AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನಸಿಕ ಖಿನ್ನತೆ: ಐವರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಹತನಾದ ಬೆಳಗಾವಿಯ BSF ಯೋಧ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಯೋಧ ಸತ್ಯಪ್ಪ ಕಳೆದ 13 ವರ್ಷಗಳ ಹಿಂದೆ BSF ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನರಾಗಿದ್ದರು ಎಂದು ತಿಳಿದುಬಂದಿದೆ.

ಮಾನಸಿಕ ಖಿನ್ನತೆ: ಐವರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಹತನಾದ ಬೆಳಗಾವಿಯ BSF ಯೋಧ
ಹತನಾದ ಬೆಳಗಾವಿಯ BSF ಯೋಧ
TV9 Web
| Edited By: |

Updated on:Mar 07, 2022 | 10:09 AM

Share

ಬೆಳಗಾವಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕರ್ನಾಟಕದ ಬಿಎಸ್​ಎಫ್ (BSF) ಯೋಧ, ಐವರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಹತನಾದ ದುರ್ಘಟನೆ ಪಂಜಾಬ್​ನಲ್ಲಿ (Punjab) ನಡೆದಿದೆ. ಕರ್ತವ್ಯನಿರತ ಬಿಎಸ್​ಎಫ್ ಯೋಧನಿಂದ (BSF Soldier) ಸಹಚರರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಸತ್ಯಪ್ಪ ಸಿದ್ದಪ್ಪ ಕಿಲಾರಗಿ (33) ಗುಂಡಿನ ದಾಳಿ ನಡೆಸಿ ತಾನೂ ಹತನಾಗಿರುವ BSF ಯೋಧ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಯೋಧ ಸತ್ಯಪ್ಪ ಕಳೆದ 13 ವರ್ಷಗಳ ಹಿಂದೆ BSF ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನರಾಗಿದ್ದ ಯೋಧ ಸತ್ಯಪ್ಪ, ನಿನ್ನೆ (ಮಾರ್ಚ್ 6) ಪಂಜಾಬ್​ನ ಅಮೃತಸರ ಅಟ್ಟಾರಿ ಗಡಿಯ ಖೇಸರ್ ಕ್ಯಾಂಪ್ ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಐವರು ಯೋಧರ ಮೇಲೆ ಗುಂಡು ತಗುಲಿದ್ದು ಬಳಿಕ ತಾನೂ ಸಹ ಗುಂಡು ಹಾರಿಸಿಕೊಂಡಿದ್ದಾರೆ.

ಸತ್ಯಪ್ಪ, ಮಾನಸಿಕವಾಗಿ ಖಿನ್ನರಾಗಿದ್ದ ಬಗ್ಗೆ ಯೋಧನ ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ. 6 ತಿಂಗಳ ಹಿಂದೆಯಷ್ಟೇ 1 ತಿಂಗಳ ರಜೆ ಮೇಲೆ ಬಂದಿದ್ದ ಯೋಧ, ಬ್ಯಾಂಕ್ ಒಂದರಲ್ಲಿ 10 ಲಕ್ಷ ಸಾಲ ಮಾಡಿ ತಿರಿಸಲಾಗದೆ ಮಾನಸಿಕ ಅಸ್ವಸ್ಥನಾಗಿದ್ದ ಎಂದು ತಿಳಿದುಬಂದಿದೆ. ಮಾನಸಿಕ ಅಸ್ವಸ್ಥತೆ ಕಾರಣ ರಜೆ ಮುಗಿದರೂ ಮರಳಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮನೆಯವರು ಬೆಳಗಾವಿಯಲ್ಲಿ ಕೆಲದಿನ ಬಳಿಕ ಧಾರವಾಡ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು ಎಂದು ತಿಳಿದುಬಂದಿದೆ.

ಚಿಕಿತ್ಸೆ ಪಡೆದು ಗುಣಮುಖನಾಗಿ ಪತ್ನಿ ಹಾಗೂ ಮಕ್ಕಳೊಂದಿಗೆ ಮರಳಿದ್ದ ಸತ್ಯಪ್ಪರಿಗೆ, ಕ್ಯಾಂಪಸ್ ಕ್ವಾಟರ್ಸ್ ನಲ್ಲಿ ಕುಟುಂಬಕ್ಕೆ ನಕಾರ ಎಂದಿದ್ದರು. ಹೀಗಾಗಿ‌ ಕುಟುಂಬಸ್ಥರನ್ನು ಮರಳಿ ಊರಿಗೆ ಕಳುಹಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಗುಂಡು ಹಾರಿಸಿಕೊಂಡಿರುವ ದುರ್ಘಟನೆ ಸಂಭವಿಸಿದೆ. ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾದಿದ್ದಾರೆ. BSF ಪಂಜಾಬ್ ಬಟಾಲಿಯನ್ ಮೂಲಕ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಈ ಘಟನೆಗಳ ಕುರಿತು ಮೃತ ಯೋಧನ ಸಹೋದರ ಮಾವ ಸಿದ್ಧಪ್ಪ ಎಂಬವರು ಟಿವಿ9 ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: BSF: ಸಹೋದ್ಯೋಗಿಗಳ ಮೇಲೆ ಬಿಎಸ್​ಎಫ್ ಜವಾನನಿಂದ ಗುಂಡಿನ ದಾಳಿ; ಪ್ರಕರಣದಲ್ಲಿ 5 ಯೋಧರ ಸಾವು

ಇದನ್ನೂ ಓದಿ: ವಿರಾಜಪೇಟೆಯ ವೀರಯೋಧ ಅಲ್ತಾಫ್ ಅವರ ಮಕ್ಕಳು ಮಿಲಿಟರಿ ಪೋಷಾಕಿನಲ್ಲಿ ಅಪ್ಪನಿಗೆ ವಿದಾಯ ಹೇಳಿದರು

Published On - 10:06 am, Mon, 7 March 22