟಾದಡಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರಡಿಯಲ್ಲಿರೊದು ಇದೊಂದೇ ಮೆಡಿಕಲ್ ಕಾಲೇಜು. ಬಳ್ಳಾರಿ, ರಾಯಚೂರು, ಯಾದಗಿರಿ,ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ತೆಲುಗು ಭಾಷಿಕರಿದ್ದಾರೆ. ನವೋದಯ ಮೆಡಿಕಲ್ ಕಾಲೇಜಿನಲ್ಲಿ‌ ಸರ್ಕಾರದ ಖೋಟಾದಲ್ಲಿ 371(ಜೆ) ಮೀಸಲಾತಿ ಅನ್ವಯ ಸೀಟು ನೀಡಲಾಗಿದೆ. ಪ್ರೈವೇಟ್ ಮ್ಯಾನೇಜ್ಮೆಂಟ್ ನ ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೀಟ್ ಅಲಾಟ್ ಆಗಿದೆ.ಅದನ್ನು ಪ್ರಶ್ನಿಸಿ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿದೆ. ಇದು ಸರಿಯಲ್ಲ ಕೂಡಲೇ ಅರ್ಜಿ ಹಿಂಪಡೆಯಬೇಕು.ಇದೇ ಕಾರಣಕ್ಕೆ ಈಗ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಿವಿ ಅಂತ ಹೈದರಾಬಾದ್ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.

ಈ ಬಗ್ಗೆ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮೊನ್ನೆಯಷ್ಟೇ ಸ್ಪಷ್ಟನೆ ನೀಡಿದೆ. ನಾವು ಆರ್ಟಿಕಲ್ 371(ಜೆ) ವಿರುದ್ಧ ಕೋರ್ಟ್ ಮೊರೆ ಹೋಗಿಲ್ಲ. 371(ಜೆ)ಕಲಂನಲ್ಲಿರೊ ನಿಯಮಗಳ ಬಗ್ಗೆ ಸರ್ಕಾರಕ್ಕೆ ಫಾಲೋ ಮಾಡಲು ಹೇಳಿ ಅಂತ ಕೋರ್ಟ್ ನಲ್ಲಿ ಮನವಿ‌ ಮಾಡಿದ್ದಿವಿ ಅಂತ ನವೋದಯ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಸ್ ಆರ್ ರೆಡ್ಡಿ ಸ್ಪಷ್ಟನೆ ನೀಡಿದ್ರು. ಆದ್ರೆ ನವೋದಯ ಮೆಡಿಕಲ್ ಕಾಲೇಜು ಮಾತ್ರ ಕೋರ್ಟ್ನಲ್ಲಿರೊ ಅರ್ಜಿ ವಾಪಸ್ ಪಡೆಯದೇ ತಮ್ಮ ಧೋರಣೆ ಮುಂದುವರೆಸಿದ್ದಾರೆ ಅಂತ ಆರೋಪಿಸಿ ನಾಳೆ ರಾಯಚೂರು ನಗರ ಬಂದ್ಗೆ ಕರೆ ನೀಡಲಾಗಿದೆ.

ಇದನ್ನೂ ಓದಿ: Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಸ್ಮಶಾನದ ಬೀಗದಕೈ ಬೇಕಾಗಿತ್ತು

ಉಕ್ರೇನ್‌ನಲ್ಲಿ ನಿನ್ನೆ ಯುದ್ಧ ನಿಲ್ಲಿಸಿದ್ದು ಪ್ರಧಾನಿ ನರೇಂದ್ರ ಮೋದಿ: ಹಾಲಪ್ಪ ಆಚಾರ್ ಹೇಳಿಕೆ

Published On - 2:33 pm, Sun, 6 March 22