ತುಮಕೂರಿನಲ್ಲಿ ಕಲುಷಿತ ನೀರು ಸೇವನೆ! 20 ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ

ಗ್ರಾಮಕ್ಕೆ ಸರಬರಾಜು ಆಗುವ ಓವರ್ ಟ್ಯಾಂಕ್​ನಲ್ಲಿ ಕಲುಷಿತ ನೀರು ಸೇರಿದೆ ಎಂಬ ಅನುಮಾನ ಮೂಡಿದೆ. ಗ್ರಾಮದಲ್ಲಿ ನೀರು ಸರಬರಾಜು ಆಗುವ ಪೈಪ್ ಲೈನ್ ಒಡೆದು ಹೋಗಿದೆ.

ತುಮಕೂರಿನಲ್ಲಿ ಕಲುಷಿತ ನೀರು ಸೇವನೆ! 20 ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ
ಅಸ್ವಸ್ಥರಾಗಿರುವ ಜನರು ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
Edited By:

Updated on: Mar 06, 2022 | 8:55 AM

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗದ್ದಿಗೇರಹಟ್ಟಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮಂದಿಗೆ ವಾಂತಿ, ಭೇದಿ ಶುರುವಾಗಿದ್ದು, ಕಲುಷಿತ ನೀರು (Contaminated water) ಸೇವಿಸಿದ್ದರಿಂದ ಅಸ್ವಸ್ಥರಾಗಿದ್ದಾರೆ ಎಂಬ ಶಂಕೆ ಮೂಡಿದೆ. ಗ್ರಾಮಕ್ಕೆ ಸರಬರಾಜು ಆಗುವ ಓವರ್ ಟ್ಯಾಂಕ್​ನಲ್ಲಿ ಕಲುಷಿತ ನೀರು ಸೇರಿದೆ ಎಂಬ ಅನುಮಾನ ಮೂಡಿದೆ. ಗ್ರಾಮದಲ್ಲಿ ನೀರು ಸರಬರಾಜು ಆಗುವ ಪೈಪ್ ಲೈನ್ (Pipe Line) ಒಡೆದು ಹೋಗಿದ್ದು, ಸರಿಪಡಿಸದೇ ಇರುವುದರಿಂದ ಕಲುಷಿತ ನೀರು ಸೇರಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ವೈದ್ಯರು ಗ್ರಾಮದಲ್ಲಿ ಮೂರು ದಿನಗಳಿಂದ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಹಿಂದೆ ಹಾಸ್ಟೆಲ್​ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿರುವ ವಸತಿ ನಿಲಯದಲ್ಲಿ ನಡೆದಿತ್ತು. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರ ಹಾಸ್ಟೆಲ್​ನಲ್ಲಿ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರು. ಈ ಪೈಕಿ 10 ವಿದ್ಯಾರ್ಥಿನಿಯರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಕಿಟಕಿ ರಾಡ್ ಮುರಿದು ಮನೆಯಲ್ಲಿ ಕಳ್ಳತನ:
ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಕಿಟಕಿ ರಾಡ್ ಮುರಿದು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ನಾರಯಣಪ್ಪ ಅವರಿಗೆ ಸೇರಿದ ಮನೆಯಲ್ಲಿ ಕೃತ್ಯ ನಡೆದಿದೆ. 2 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಕಳವಾಗಿದೆ. ತುಮಕೂರಿನ ಸಂಬಂಧಿ ಮನೆಗೆ ತೆರಳಿ ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ತೆರೆಯ ಮುಂದೆ ಬಣ್ಣ ಬಣ್ಣದ ಲೋಕ, ಆದರೆ ತೆರೆಯ ಹಿಂದೆ ಜೀವನದ ನಗ್ನ ಸತ್ಯ : ಪಲ್ಲವಿ ಗೌಡ

ಬೆಂಗಳೂರಿನ ಬಾಗಮನೆ ಟೆಕ್​ಪಾರ್ಕ್​ನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಸಾಫ್ಟ್​ವೇರ್ ಕಂಪನಿ ಕಚೇರಿ