BSF: ಸಹೋದ್ಯೋಗಿಗಳ ಮೇಲೆ ಬಿಎಸ್​ಎಫ್ ಜವಾನನಿಂದ ಗುಂಡಿನ ದಾಳಿ; ಪ್ರಕರಣದಲ್ಲಿ 5 ಯೋಧರ ಸಾವು

Amritsar | Border Security Force: ಜವಾನನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಪ್ರಕರಣದಲ್ಲಿ ಜವಾನನೂ ಸೇರಿ ಐವರು ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.

BSF: ಸಹೋದ್ಯೋಗಿಗಳ ಮೇಲೆ ಬಿಎಸ್​ಎಫ್ ಜವಾನನಿಂದ ಗುಂಡಿನ ದಾಳಿ; ಪ್ರಕರಣದಲ್ಲಿ 5 ಯೋಧರ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Mar 06, 2022 | 2:11 PM

ಅಮೃತಸರ: ಅಮೃತಸರದ ಖಾಸಾ ಹೆಡ್​ಕ್ವಾರ್ಟರ್ಸ್​ನಲ್ಲಿ ಭಾನುವಾರ ಜವಾನನೊಬ್ಬ ತನ್ನ ಕರ್ತವ್ಯದ ಗನ್​ನಿಂದ ಗುಂಡು ಹಾರಿಸಿದ್ದು, ಗಡಿ ಭದ್ರತಾ ಪಡೆಯ (BSF) ಒಟ್ಟು ಐವರು ಯೋಧರು ಮೃತಪಟ್ಟಿದ್ದಾರೆ. ಈ ಕುರಿತು ಪೊಲೀಸ್ ಮೂಲಗಳು, ‘ಅಮೃತಸರ- ಅಟ್ಟಾರಿ ರಸ್ತೆಯಲ್ಲಿರುವ ಹೆಡ್​ಕ್ವಾರ್ಟರ್ಸ್​ನಲ್ಲಿ ಆರೋಪಿಯು ಬೆಳಗ್ಗೆ 10.15ರ ಸುಮಾರಿಗೆ ಹಾಜರಿದ್ದ. ಅದೇ ಸಮಯದಲ್ಲಿ ಘಟನೆ ನಡೆದಿದೆ’ ಎಂದು ಮಾಹಿತಿ ನೀಡಿವೆ. ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ-ಅಮೃತಸರ ಗ್ರಾಮಾಂತರ) ದೀಪಕ್ ಹಿಲೋರಿ ಅವರು ಬಿಎಸ್‌ಎಫ್ ಅಧಿಕಾರಿಗಳಿಂದ ಐವರು ಯೋಧರ ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಖಚಿತಪಡಿಸಿದ್ದಾರೆ. ಆರೋಪಿ, ಗುಂಡು ಹಾರಿಸಿದ ಯೋಧ ಕೂಡ ಈ ಪ್ರಕರಣದಲ್ಲಿ ಮೃತಪಟ್ಟಿದ್ದಾನೆ. ಬಲಿಯಾದವರನ್ನು ಗುರುತಿಸಲು ತಂಡಗಳು ಕೆಲಸ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಿಎಸ್​​ಎಫ್ ಮೂಲಗಳ ಪ್ರಕಾರ 144ನೇ ಬೆಟಾಲಿಯನ್​ನ ‘ಬಿ’ಕಾಯ್, ಕಾನ್​ಸ್ಟೇಬಲ್ ಆಗಿದ್ದ ಸೆಟ್ಟೆಪ್ಪ ಎಸ್​ಕೆ, ಸಹೋದ್ಯೋಗಿಗಳು ಹಾಗೂ ಒಆರ್​ಎಸ್​ ಬ್ಯಾರಕ್​ನಲ್ಲಿದ್ದವರ ಮೇಲೆ ಮೊದಲಿಗೆ ಗುಂಡು ಹಾರಿಸಲು ಆರಂಭಿಸಿದ್ದಾನೆ. 44 ಬೆಟಾಲಿಯನ್‌ನ ಕಮಾಂಡೆಂಟ್ ಆಗಿದ್ದ ಸತೀಶ್ ಮಿಶ್ರಾ ಅವರ ವಾಹನದ ಮೇಲೂ ಅವರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಅಧಿಕಾರಿ ಕಮಾಂಡೆಂಟ್ ಕೂಡ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಗುಂಡಿನ ದಾಳಿಯಲ್ಲಿ 6 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಅಮೃತಸರ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಐವರು ಬೆಳಿಗ್ಗೆ 11:00 ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಆರನೇ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಎಸ್​ಎಫ್ ತಿಳಿಸಿದೆ.

ಪ್ರಕರಣದ ಕುರಿತಂತೆ ಎಎನ್​ಐ ಟ್ವೀಟ್:

ಇದನ್ನೂ ಓದಿ:

ಹುಬ್ಬಳ್ಳಿಯಲ್ಲಿ ನೂತನ ಎಫ್​.ಎಸ್​.ಎಲ್ ಲ್ಯಾಬ್ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಈ ಜೋಡಿಯ ವಯಸ್ಸಿನ ಅಂತರ 53 ವರ್ಷ; ಈರ್ವರೂ ಮೊದಲ ಬಾರಿಗೆ ಭೇಟಿಯಾಗಿದ್ದು ಎಲ್ಲಿ ಗೊತ್ತಾ?

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್