ರಾಯಚೂರಿನ ಎಲ್ಐಸಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ

| Updated By: ಆಯೇಷಾ ಬಾನು

Updated on: Aug 23, 2022 | 7:25 PM

2 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಚೇರಿಯಿಂದ ಸಿಬ್ಬಂದಿ ಹೊರಬಂದಿದ್ದಾರೆ. ಆತಂಕದಿಂದ LIC ಕಚೇರಿ ಸಿಬ್ಬಂದಿ ಹೊರಗೆ ಓಡಿಬಂದಿದ್ದಾರೆ.

ರಾಯಚೂರಿನ ಎಲ್ಐಸಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ
ರಾಯಚೂರಿನ ಎಲ್ಐಸಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ
Follow us on

ರಾಯಚೂರು: ರಾಯಚೂರಿನ ಎಲ್ಐಸಿ ಮುಖ್ಯ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೊದಲ ಮಹಡಿಯಲ್ಲಿ ಶಾರ್ಟ್ಸರ್ಕ್ಯೂಟ್ನಿಂದ ಆಕಸ್ಮಿಕ ಬೆಂಕಿ ತಗುಲಿದೆ. 2 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಚೇರಿಯಿಂದ ಸಿಬ್ಬಂದಿ ಹೊರಬಂದಿದ್ದಾರೆ. ಆತಂಕದಿಂದ LIC ಕಚೇರಿ ಸಿಬ್ಬಂದಿ ಹೊರಗೆ ಓಡಿಬಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಶಾಲಾ ವಾಹನದ ರೇಡಿಯೇಟರ್ ಸ್ಫೋಟ

ಹುಬ್ಬಳ್ಳಿಯ ಗೋಕುಲರೋಡ್‌ನ ಸೆಂಟ್ರಲ್ ಎಕೈಸ್ ಕಾಲೋನಿಯಲ್ಲಿ ಚೇತನಾ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ವಾಹನದ ರೇಡಿಯೇಟರ್ ಸ್ಫೋಟಗೊಂಡಿದೆ. ಅಪಘಾತದಿಂದ 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲೆಯಿಂದ ಮಕ್ಕಳನ್ನು ಮನೆಗೆ ಬಿಡಲು ತೆರಳುತ್ತಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ಗೋಕುಲ ರೋಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಂತ್ರಜ್ಞಾನದ ಸಹಾಯದಿಂದ ರೈತರಿಗೆ ಮೋಸ ಮಾಡುತ್ತಿದ್ದ ವ್ಯಾಪಾರಿ ಅರೆಸ್ಟ್

ಕೊಪ್ಪಳ: ತಂತ್ರಜ್ಞಾನದ ಸಹಾಯದಿಂದ ವ್ಯಾಪಾರಿಗಳು ರೈತರಿಗೆ ವಂಚನೆ ಮಾಡುತ್ತಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಸದ್ಯ ಸಾಕ್ಷಿ ಸಮೇತ ಖದೀಮ ಸಿಕ್ಕಿ ಬಿದ್ದಿದ್ದಾರೆ. ಈ ಖದೀಮರು ರಿಮೋಟ್ ಮೂಲಕ ತೂಕದಲ್ಲಿ ವಂಚನೆ ಮಾಡುತ್ತಿದ್ದರು.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಕೆಲ ಖದೀಮ ಚಪ್ಪಲಿಯಲ್ಲಿ ರಿಮೋಟ್ ಇಟ್ಟುಕೊಂಡು ಡಿಜಿಟಲ್ ತೂಕದ ಯಂತ್ರ ಹ್ಯಾಕ್ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದರು. ಸದ್ಯ ರೈತರು ಖದೀಮನ ವಂಚನೆ ಬಹಿರಂಗಪಡಿಸಿ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಕೊಪ್ಪಳ ಮೂಲದ ಶರೀಫ್ ಎಂದು ಹೇಳಿಕೊಂಡಿರೋ ವಂಚಕ ವ್ಯಾಪಾರಿಯನ್ನು ಅರೆಸ್ಟ್ ಮಾಡಲಾಗಿದೆ. 50 ಕ್ವಿಂಟಾಲ್ ಹತ್ತಿಯನ್ನ 30 ಕ್ವಿಂಟಾಲ್ ಎಂದು ತೂಕದ ಯಂತ್ರ ತೋರಿಸುವಂತೆ ಮಾಡಿ ರೈತರಿಗೆ ಈಗ ಮೋಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

Published On - 7:15 pm, Tue, 23 August 22