AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಕೋಟಿ ರೂ. ಮೌಲ್ಯದ ಚಿನ್ನ-ಬೆಳ್ಳಿ ವಶಪಡಿಸಿಕೊಂಡ ಪೊಲೀಸರು: ಕತ್ತಲಲ್ಲಿ ಪರಾರಿಯಾಗುತ್ತಿದ್ದ ಉದ್ಯಮಿಯ ಬೆನ್ನತ್ತಿದ ಐಟಿ ಅಧಿಕಾರಿಗಳು

ಇನ್ನೊಂದೆಡೆ ಇಂದು ಲಖನೌದ ಸರೋಜಿನಿ ನಗರದ ಖ್ಯಾತ ಉದ್ಯಮಿ ದೇವೇಂದ್ರ ಪಾಲ್ ಸಿಂಗ್​ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯ ಕೆಲವು ಸ್ಥಳಗಳು, ಕಾನ್ಪುರ, ಲಖನೌನ ವಿವಿಧ ಕಡೆ ರೇಡ್ ಮಾಡಿದ್ದಾರೆ.

5 ಕೋಟಿ ರೂ. ಮೌಲ್ಯದ ಚಿನ್ನ-ಬೆಳ್ಳಿ ವಶಪಡಿಸಿಕೊಂಡ ಪೊಲೀಸರು:  ಕತ್ತಲಲ್ಲಿ ಪರಾರಿಯಾಗುತ್ತಿದ್ದ ಉದ್ಯಮಿಯ ಬೆನ್ನತ್ತಿದ ಐಟಿ ಅಧಿಕಾರಿಗಳು
ಚಿನ್ನ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿದ ಪೊಲೀಸರು
Follow us
TV9 Web
| Updated By: Lakshmi Hegde

Updated on: Mar 06, 2022 | 12:49 PM

ಆಂಧ್ರಪ್ರದೇಶ-ತೆಲಂಗಾಣ ಗಡಿಯಲ್ಲಿರುವ ಪಂಚಲಿಂಗಲ ಚೆಕ್​ಪೋಸ್ಟ್​​ ಬಳಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಸಾಗಿಸುತ್ತಿದ್ದ ಐವರನ್ನು ಕರ್ನೂಲ್​ ಪೊಲೀಸರು ಬಂಧಿಸಿದ್ದಾರೆ. ಮಧ್ಯರಾತ್ರಿ ಸಾಗಿಸಲಾಗುತ್ತಿದ್ದ ಈ ಚಿನ್ನ, ಬೆಳ್ಳಿ, ನಗದಿಗೆ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ ವಶಪಡಿಸಿಕೊಳ್ಳಲಾಯಿತು ಎಂದು ಕರ್ನೂಲ್​ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳಿಂದ 3.96 ಕೋಟಿ ರೂಪಾಯಿ ಮೌಲ್ಯದ 8 ಕೆಜಿ ಚಿನ್ನ, 18.52 ಲಕ್ಷ ರೂಪಾಯಿ ಮೌಲ್ಯದ 28.5 ಕೆಜಿ ಬೆಳ್ಳಿ ಮತ್ತು 90 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ತಮಿಳುನಾಡಿನವರಾಗಿದ್ದು, ಅಕ್ರಮ ಸರಕು ಸಾಗಣೆ ಮಾಡುತ್ತಿದ್ದ ಬಸ್​​ನಲ್ಲಿ ಪ್ರಯಾಣ ಮಾಡುತ್ತಿದ್ದರು. ಗಡಿಯಲ್ಲಿ ಎಂದಿನಂತೆ ವಾಹನ ತಪಾಸಣೆ ಮಾಡಿದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ.   ಅಂದಹಾಗೇ ಈ ಬಸ್, ಸ್ವಾಮಿ ಅಯ್ಯಪ್ಪ ಎಂಬ​ ಒಂದು ಖಾಸಗಿ ಕಂಪನಿಗೆ ಸೇರಿದ್ದಾಗಿದ್ದು, ಹೈದರಾಬಾದ್​ನಿಂದ ಕೊಯಂಬತ್ತೂರಿಗೆ ಪ್ರಯಾಣಿಸುತ್ತಿತ್ತು.

ಬೆನ್ನತ್ತಿ ಹೋಗಿ ಹಿಡಿದ ಪೊಲೀಸರು !

ಇನ್ನೊಂದೆಡೆ ಇಂದು ಲಖನೌದ ಸರೋಜಿನಿ ನಗರದ ಖ್ಯಾತ ಉದ್ಯಮಿ ದೇವೇಂದ್ರ ಪಾಲ್ ಸಿಂಗ್​ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯ ಕೆಲವು ಸ್ಥಳಗಳು, ಕಾನ್ಪುರ, ಲಖನೌನ ವಿವಿಧ ಕಡೆ ರೇಡ್ ಮಾಡಿದ್ದಾರೆ. ದೇವೇಂದ್ರ ಪಾಲ್ ಸಿಂಗ್, ಕಾನ್ಪುರದಲ್ಲಿರುವ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರೂ ಹೌದು. ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ದೇವೇಂದ್ರ ಪಾಲ್ ಸಿಂಗ್ ಶನಿವಾರ ರಾತ್ರಿ ಪರಾರಿಯಾಗಲು ಹೊರಟಿದ್ದರು. ಅವರನ್ನು ಐಟಿ ಅಧಿಕಾರಿಗಳು ಮತ್ತು ಸ್ಥಳೀಯರ ಪೊಲೀಸರು ಬೆನ್ನತ್ತಿ ಹೋಗಿ ಬಂಧಿಸಿದ್ದಾರೆ.  ಇಲ್ಲಿಯವರೆಗೆ ಸುಮಾರು 4.25 ಕೋಟಿ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾಗಿ ವರದಿಯಾಗಿದೆ. ಹಾಗೇ, ಘಾಜಿಯಾಬಾದ್​ ಮತ್ತು ಶಹ್ದಾರಾದಲ್ಲಿಯೂ ಕೆಲವು ಕಡೆ ಐಟಿ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ‘ಹೆಂಗೆ ನಾವು..’ ಅಂತ ಫೇಮಸ್​ ಆದ ರಚನಾ ಇಂದರ್​ಗೆ ಜನ್ಮದಿನ; ಇಲ್ಲಿವೆ ಸುಂದರ ಫೋಟೋಗಳು

ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ