ಕೆಂಪು ತೊಗರಿಗೆ ವಿದೇಶದಲ್ಲೂ ಡಿಮ್ಯಾಂಡ್: ಕಲ್ಯಾಣ ಕರ್ನಾಟಕ ರೈತರ ಮೊಗದಲ್ಲಿ ಮಂದಹಾಸ

ರಾಯಚೂರು: ಕೆಂಪು ತೊಗರಿ.. ಕರುನಾಡ ಜನರ ಪಂಚಪ್ರಾಣ. ಇದರ ಸಾಂಬಾರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಇಂಥ ಕೆಂಪು ತೊಗರಿಯನ್ನ ಕಲಬುರಗಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತೆ. ಇಂಥ ತೊಗರಿಗೆ ಈಗಾಗಲೇ ದೇಶಾದ್ಯಂತ ಭಾರಿ ಡಿಮ್ಯಾಂಡ್ ಇದೆ. ಪ್ರತಿವರ್ಷ ಸಾವಿರಾರು ಟನ್​ನಷ್ಟು ತೊಗರಿ ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ನಡುವೆಯೇ ಕೆಂಪು ತೊಗರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ವಿದೇಶಕ್ಕೆ ರಫ್ತು ಮಾಡಲು ಪ್ಲ್ಯಾನ್: ಈ ಹಿನ್ನೆಲೆಯಲ್ಲಿ ತೊಗರಿಯನ್ನ ವಿದೇಶಕ್ಕೆ ರಫ್ತು ಮಾಡಲು […]

ಕೆಂಪು ತೊಗರಿಗೆ ವಿದೇಶದಲ್ಲೂ ಡಿಮ್ಯಾಂಡ್: ಕಲ್ಯಾಣ ಕರ್ನಾಟಕ ರೈತರ ಮೊಗದಲ್ಲಿ ಮಂದಹಾಸ
ಸಾಧು ಶ್ರೀನಾಥ್​

Updated on: Jan 24, 2020 | 8:17 PM

ರಾಯಚೂರು: ಕೆಂಪು ತೊಗರಿ.. ಕರುನಾಡ ಜನರ ಪಂಚಪ್ರಾಣ. ಇದರ ಸಾಂಬಾರ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಇಂಥ ಕೆಂಪು ತೊಗರಿಯನ್ನ ಕಲಬುರಗಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತೆ. ಇಂಥ ತೊಗರಿಗೆ ಈಗಾಗಲೇ ದೇಶಾದ್ಯಂತ ಭಾರಿ ಡಿಮ್ಯಾಂಡ್ ಇದೆ. ಪ್ರತಿವರ್ಷ ಸಾವಿರಾರು ಟನ್​ನಷ್ಟು ತೊಗರಿ ದೇಶದ ವಿವಿಧ ರಾಜ್ಯಗಳಿಗೆ ಸರಬರಾಜು ಆಗುತ್ತಿದೆ. ಇದರ ನಡುವೆಯೇ ಕೆಂಪು ತೊಗರಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ.

ವಿದೇಶಕ್ಕೆ ರಫ್ತು ಮಾಡಲು ಪ್ಲ್ಯಾನ್:
ಈ ಹಿನ್ನೆಲೆಯಲ್ಲಿ ತೊಗರಿಯನ್ನ ವಿದೇಶಕ್ಕೆ ರಫ್ತು ಮಾಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ಲ್ಯಾನ್ ಮಾಡ್ತಿದೆ. ಮೊದಲ ಹಂತದಲ್ಲಿ 100 ಟನ್ ತೊಗರಿಯನ್ನ ವಿದೇಶಕ್ಕೆ ಪೂರೈಸಲು ಭರದ ಸಿದ್ಧತೆ ನಡೀತಿದೆ. ಕಲ್ಯಾಣ ಕರ್ನಾಟಕದಲ್ಲಿ ಬೆಳೆಯೋ ತೊಗರಿಯನ್ನ ಆರು ಜಿಲ್ಲೆಗಳ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ಖರೀದಿಸುತ್ತಿವೆ. ಪ್ರಸಕ್ತ ವರ್ಷವೂ ಪ್ರತಿ ಕ್ವಿಂಟಾಲ್​ಗೆ 6,100 ರೂಪಾಯಿಯಂತೆ ಖರೀದಿಸಲಾಗುತ್ತಿದೆ.

ಕೆಂಪು ತೊಗರಿಗೆ ವಿದೇಶದಲ್ಲೂ ಡಿಮ್ಯಾಂಡ್:
ಇದೀಗ ಅಂತಾರಾಷ್ಟ್ರೀಯ ಮಾನ್ಯತೆ ಕೂಡ ಸಿಕ್ಕಿರೋದ್ರಿಂದ ಕೆಂಪು ತೊಗರಿಗೆ ಇನ್ಮುಂದೆ ವಿದೇಶದಲ್ಲೂ ಡಿಮ್ಯಾಂಡ್ ಸೃಷ್ಟಿಯಾಗಲಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಗಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಒಟ್ನಲ್ಲಿ, ಪ್ರತಿ ವರ್ಷ ಕೇವಲ ಸರ್ಕಾರ ಘೋಷಿಸಿದ ಬೆಂಬಲ ಬೆಲೆಗೆ ತೊಗರಿ ಮಾರಾಟ ಮಾಡ್ತಿದ್ದ ರೈತರೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೊಗರಿ ಮಾರಾಟ ಆಗೋದ್ರಿಂದ ಹೆಚ್ಚಿನ ಲಾಭ ನಿರೀಕ್ಷಿಸುವಂತಾಗಿದೆ. ಕೃಷಿ ವಿವಿಯ ಈ ಪ್ರಯತ್ನ ಸಕ್ಸಸ್ ಆದ್ರೆ ಕಲ್ಯಾಣ ಕರ್ನಾಟಕ ಭಾಗದ ತೊಗರಿಗೆ ಭಾರಿ ಬೇಡಿಕೆ ಬಂದು ಬೆಳೆಗಾರರಿಗೆ ಬಂಪರ್ ಬೆಲೆ ಸಿಗೋದ್ರಲ್ಲಿ ನೋ ಡೌಟ್.







Published On - 12:56 pm, Fri, 24 January 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us