ಕೋಟಿ ಕೋಟಿ ಹಣವಿದ್ರೂ ಕನ್ನಡ ಭಾಷೆ ಅಭಿವೃದ್ಧಿಗೆ ಗ್ರಹಣ!

|

Updated on: Jan 26, 2020 | 4:27 PM

ರಾಯಚೂರು: ಕನ್ನಡ ಭಾಷೆ ಅಭಿವೃದ್ದಿಗೆ ಸರ್ಕಾರ ಕೋಟಿ ಕೋಟಿಗಟ್ಟಲೇ ಹಣದ ಹೊಳೆನೆ ಹರಿಸುತ್ತಿದೆ. ಅದರಲ್ಲೂ ಪ್ರತಿ ವರ್ಷವೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಕನ್ನಡ ಭಾಷೆಯನ್ನ ಉತ್ತೇಜಿಸಲು ಹತ್ತಾರು ಸಾಹಿತ್ಯ ಸಮ್ಮೇಳನಗಳನ್ನ ನಡೆಸಲಾಗ್ತಿದೆ. ಆದ್ರೆ ಇದಕ್ಕೆ ನೀಡುವ ಬಹುಪಾಲು ಹಣ ಸದ್ಬಳಕೆಯಾಗ್ತಿಲ್ಲ. ಕನ್ನಡ ಭಾಷೆ ಅಭಿವೃದ್ಧಿಗೆ ನಿರ್ಲಕ್ಷ್ಯ! ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತೆ. ಅಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ತಕ್ಕಂತೆ ಸರ್ಕಾರ ಕನ್ನಡ ಭಾಷೆಯ ಅಭಿವೃದ್ದಿಗೆ ಮತ್ತು ಪ್ರಚಾರಕ್ಕೆ ಕೋಟಿ ಕೋಟಿ ಹಣದ ಹೊಳೆನೆ ಹರಿಸುತ್ತೆ. ಆದ್ರೆ […]

ಕೋಟಿ ಕೋಟಿ ಹಣವಿದ್ರೂ ಕನ್ನಡ ಭಾಷೆ ಅಭಿವೃದ್ಧಿಗೆ ಗ್ರಹಣ!
Follow us on

ರಾಯಚೂರು: ಕನ್ನಡ ಭಾಷೆ ಅಭಿವೃದ್ದಿಗೆ ಸರ್ಕಾರ ಕೋಟಿ ಕೋಟಿಗಟ್ಟಲೇ ಹಣದ ಹೊಳೆನೆ ಹರಿಸುತ್ತಿದೆ. ಅದರಲ್ಲೂ ಪ್ರತಿ ವರ್ಷವೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಕನ್ನಡ ಭಾಷೆಯನ್ನ ಉತ್ತೇಜಿಸಲು ಹತ್ತಾರು ಸಾಹಿತ್ಯ ಸಮ್ಮೇಳನಗಳನ್ನ ನಡೆಸಲಾಗ್ತಿದೆ. ಆದ್ರೆ ಇದಕ್ಕೆ ನೀಡುವ ಬಹುಪಾಲು ಹಣ ಸದ್ಬಳಕೆಯಾಗ್ತಿಲ್ಲ.

ಕನ್ನಡ ಭಾಷೆ ಅಭಿವೃದ್ಧಿಗೆ ನಿರ್ಲಕ್ಷ್ಯ!
ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತೆ. ಅಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ತಕ್ಕಂತೆ ಸರ್ಕಾರ ಕನ್ನಡ ಭಾಷೆಯ ಅಭಿವೃದ್ದಿಗೆ ಮತ್ತು ಪ್ರಚಾರಕ್ಕೆ ಕೋಟಿ ಕೋಟಿ ಹಣದ ಹೊಳೆನೆ ಹರಿಸುತ್ತೆ. ಆದ್ರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಲಕ್ಷ್ಯದಿಂದ ಸರ್ಕಾರ ನೀಡುವ ಕೋಟ್ಯಂತರ ಹಣ ಸದ್ಬಳಕೆಯಾಗುತ್ತಿಲ್ಲ. ಬದಲಾಗಿ ಅದು ಬ್ಯಾಂಕ್​ನಲ್ಲಿ ಫಿಕ್ಸ್ ಡೆಪಾಸಿಟ್ ಮಾಡಿ ಕೂಡಿಟ್ಟ ಸಂಗತಿ ದಾಖಲೆಯಿಂದ ಬಯಲಾಗಿದೆ.

‘ಅಕ್ರಮ’ ಠೇವಣಿ
ಕಳೆದ 1997 ರಿಂದ 2016ನೇ ಸಾಲಿನವರೆಗೂ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್​ಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 38 ಕೋಟಿ ರೂಪಾಯಿ ಅನುದಾನ ನೀಡಿತ್ತು. 2016ನೇ ಸಾಲಿನಲ್ಲಿ ರಾಯಚೂರಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಮೇಲೆ 6 ಕೋಟಿ ರೂಪಾಯಿ ಅನುದಾನ ಉಳಿದಿತ್ತು. ಈ ಹಣವನ್ನ ಸಾಹಿತ್ಯ ಪರಿಷತ್ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಗೆ ಬಳಸಬೇಕಿತ್ತು. ಆದ್ರೆ ಈ ಪೈಕಿ 4 ಕೋಟಿ 19 ಲಕ್ಷ ರೂಪಾಯಿ ಅನುದಾನವನ್ನ ಕಾನೂನುಬಾಹಿರವಾಗಿ ಬ್ಯಾಂಕನಲ್ಲಿ ನಿಶ್ಚಿತ ಠೇವಣಿ ಇಟ್ಟಿರೋದು ದಾಖಲೆಯಿಂದ ಬಯಲಾಗಿದೆ. ಇದ್ರಿಂದಾಗಿ ಕನ್ನಡ ಭಾಷೆ ಅಭಿವೃದ್ದಿಯ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಭಾರಿ ಹಿನ್ನಡೆಯಾಗಿದೆ.

ಇದೆ ರೀತಿ ಕನ್ನಡ ಪುಸ್ತಕ ಪ್ರಾಧಿಕಾರವು ಕಳೆದ 27 ವರ್ಷದಿಂದ 24 ಕೋಟಿ ವೆಚ್ಚದಲ್ಲಿ ಮುದ್ರಿಸಿದ ಕನ್ನಡ ಪುಸ್ತಕಗಳ ಬಗ್ಗೆ ಇಂದಿಗೂ ಹಣ ಬಳಕೆ ಪ್ರಮಾಣ ಪತ್ರ ನೀಡದೇ ಇರೋದರ ಸುತ್ತ ಅನುಮಾನದ ಹುತ್ತ ಬೆಳೆದು ನಿಂತಿದೆ. ಇಷ್ಟೆಲ್ಲಾ ಅಕ್ರಮ ನಡೆದ್ರೂ ಸರ್ಕಾರ ಇಂದಿಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಾವೊಬ್ಬ ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳದೇ ವಿರೋದು ಸಾಹಿತಿಗಳಲ್ಲಿ ಆಕ್ರೋಶ ಮೂಡಿಸಿದೆ.

ಒಟ್ನಲ್ಲಿ, ರಾಜ್ಯದೆಲ್ಲೆಡೆ ಕನ್ನಡ ಭಾಷೆಯ ಅಭಿವೃದ್ದಿಗೆ ಸರ್ಕಾರ ಎಷ್ಟೇ ತಿಪ್ಪರಲಾಗ ಹಾಕಿದ್ರೂ ಇಲಾಖೆಯ ಅಧಿಕಾರಿಗಳ ಹಣದಾಸೆಗೆ ಕನ್ನಡ ಭಾಷೆಯ ಉತ್ತೇಜನ ಹಳ್ಳ ಹಿಡಿಯುತ್ತಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಭಾಷೆಯ ಅಭಿವೃದ್ದಿಗೆ ಸಂಚಕಾರವೊಡ್ಡುತ್ತಿರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಬೇಕಿದೆ.