Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಸ್ಮಶಾನದ ಬೀಗದಕೈ ಬೇಕಾಗಿತ್ತು

Story : ಪಾದ್ರಿ ಅವಳನ್ನೇ ಸೂಕ್ಷ್ಮವಾಗಿ ದಿಟ್ಟಿಸಿದ. ಅವಳೂ ತಾಳ್ಮೆಯಿಂದ ಅವನನ್ನೇ ದಿಟ್ಟಿಸಿದಳು. ನಾಚಿದ ಪಾದ್ರಿ, ತಲೆ ತಗ್ಗಿಸಿ ಬರೆಯತೊಡಗಿದ. ಆ ಪುಟವನ್ನು ಬರೆದ ಮೇಲೆ ಅವನು ಆ ಹುಡುಗಿಯ ತಾಯಿಯ ಗುರುತು ಕೇಳಿದ.

Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಸ್ಮಶಾನದ ಬೀಗದಕೈ ಬೇಕಾಗಿತ್ತು
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ಮತ್ತು ಎಸ್. ಗಂಗಾಧರಯ್ಯ
Follow us
ಶ್ರೀದೇವಿ ಕಳಸದ
|

Updated on: Mar 06, 2022 | 2:30 PM

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ | Gabriel Garcia Marquez (1927-2014): ಹೂಗಳ ಹಳೆಯ ಘಮಲಿನ್ನೂ ಇದ್ದ ರೂಮೊಂದನ್ನು ಅವರು ಹೊಕ್ಕರು. ಮರದ ಬೆಂಚೊಂದರತ್ತ ಕರೆದೊಯ್ದ ಆ ಧಡೂತಿ ಹೆಂಗಸು ಅಲ್ಲಿ ಅವರನ್ನು ಕೂರುವಂತೆ ಸನ್ನೆ ಮಾಡಿದಳು. ಹುಡುಗಿ ಕೂತರೂ, ಅವಳ ಅಮ್ಮ ಅನ್ಯ ಮನಸ್ಕಳಾಗಿ, ಎರಡೂ ಕೈಗಳಿಂದ ಕೈ ಚೀಲವನ್ನು ಅವುಚಿ ಹಿಡಿದು ನಿಂತೇ ಇದ್ದಳು. ಫ್ಯಾನಿನ ಸದ್ದು ಮತ್ತೆಲ್ಲಾ ಸದ್ದುಗಳನ್ನು ನುಂಗಿಕೊಳ್ಳುತ್ತಿತ್ತು. ಬಾಗಿಲ ತುದಿಯಲ್ಲಿ ಮತ್ತೆ ಕಾಣಿಸಿಕೊಂಡ ಆ ಧಡೂತಿ ಹೆಂಗಸು, ‘ಮೂರು ಗಂಟೆಯ ಮೇಲೆ ಬರಬೇಕಂತೆ, ಹಂಗಂತ ಅವರು ಹೇಳಿದ್ರು, ಅವರು ಈಗಷ್ಟೇ ಮಲಗಿದ್ದಾರೆ’, ಅಂದಳು. ‘ಮೂರೂವರೆಗೆಲ್ಲಾ ರೈಲು ಹೊರಟು ಬಿಡುತ್ತೆ’, ಅಂದಳು ಹುಡುಗಿಯ ತಾಯಿ. ಉತ್ತರ ಚುಟುಕಾದರೂ ಗೆಲುವಾಗಿದ್ದ ಅವಳ ದನಿಯಲ್ಲಿ ಆತ್ಮವಿಶ್ವಾಸವಿತ್ತು, ಮೃದುತ್ವವಿತ್ತು. ಮೊದಲ ಬಾರಿಗೆ ಆ ಧಡೂತಿ ಹೆಂಗಸು ನಕ್ಕು, ‘ಆಗಲಿ ಹಾಗಾದ್ರೆ’, ಅಂದಳು.

ಕಥೆ : ಗೋರಿಯ ದಾರಿಯಲ್ಲಿ | ಮೂಲ : ಗೇಬ್ರಿಯಲ್​ ಗಾರ್ಸಿಯಾ ಮಾರ್ಕ್ವೆಝ್ | ಕನ್ನಡಕ್ಕೆ : ಎಸ್. ಗಂಗಾಧರಯ್ಯ

(ಭಾಗ 3)

ದೂರದ ಬಾಗಿಲು ಮುಚ್ಚಿದ ಮೇಲೆ ಹುಡುಗಿಯ ತಾಯಿ ತನ್ನ ಮಗಳ ಪಕ್ಕ ಕೂತಳು. ಆ ಪುಟ್ಟ ವೇಟಿಂಗ್ ರೂಮು ನಾಜೂಕಾಗಿಲ್ಲದಿದ್ದರೂ, ನೀಟಾಗಿತ್ತು. ಆಚೆ ಬದಿಯಲ್ಲಿ ಆ ರೂಮನ್ನು ವಿಭಜಿಸಿದ್ದ ಮರದ ಕಟಾಂಜನದ ಕಡೆಯಲ್ಲಿ ಬರೆಯುವ ಮೇಜೊಂದು ಇದ್ದು, ಅದಕ್ಕೆ ನೆಲಕ್ಕೆ ಹಾಸುವ ಮೇಣಗಮಟೆ ಬಟ್ಟೆಯನ್ನು ಕವುಚಿದ್ದು, ಅದರ ಮೇಲೆ ಪುರಾತನ ಕಾಲದ ಬೆರಳಚ್ಚು ಯಂತ್ರವೊಂದಿತ್ತು. ಅದರ ಪಕ್ಕದಲ್ಲಿ ಹೂದಾನಿಯೊಂದಿತ್ತು. ಅದರ ಹಿಂದೆ ಕೆಲವು ಪ್ಯಾರಿಷ್ ಕಡತಗಳಿದ್ದವು. ಅದೊಂದು ಮದುವೆಯಾಗದ ಹೆಂಗಸೊಬ್ಬಳು ನೋಡಿಕೊಳ್ಳುತ್ತಿದ್ದ ಕಚೇರಿ, ಎಂಬುದು ಮೇಲ್ನೋಟಕ್ಕೇ ತಿಳಿದು ಬಿಡುತ್ತಿತ್ತು.

ದೂರದ ಬಾಗಿಲು ತೆರೆದುಕೊಂಡು,ಈ ಸಲ ಕರ್ಚೀಫಿನಿಂದ ಕನ್ನಡಕದ ಗಾಜುಗಳನ್ನು ಒರೆಸುತ್ತಾ ಪಾದರಿ ಕಾಣಿಸಿಕೊಂಡ. ಅವನು ಕನ್ನಡಕವನ್ನು ಹಾಕಿಕೊಂಡ ಮೇಲೆ ಖಾತರಿಯಾಯ್ತು, ಅವನು ಬಾಗಿಲು ತೆಗೆದ ಆ ದಡೂತಿ ಹೆಂಗಸಿನ ಸಹೋದರ, ಅಂತ.

‘ನನ್ನಿಂದ ನಿಮಗೇನು ಸಹಾಯ ಆಗ್ಬೇಕು?’, ಪಾದ್ರಿ ಕೇಳಿದ.

‘ಸ್ಮಶಾನದ ಬೀಗದ ಕೈಗಳು ಬೇಕಾಗಿತ್ತು’, ಅಂದಳು ಹುಡುಗಿಯ ತಾಯಿ.

ತೊಡೆಯ ಮೇಲೆ ಹೂಗಳನ್ನಿಟ್ಟುಕೊಂಡು ಕೂತಿದ್ದ ಹುಡುಗಿಯ ಪಾದಗಳು ಬೆಂಚಿನ ಕೆಳಗೆ ಒಂದರ ಮೇಲೊಂದು ಇದ್ದವು.

ಪಾದ್ರಿ ಆ ಹುಡುಗಿಯ ಕಡೆಗೆ, ನಂತರ ಅವಳಮ್ಮನ ಕಡೆಗೆ ನೋಡಿ, ಆಮೇಲೆ ಕಿಟಕಿಯ ಸರಳುಗಳ ಮೂಲಕ ತಿಳಿಯಾಗಿದ್ದ, ಬೆಳಗುವ ಆಗಸವನ್ನು ದಿಟ್ಟಿಸಿದ.

‘ಈ ಉರಿಬಿಸಿಲಿನಲ್ಲಿ ಹೋಗೋದಕ್ಕಿಂತ ಕೊಂಚ ಹೊತ್ತು ಬಿಸಿಲು ಇಳಿಯೋವರೆಗಾದ್ರು ಕಾಯಬಹುದಿತ್ತಲ್ಲ’, ಅಂದ.

ಭಾಗ 1 : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ

ಹುಡುಗಿಯ ತಾಯಿ ಮಾತಿಲ್ಲದೆ ತಲೆಯಾಡಿಸಿದಳು. ಪಾದ್ರಿ ಕಟಾಂಜನವನ್ನು ದಾಟಿ ಆಚೆ ಬದಿಗೆ ಹೋಗಿ, ಮೇಣಗಮಟೆ ಬಟ್ಟೆಯಿಂದ ಸುತ್ತಿ ಇಟ್ಟಿದ್ದ ನೋಟ್​ಬುಕ್​, ಮರದ ಪೆನ್ನು ಹಾಗೂ ಇಂಕ್ ಬಾಟಲನ್ನು ಅಲಮಾರುವಿನಿಂದ ತೆಗೆದುಕೊಂಡು ಬಂದು ಮೇಜಿನ ಎದುರು ಕೂತ. ಅವನ ತಲೆಯಲ್ಲಿ ಕಾಣೆಯಾಗುತ್ತಿದ್ದ ಕೂದಲುಗಳ ಲೆಕ್ಕ ಕೈಗಳಲ್ಲಿ ಸಿಕ್ಕುತ್ತಿರುವಂತೆ, ಅವನ ಕೈಗಳಲ್ಲಿ ಸಾಕಷ್ಟು ಕೂದಲುಗಳಿದ್ದವು.

‘ನೀವೀಗ ಯಾವ ಗೋರಿಯನ್ನ ನೋಡಲು ಹೊರಟಿದ್ದೀರಿ?’ ಪಾದ್ರಿ ಕೇಳಿದ.

‘ಕಾರ್ಲೋಸ್ ಸೆಂತೆನೋದು’, ಅಂದಳು ಹುಡುಗಿಯ ತಾಯಿ.

‘ಯಾರದು?’

‘ಕಾರ್ಲೋಸ್ ಸೆಂತೇನೋ’, ಮತ್ತೆ ಅಂದಳು.

ಆಗಲೂ ಪಾದ್ರಿಗೆ ಅರ್ಥವಾಗಲಿಲ್ಲ.

‘ಕಳೆದ ವಾರ ಇಲ್ಲೊಬ್ಬ ಕಳ್ಳನ ಕೊಲೆ ಆಯ್ತಲ್ಲಾ, ಅವನು. ನಾನು ಅವನ ತಾಯಿ’, ಹಿಂದಿನ ಅದೇ ದನಿಯಲ್ಲಿ ಅಂದಳು ಹುಡುಗಿಯ ತಾಯಿ.

ಪಾದ್ರಿ ಅವಳನ್ನೇ ಸೂಕ್ಷ್ಮವಾಗಿ ದಿಟ್ಟಿಸಿದ. ಅವಳೂ ತಾಳ್ಮೆಯಿಂದ ಅವನನ್ನೇ ದಿಟ್ಟಿಸಿದಳು. ನಾಚಿದ ಪಾದ್ರಿ, ತಲೆ ತಗ್ಗಿಸಿ ಬರೆಯತೊಡಗಿದ. ಆ ಪುಟವನ್ನು ಬರೆದ ಮೇಲೆ ಅವನು ಆ ಹುಡುಗಿಯ ತಾಯಿಯ ಗುರುತು ಕೇಳಿದ. ಅವಳು ಯಾವ ಅಳುಕೂ ಇಲ್ಲದೆ, ಅವನು ಕೇಳಿದ್ದಕ್ಕೆಲ್ಲಾ ತಾನದನ್ನೆಲ್ಲಾ ಓದುತ್ತಿರುವೆನೇನೋ ಎಂಬಂತೆ, ನಿಖರ ಉತ್ತರ ಕೊಟ್ಟಳು. ಪಾದ್ರಿ ಬೆವರ ಹತ್ತಿದ. ಹುಡುಗಿ ಎಡಗಾಲಿನ ಬೂಟಿನ ಬಕಲ್ಲನ್ನು ಬಿಚ್ಚಿ, ಹಿಮ್ಮಡಿಯನ್ನು ಆಚೆ ತೆಗೆದಳು. ನಂತರ ಬಲಗಾಲಿನದನ್ನೂ ಹಾಗೇ ಮಾಡಿದಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ದಲ್ಲಾಳಿ ಅಂಗಡಿ ಮಾತ್ರ ತೆರೆದಿತ್ತು

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್