Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಇತ್ತೀಚಿನ ಬೆಳವಣಿಗೆಗಳೇನು? ಇಲ್ಲಿವೆ 10 ಮುಖ್ಯಾಂಶಗಳು

Russia Ukraine War: ರಷ್ಯಾ ಸದ್ಯ ಕದನ ವಿರಾಮ ಘೋಷಿಸಿದ್ದರೂ ಕೂಡ ಹಲವೆಡೆ ಶೆಲ್ ದಾಳಿಯ ವರದಿಗಳಾಗಿವೆ. ರಷ್ಯಾ ಉಕ್ರೇನ್ ಬೆಳವಣಿಗೆಯ ಇತ್ತೀಚಿನ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.

Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಇತ್ತೀಚಿನ ಬೆಳವಣಿಗೆಗಳೇನು? ಇಲ್ಲಿವೆ 10 ಮುಖ್ಯಾಂಶಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Mar 06, 2022 | 9:05 AM

‘ಉಕ್ರೇನ್​ಗೆ​ ರಕ್ತಸ್ರಾವವಾಗಿದೆ ಆದರೆ ದೇಶ ಕೆಳಗೆ ಬಿದ್ದಿಲ್ಲ, ನೆಲದ ಮೇಲೆ ತನ್ನ ಎರಡೂ ಪಾದಗಳೊಂದಿಗೆ ದೃಢವಾಗಿ ನಿಂತಿದೆ’ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಭಾನುವಾರ ಹೇಳಿದ್ದಾರೆ. ರಷ್ಯಾದ ಆಕ್ರಮಣವು (Russia Ukraine War) ಹನ್ನೊಂದನೇ ದಿನಕ್ಕೆ ಪ್ರವೇಶಿಸಿರುವ ನಡುವೆಯೇ ಶನಿವಾರದಂದು ರಷ್ಯಾ ಕದನ ವಿರಾಮ ಘೋಷಿಸಿತ್ತು. ಮಾನವೀಯ ಕಾರಿಡಾರ್​​ಗಳಿಗಾಗಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ರಷ್ಯಾ ಹೇಳಿತ್ತು. ಆದರೆ ಮರಿಯುಪೋಲ್ ಬಂದರು ನಗರದಲ್ಲಿ ಶೆಲ್ ದಾಳಿ ಮುಂದುವರೆದಿದೆ. ಮುಖ್ಯವಾಗಿ ಇದೇ ನಗರದಲ್ಲಿ ಸಂಕ್ಷಿಪ್ತ ಕದನ ವಿರಾಮ ಘೋಷಿಸಲಾಗಿತ್ತು. ಉಕ್ರೇನ್​ ನಗರಗಳ ಸ್ಥೀತಿಯ ಕುರಿತು ಮಾತನಾಡಿರುವ ಮೇಯರ್ ವಾಡಿಮ್ ಬಾಯ್ಚೆಂಕೊ, ‘‘ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಹತ್ತಾರು ಜನರು ಅಪಾಯದಲ್ಲಿದ್ದಾರೆ. ವಸತಿ ಪ್ರದೇಶಗಳ ಮೇಲೆ ನಿರಂತರ ಶೆಲ್ ದಾಳಿ ನಡೆಯುತ್ತಿದೆ. ವಿಮಾನಗಳಲ್ಲಿ ವಸತಿ ಪ್ರದೇಶಗಳ ಮೇಲೆ ಬಾಂಬ್‌ಗಳನ್ನು ಬೀಳಿಸಲಾಗುತ್ತಿದೆ’’ ಎಂದು ಹೇಳಿದ್ದಾರೆ. ಈ ನಡುವೆ ರಷ್ಯಾಕ್ಕೆ ಜಾಗತಿಕ ಒತ್ತಡ ಹೆಚ್ಚಾಗುತ್ತಿದೆ. ಅದಾಗ್ಯೂ ಪುಟಿನ್ ತಮ್ಮ ನಿರ್ಧಾರದಿಂದ ಸಂಪೂರ್ಣ ಹಿಂದೆ ಸರಿದಿಲ್ಲ. ಇತ್ತೀಚೆಗೆ ಅವರು ಮಾತನಾಡುತ್ತಾ, ಪಾಶ್ಚಾತ್ಯ ರಾಷ್ಟ್ರಗಳು ದರೋಡೆಕೋರರಂತೆ ವರ್ತಿಸುತ್ತಿವೆ ಎಂದು ಆರೋಪಿಸಿದ್ದಾರೆ. ರಷ್ಯಾ ಉಕ್ರೇನ್ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.

  1. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮಾತನಾಡಿದ್ದಾರೆ. ಭದ್ರತೆ ಮತ್ತು ಆರ್ಥಿಕ ಬೆಂಬಲದ ಬಗ್ಗೆ ಯುಎಸ್ ಅಧ್ಯಕ್ಷರೊಂದಿಗೆ ಚರ್ಚಿಸಿದ್ದಾಗಿ ಅವರು ಭಾನುವಾರ ತಿಳಿಸಿದ್ದಾರೆ.
  2. ಪ್ರಮುಖ ನಗರಗಳಲ್ಲಿ ಶೆಲ್ ದಾಳಿ ಮುಂದುವರಿದಂತೆ ಉಕ್ರೇನ್, ಯುದ್ಧ ವಿಮಾನಗಳಿಗಾಗಿ ಪಾಶ್ಚಾತ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ. ನ್ಯಾಟೋ ಮಿತ್ರರಾಷ್ಟ್ರಗಳೊಂದಿಗೆ ಅಮೇರಿಕಾ ಈ ಕುರಿತು ಮಾತನಾಡುತ್ತಿದೆ. ಕೀವ್‌ಗೆ ಸಹಾಯವನ್ನು ಸದ್ಯದಲ್ಲೇ ಕಳುಹಿಸುತ್ತದೆ ಎಂದು ವರದಿಗಳು ತಿಳಿಸಿವೆ.
  3. ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಮಾತನಾಡುತ್ತಾ, ‘‘ಉಕ್ರೇನಿಯನ್ ಸೈನ್ಯವು ದೇಶವನ್ನು ಎಲ್ಲಾ ದಿಕ್ಕುಗಳಲ್ಲಿಯೂ ರಕ್ಷಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ರಷ್ಯಾದ ಆಕ್ರಮಣಕಾರರನ್ನು ಹಲವಾರು ರಂಗಗಳಲ್ಲಿ ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಲಾಗಿದೆ. ರಷ್ಯಾವು ಈಗಾಗಲೇ ದೊಡ್ಡ ನಷ್ಟವನ್ನು ಅನುಭವಿಸಿದೆ’’ಎಂದು ಹೇಳಿದ್ದಾರೆ.
  4. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅಷ್ಟೇ ಅಲ್ಲ, ಉಕ್ರೇನ್ ಯುದ್ಧ ಮುಂದುವರೆಸಿದರೆ ಅದರ ಭವಿಷ್ಯ ಅನುಮಾನದಲ್ಲಿದೆ ಎಂದಿದ್ದಾರೆ. ಪಾಶ್ಚಾತ್ಯ ರಾಷ್ಟ್ರಗಳು ಹೇರುತ್ತಿರುವ ನಿರ್ಬಂಧಗಳು ಯುದ್ಧವನ್ನೇ ಹೋಲುತ್ತವೆ ಎಂದು ಪುಟಿನ್ ಹೇಳಿದ್ದಾರೆ.
  5. ಉಕ್ರೇನ್‌ನಲ್ಲಿ 1.37 ಮಿಲಿಯನ್‌ಗಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ‘ಎರಡನೆಯ ಮಹಾಯುದ್ಧದ ನಂತರ ಯುರೋಪ್‌ನಲ್ಲಿ ನಾವು ನೋಡಿದ ದೊಡ್ಡ ನಿರಾಶ್ರಿತರ ಬಿಕ್ಕಟ್ಟು ಇದಾಗಿದೆ’ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
  6. ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್​ಗೆ ಉತ್ತರ ಮತ್ತು ಪಶ್ಚಿಮದಿಂದ ಹತ್ತಿರವಾಗುತ್ತಿವೆ. ಉತ್ತರದ ಪಟ್ಟಣವಾದ ಚೆರ್ನಿಹಿವ್‌ನಲ್ಲಿ ಶೆಲ್ಲಿಂಗ್, ಕ್ಷಿಪಣಿ ದಾಳಿಗಳು ಮತ್ತು ವಾಯುದಾಳಿಗಳಲ್ಲಿ ಹಲವು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
  7. ಬಿಬಿಸಿ, ಸಿಎನ್​ಎನ್, ಇಟಲಿಯ ಆರ್​ಎಐ ಮತ್ತು ಜರ್ಮನಿಯ ಎಆರ್​ಡಿ ಮತ್ತು ಜೆಡ್​​ಡಿಎಫ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಮಾಧ್ಯಮಗಳು ರಷ್ಯಾದ ಮಾಧ್ಯಮ ಪ್ರಸಾರದ ಹೊಸ ಕಾನೂನು ಜಾರಿಗೆ ಬಂದ ನಂತರ ರಷ್ಯಾದಿಂದ ವರದಿ ಮಾಡುವುದನ್ನು ಸುಮಾರು 15 ವರ್ಷಗಳವರೆಗೆ ನಿಲ್ಲಿಸುವುದಾಗಿ ಹೇಳಿದ್ದಾರೆ.
  8. ಉಕ್ರೇನ್ ಮೇಲಿನ ಯುದ್ಧದ ಸಮಯದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಗಳ ತನಿಖೆಗಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ನಡೆದ ಐತಿಹಾಸಿಕ ಮತದಾನದ ನಂತರ ರಷ್ಯಾ ಏಕಾಂಗಿಯಾಗಿದೆ. ಎರಿಟ್ರಿಯಾ ಮಾತ್ರ ಮಾಸ್ಕೋದ ಪರವಾಗಿ ನಿಂತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
  9. ಹಲವು ಅಂತಾರಾಷ್ಟ್ರೀಯ ಕಂಪನಿಗಳು ರಷ್ಯಾದಲ್ಲಿ ಸೇವೆ ಸ್ಥಗಿತಗೊಳಿಸುತ್ತಿವೆ. ವೀಸಾ ಹಾಗೂ ಮಾಸ್ಟರ್​ಕಾರ್ಡ್ ಇದೇ ನಿರ್ಧಾರ ತಳೆದ ಹೊಸ ಕಂಪನಿಗಳಾಗಿವೆ.
  10. ಇದುವರೆಗೆ ಸುಮಾರು 10,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕೀವ್ ಹೇಳಿಕೊಂಡಿದೆ. ಸೋಮವಾರ ರಷ್ಯಾ- ಉಕ್ರೇನ್ ನಡುವೆ ಮೂರನೇ ಸುತ್ತಿನ ಮಾತುಕತೆ ನಡೆಯಲಿದೆ.

ಇದನ್ನೂ ಓದಿ:

‘ಮೋದಿ ಸರ್ಕಾರದ ಚುನಾವಣಾ ಆಫರ್ ಶೀಘ್ರ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ’: ರಾಹುಲ್ ಗಾಂಧಿ

Russia-Ukraine War Live: ಸುಮ್ಮನಿರಿ, ಇಲ್ಲದಿದ್ದರೆ ಉಕ್ರೇನ್ ಗಡಿಯಾಚೆಗೂ ಯುದ್ಧ ವಿಸ್ತರಿಸುತ್ತೇವೆ: ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

Published On - 9:04 am, Sun, 6 March 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್