Raichur Bandh: ನವೋದಯ ಮೆಡಿಕಲ್ ಸಂಸ್ಥೆಯಿಂದ ಸ್ಥಳೀಯರಿಗೆ ಅನ್ಯಾಯ ಆರೋಪ! ಇಂದು ರಾಯಚೂರು ನಗರ ಬಂದ್

Raichur Bandh: ನವೋದಯ ಮೆಡಿಕಲ್ ಸಂಸ್ಥೆಯಿಂದ ಸ್ಥಳೀಯರಿಗೆ ಅನ್ಯಾಯ ಆರೋಪ! ಇಂದು ರಾಯಚೂರು ನಗರ ಬಂದ್
ರಾಯಚೂರು ನಗರ ಬಂದ್ ಆಗಿದೆ.

ಹೈದ್ರಾಬಾದ್ ಕರ್ನಾಟಕ ಭಾಗಕ್ಕೆಂದೇ 371(ಜೆ) ಕಲಂನಡಿ ವಿಶೇಷ ಸ್ಥಾನ ನೀಡಲಾಗಿದೆ. ಹೀಗಿದ್ದರೂ, ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮಾತ್ರ 371(ಜೆ) ಮೀಸಲಾತಿಯನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಮೆಡಿಕಲ್ ಸೀಟು ಹಂಚಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.

TV9kannada Web Team

| Edited By: sandhya thejappa

Mar 07, 2022 | 10:51 AM

ರಾಯಚೂರು: ನವೋದಯ ಮೆಡಿಕಲ್ ಸಂಸ್ಥೆಯಿಂದ (Navodaya Medical Institute ) ಸ್ಥಳೀಯರಿಗೆ ಅನ್ಯಾಯ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಇಂದು (ಮಾರ್ಚ್ 7) ರಾಯಚೂರು ನಗರ ಬಂದ್ ಆಗಿದೆ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಬಂದ್ (Bandh) ಆಗಿದ್ದು, ನವೋದಯ ಶಿಕ್ಷಣ ಸಂಸ್ಥೆ ನಿಲುವಿನ ವಿರುದ್ಧ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕಲಂ 371(ಜೆ) ಅನ್ವಯಿಸದಂತೆ ನವೋದಯ ಸಂಸ್ಥೆ ಕೋರ್ಟ್ ಮೊರೆ ಹೋಗಿದೆ. ಕೋರ್ಟ್​ಗೆ ಹಾಕಿದ ಅರ್ಜಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಬಂದ್ ನಡೆಸಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಭಾಗಕ್ಕೆಂದೇ 371(ಜೆ) ಕಲಂನಡಿ ವಿಶೇಷ ಸ್ಥಾನ ನೀಡಲಾಗಿದೆ. ಹೀಗಿದ್ದರೂ, ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮಾತ್ರ 371(ಜೆ) ಮೀಸಲಾತಿಯನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಮೆಡಿಕಲ್ ಸೀಟು ಹಂಚಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಮೆಡಿಕಲ್ ಓದಬೇಕು ಎನ್ನುವ ಮಹದಾಸೆ ಹೊಂದಿರುವ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮಹಾನ್ ಅನ್ಯಾಯ ಮಾಡಲಾಗುತ್ತಿದೆ ಅಂತ ಹೋರಾಟಗಾರರು ಆರೋಪಿಸಿದ್ದಾರೆ. ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಧೋರಣೆಯಿಂದ ಈ ಸಾಲಿನ ಸುಮಾರು 106 ವಿದ್ಯಾರ್ಥಿಗಳು ಭವಿಷ್ಯ ಅತಂತ್ರದಲ್ಲಿದೆ ಅನ್ನೋದು ಹೋರಾಟಗಾರರ ಆರೋಪ.

ನವೋದಯ ಮೆಡಿಕಲ್ ಕಾಲೇಜು ಪ್ರಾರಂಭವಾಗಿದ್ದು, ಭಾಷಾ ಅಲ್ಪಸಂಖ್ಯಾತರ ಖೋಟಾದಡಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರಡಿಯಲ್ಲಿರೊದು ಇದೊಂದೆ ಮೆಡಿಕಲ್ ಕಾಲೇಜು. ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಹೆಚ್ಚಾಗಿ ತೆಲುಗು ಭಾಷಿಕರಿದ್ದಾರೆ. ನವೋದಯ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರದ ಖೋಟಾದಲ್ಲಿ 371(ಜೆ) ಮೀಸಲಾತಿ ಅನ್ವಯ ಸೀಟು ನೀಡಲಾಗಿದೆ. ಪ್ರೈವೇಟ್ ಮ್ಯಾನೇಜ್ಮೆಂಟ್​ನ ಸೀಟ್ ಮ್ಯಾಟ್ರಿಕ್ಸ್​ನಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೀಟ್ ಅಲಾಟ್ ಆಗಿದೆ. ಅದನ್ನು ಪ್ರಶ್ನಿಸಿ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿದೆ. ಇದು ಸರಿಯಲ್ಲ ಕೂಡಲೇ ಅರ್ಜಿ ಹಿಂಪಡೆಯಬೇಕು ಅಂತ ಹೈದರಾಬಾದ್ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.

ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ: ಬಂದ್ ಹಿನ್ನೆಲೆ ರಾಯಚೂರು-ಲಿಂಗಸುಗೂರು ಬೈಪಾಸ್ ರಸ್ತೆ ಬಳಿ ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್​ಗೆ ಸಲ್ಲಿಸಿರುವ ರಿಟ್ ಅರ್ಜಿ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ರಸ್ತೆ ಮಧ್ಯೆ ವಾಹನಗಳನ್ನು ತಡೆದು ಧರಣಿ ನಡೆಸಿದ್ದಾರೆ. ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ವಾಹನಗಳು ಚಲಾಯಿಸಲು ಬಿಟ್ಟರು.

ಇದನ್ನೂ ಓದಿ

ಮಾನಸಿಕ ಖಿನ್ನತೆ: ಐವರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಹತನಾದ ಬೆಳಗಾವಿಯ BSF ಯೋಧ

ಒಡೆದ ಹಿಮ್ಮಡಿಗಳಿಂದ ಆತಂಕಗೊಂಡಿದ್ದೀರಾ? ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನು ಪ್ರಯತ್ನಿಸಿ

Follow us on

Related Stories

Most Read Stories

Click on your DTH Provider to Add TV9 Kannada