ಕಾರು ಹರಿದು ಅಗ್ನಿಶಾಮಕ ಸಿಬ್ಬಂದಿ ಸಾವು; ಸುದ್ದಿ ತಿಳಿದು ಮಗು ಹತ್ಯೆಗೈದು, ಪತ್ನಿ ಆತ್ಮಹತ್ಯೆ

| Updated By: ganapathi bhat

Updated on: Apr 17, 2022 | 5:11 PM

ಉಡುಪಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾರಾಮ್ ಮಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿದು 6 ತಿಂಗಳ ಮಗ ಅಭಿರಾಮ್ ಕೊಂದು, ಬಳಿಕ ಪತ್ನಿ ಶೃತಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಾರು ಹರಿದು ಅಗ್ನಿಶಾಮಕ ಸಿಬ್ಬಂದಿ ಸಾವು; ಸುದ್ದಿ ತಿಳಿದು ಮಗು ಹತ್ಯೆಗೈದು, ಪತ್ನಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ರಾಯಚೂರು: ರಸ್ತೆ ದಾಟುತ್ತಿದ್ದಾಗ ಕಾರು ಹರಿದು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದ ದುರ್ಘಟನೆ ಮಂಗಳೂರಿನಲ್ಲಿ ಸಂಭವಿಸಿತ್ತು. ಈ ಘಟನೆಯಿಂದ ಪತಿ ಸಾವಿನ ಸುದ್ದಿ ತಿಳಿದು ಮಗು ಹತ್ಯೆಗೈದು, ಪತ್ನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಮಂಗಳೂರಿನ ಕುಂಟಿಕಾನ ಬಳಿ ಕಾರು ಹರಿದು ಅಗ್ನಿಶಾಮಕ ಸಿಬ್ಬಂದಿ ಗಂಗಾಧರ ಬಿ. ಕಮ್ಮಾರ ಮೃತಪಟ್ಟಿದ್ದರು. ಪತಿ ಸಾವಿನ ಸುದ್ದಿ ಕೇಳಿ 6 ತಿಂಗಳ ಮಗ ಅಭಿರಾಮ್ ಹತ್ಯೆ ಮಾಡಿ ಗಂಗಾಧರ ಪತ್ನಿ ಶ್ರುತಿ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಘಟನೆ ನಡೆದಿದೆ.

ಉಡುಪಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾರಾಮ್ ಮಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ವಿಷಯ ತಿಳಿದು 6 ತಿಂಗಳ ಮಗ ಅಭಿರಾಮ್ ಕೊಂದು, ಬಳಿಕ ಪತ್ನಿ ಶೃತಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇತರ ಅಪಘಾತ ಸುದ್ದಿಗಳು

ರಾಮನಗರ: ಜಾನಪದಲೋಕ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ರಾಮನಗರದಲ್ಲಿ ನಡೆದಿದೆ. ನಾಗರಕಲ್ಲುದೊಡ್ಡಿ ಗ್ರಾಮದ ಶಿವಲಿಂಗಯ್ಯ (50) ಮೃತ ದುರ್ದೈವಿ. ರಾಮನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಮಿಣಕನಗುರ್ಕಿ ಗ್ರಾಮದ ಮಹೇಶ್ವರಮ್ಮ ಜಾತ್ರೆಗೆ ಬಂದಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಇಲ್ಲಿ ಸಂಭವಿಸಿದೆ. ಚಿಕ್ಕಹನುಮೇನಹಳ್ಳಿಯ ಸಿದ್ದಪ್ಪ (50) ಮೃತ ವ್ಯಕ್ತಿ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಬಳ್ಳಾಫುರ: ಬಾವಿಯಲ್ಲಿ ಈಜಾಡಲು ಹೋಗಿ ಯುವಕ ನೀರು ಪಾಲಾದ ದುರ್ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆ ನಾರಾಯಣಪುರದಲ್ಲಿ ಸಂಭವಿಸಿದೆ. ಕೇಶವಾರ ಗ್ರಾಮದ ಶರತ್ ಬಾಬು ಮೃತ ಯುವಕ. ಮೇಲಿಂದ ಬಾವಿಯೊಳಗೆ ಡೈ ಹೊಡೆದಿದ್ದ ಶರತ್, ನಂತರ ನೀರಿನಿಂದ ಮೇಲೆ ಬರಲೆ ಇಲ್ಲ. ವಿಚಾರ ತಿಳಿದು ಯುವಕನಿಗಾಗಿ ಹುಡುಕಾಡಲಾಗಿದೆ. ಬಳಿಕ, ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಶವ ಮೇಲೆ ಎತ್ತಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಭೇಟಿ ಬಳಿಕ ಮೃದುವಾದ ಸಂತೋಷ್ ಕುಟುಂಬಸ್ಥರು, ಸಂತೋಷ್ ಸಾವು ವಿಧಿಲಿಖಿತ ಎಂದ ಸೋದರ ಪ್ರಶಾಂತ್

ಇದನ್ನೂ ಓದಿ: SSLC ಪರೀಕ್ಷೆಗಾಗಿ ತಾಯಿ ಜೊತೆ ಹೋಗ್ತಿದ್ದಾಗ ಅಪಘಾತ, ಆಂಬುಲೆನ್ಸ್ ನಲ್ಲಿ ವಿದ್ಯಾರ್ಥಿನಿಯ ಕರೆತಂದು ಪರೀಕ್ಷೆ ಬರೆಯಿಸಿದ ಶಾಲೆ!

Published On - 12:12 pm, Sun, 17 April 22