ರಾಯಚೂರು: ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ (Lokayukta raid) ಮಾಡಿದ್ದು, ರೆಡ್ ಹ್ಯಾಂಡ್ ಆಗಿ ನಾಲ್ಕು ಜನ ನೀರಾವರಿ ಇಲಾಖೆ ಅಧಿಕಾರಿಗಳು ಸಿಕ್ಕಿಬಿದಿದ್ದಾರೆ. ಬಿಲ್ ಕ್ಲಿಯರ್ ಮಾಡಲು 5-10 ಸಾವಿರ ರೂ. ಲಂಚ ಸ್ವೀಕರಿಸಲಾಗಿದೆ. ಬಳ್ಳಾರಿ ಮೂಲದ ಗುತ್ತಿಗೆದಾರ ಈಶ್ವರಯ್ಯ ನೀಡಿದ ದೂರಿನನ್ವಯ ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಇಂಜಿನಿಯರ್ಸ್ ಸಿಕ್ಕಿಬಿದಿದ್ದಾರೆ. ಸದ್ಯ ನಾಲ್ಕು ಇಂಜಿನಿಯರ್ಸ್ಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿಗಳ ಮನೆ ಮೇಲೆ ಇಡಿ ರೇಡ್
ಬೆಂಗಳೂರು: ರಾಜ್ಯದಲ್ಲಿ ನಡೆದ 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ (PSI recruitment scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ ED raid) ತನಿಖೆಗೆ ಇಳಿದಿದೆ. ಹಗರಣದ ಪ್ರಮುಖ ಆರೋಪಿಗಳ ಮನೆ ಮೇಲೆ ಇ.ಡಿ ಅಧಿಕಾರಿಗಳು ಇಂದು ರೇಡ್ ಮಾಡಿದ್ದಾರೆ. ADGP ಅಮೃತ್ ಪಾಲ್ ಹಾಗೂ DYSP ಶಾಂತಕುಮಾರ್ ಮನೆ ಮೇಲೆ ದಾಳಿಗಳು ನಡೆದಿವೆ.
ಅಕ್ರಮ ಹಣ ವರ್ಗಾವಣೆ (ಮನಿ ಲ್ಯಾಂಡ್ರಿಂಗ್ –Money Laundering) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅದರಂತೆ ಇಡಿ ಅಧಿಕಾರಿಗಳು ಇಂದು 11 ಕಡೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಇಡಿ ಅಧಿಕಾರಿಗಳ ತಂಡವು ಸಹಕಾರನಗರದ ಅಮೃತ್ ಪಾಲ್ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಇನ್ನು ಶಾಂತಕುಮಾರ್ ಮನೆ ಪೊಲೀಸ್ ಕ್ವಾರ್ಟರ್ಸ್ ನಲ್ಲಿದೆ. ಮನೆ ಬಾಗಿಲ ಮೇಲೆ ಶಾಂತಕುಮಾರ್ ಎಂಬ ನಾಮಫಲಕವಿದೆ. ಮಾಧ್ಯಮದವ್ರು ಅದನ್ನು ಚಿತ್ರೀಕರಿಸ್ತಿದ್ದಂತೆ ಕುಟುಂಬಸ್ಥರು ಕರ್ಚೀಫ್ ಮತ್ತು ಟವಲ್ ನಿಂದ ನಾಮಫಲಕ ಮುಚ್ಚಿದರು. PSI ನೇಮಕಾತಿ ಹಗರಣದಲ್ಲಿ ಸದ್ಯ ಅಮೃತ್ ಪಾಲ್ ಮತ್ತು ಶಾಂತಕುಮಾರ್ ಜೈಲಿನಲ್ಲಿ ವಾಸವಾಗಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಕಳೆದ ಆಗಸ್ಟ್ ನಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೊಬ್ಬ ಆರೋಪಿ ಶ್ರೀಧರ್ ಮನೆಯಲ್ಲಿ 1.5 ಕೋಟಿ ಹಣ ಪತ್ತೆಯಾಗಿತ್ತು. ಇದುವರೆಗೆ ಪ್ರಕರಣ ಸಂಬಂಧ 4 ಕೋಟಿಗೂ ಹೆಚ್ಚು ಹಣ ವಶಕ್ಕೆ ಪಡೆಯಲಾಗಿತ್ತು. ಇ.ಡಿ ಅಧಿಕಾರಿಗಳು ಮನಿ ಲ್ಯಾಂಡ್ರಿಂಗ್ ಕೇಸ್ ಸಂಬಂಧಿಸಿದಂತೆ ಐದು ಗಂಟೆಗಳಿಂದ ನಿರಂತರವಾಗಿ ಬ್ಯಾಂಕ್ ದಾಖಲೆಗಳ ಪರಿಶೀಲನೆ ನಡೆಸ್ತಿದ್ದಾರೆ. ಐವರು ಇ.ಡಿ. ಅಧಿಕಾರಿಗಳ ತಂಡದಿಂದ ದಾಳಿ, ಪರಿಶೀಲನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:30 pm, Thu, 10 November 22