ಉಕ್ರೇನ್ ನೆರೆಯ ದೇಶಗಳಿಂದ ಭಾರತೀಯರ ಏರ್‌ಲಿಫ್ಟ್; ಎಲ್ಲಾ ಭಾರತೀಯರು ಖಾರ್ಕಿವ್ ನಗರ ತೊರೆದಿದ್ದಾರೆ ಎಂದ ಭಾರತೀಯ ವಿದೇಶಾಂಗ ಸಚಿವಾಲಯ
ದೊಡ್ಡ ಪ್ರಮಾಣದಲ್ಲಿ ಏರ್‌ಲಿಫ್ಟ್ ಕಾರ್ಯ ನಡೆಯುತ್ತಿದೆ. ಉಕ್ರೇನ್ ನೆರೆ ದೇಶಗಳ ಜತೆ ಮೋದಿಗೆ ಉತ್ತಮ ಸಂಬಂಧವಿದೆ. ಹೀಗಾಗಿ ಉಕ್ರೇನ್ ನೆರೆಯ ದೇಶಗಳಿಂದ ಏರ್‌ಲಿಫ್ಟ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಭಾನುವಾರ ತಿಳಿಸಿದ್ದಾರೆ.
ಹುಬ್ಬಳ್ಳಿ: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಪರಿಣಾಮ 200ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ರಾಯಭಾರ ಕಚೇರಿ ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಾಗುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾನಿಟರ್ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಏರ್‌ಲಿಫ್ಟ್ ಕಾರ್ಯ ನಡೆಯುತ್ತಿದೆ. ಉಕ್ರೇನ್ ನೆರೆ ದೇಶಗಳ ಜತೆ ಮೋದಿಗೆ ಉತ್ತಮ ಸಂಬಂಧವಿದೆ. ಹೀಗಾಗಿ ಉಕ್ರೇನ್ ನೆರೆಯ ದೇಶಗಳಿಂದ ಏರ್‌ಲಿಫ್ಟ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಭಾನುವಾರ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರಲು ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಮೃತದೇಹ ತರಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇದೇ ವೇಳೆ ಉಕ್ರೇನ್‌ನಲ್ಲಿ ಸಿಲುಕಿದ್ದ ಚೈತ್ರಾ ಸಂಶಿ ಎಂಬವರು ಸಿಎಂ ಬೊಮ್ಮಾಯಿ ಪ್ರಯಾಣಿಸ್ತಿದ್ದ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಹೂಗುಚ್ಛ ನೀಡಿ ಚೈತ್ರಾರನ್ನು ಸಿಎಂ ಬೊಮ್ಮಾಯಿ ಸ್ವಾಗತಿಸಿದ್ದಾರೆ.
ಉಕ್ರೇನ್‌ನಲ್ಲಿ ದಿನಕ್ಕೆ ಒಂದೊತ್ತು ಊಟ ಮಾಡುತ್ತಿದ್ದೆವು. ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕಠಿಣವಾಗಿತ್ತು. 7-8 ದಿನಗಳ ಕಾಲ ನಾವು ಬಂಕರ್‌ನಲ್ಲೇ ಕಾಲ ಕಳೆದವು. ರಾಯಭಾರ ಕಚೇರಿ ಸಿಬ್ಬಂದಿ ನಮಗೆ ಸಹಾಯ ಮಾಡಿದರು. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಧನ್ಯವಾದ ಎಂದು ಉಕ್ರೇನ್‌ನಿಂದ ಹುಬ್ಬಳ್ಳಿಗೆ ವಾಪಸಾದ ಚೈತ್ರಾ ಹೇಳಿಕೆ ನೀಡಿದ್ದಾರೆ.
ಆಪರೇಷನ್ ಗಂಗಾ ಹೆಸರಿನಲ್ಲಿ ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದ್ದು ಉಕ್ರೇನ್‌ನಲ್ಲಿ ಸಿಲುಕಿದ್ದ 210 ಭಾರತೀಯರ ಏರ್‌ಲಿಫ್ಟ್ ಕಾರ್ಯ ನಡೆದಿದೆ. ಐಎಎಫ್ ವಿಮಾನದಲ್ಲಿ 210 ಭಾರತೀಯರು ವಾಪಸಾಗಿದ್ದಾರೆ. ದೆಹಲಿ ಬಳಿಯ ಹಿಂಡನ್ ಏರ್‌ಬೇಸ್‌ಗೆ ರೊಮೇನಿಯಾದ ಬುಕಾರೆಸ್ಟ್‌ನಿಂದ 210 ಜನ ಆಗಮನವಾಗಿದೆ. ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಭಾರತೀಯರು ಇಲ್ಲ. ಎಲ್ಲಾ ಭಾರತೀಯರು ಖಾರ್ಕಿವ್ ನಗರ ತೊರೆದಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ.
ಈ ವೇಳೆ, ಮೇಕೆದಾಟು ಯೋಜನೆ ವಿಚಾರವಾಗಿ ಸಚಿವರ ಜತೆ ಚರ್ಚೆ ನಡೆಸಲಾಗುವುದು. ಕೇಂದ್ರ ಜಲಸಂಪನ್ಮೂಲ ಸಚಿವರ ಜತೆ ಚರ್ಚಿಸುತ್ತೇನೆ. ರಾಜ್ಯದಲ್ಲಿ ಸರ್ವಪಕ್ಷ ಸಭೆ ನಡೆಸಿ ನಂತರ ಸಚಿವರ ಜತೆ ಚರ್ಚೆ ಮಾಡುತ್ತೇನೆ ಎಂದು ಮೇಕೆದಾಟು ಪಾದಯಾತ್ರೆ ಬಗ್ಗೆ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಇತ್ತೀಚಿನ ಬೆಳವಣಿಗೆಗಳೇನು? ಇಲ್ಲಿವೆ 10 ಮುಖ್ಯಾಂಶಗಳು
Published On - 9:28 am, Sun, 6 March 22