ರಾಯಚೂರು: ನಗರದ ರಸ್ತೆಗಳಲ್ಲಿ ಕಸ ಹೆಚ್ಚಾಗಿದೆ. ರಾಯಚೂರು ನಗರ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಗೊಂಡಿದೆ. ಆದರೂ ಕಸ ವಿಲೇವಾರಿಗೆ ನಗರಸಭೆ ಮಾತ್ರ ಮುಂದಾಗಿಲ್ಲ. ಆದ್ರೆ ರಾಯಚೂರು ನಗರದ ಒಂದು ರಸ್ತೆ ಮಾತ್ರ ಫುಲ್ ಕ್ಲೀನ್ ಆಗಿದೆ.
ರಾಯಚೂರು ನಗರದಾದ್ಯಂತ ಕಸ ವಿಲೇವಾರಿ ಮಾಡಿಲ್ಲ. ರಾಯಚೂರಿನ ಎಲ್ಲ ರಸ್ತೆಗಳು ಕಸಮಯವಾಗಿದೆ. ಆದ್ರೆ ಒಂದೇ ಒಂದು ರಸ್ತೆ ಮಾತ್ರ ಸ್ವಚ್ಛ ಮಾಡಲಾಗಿದೆ. ಹೀಗಾಗಿ ನಗರಸಭೆ, ಜಿಲ್ಲಾಡಳಿತದ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 29ಕ್ಕೆ ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ರಾಯಚೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಂಚರಿಸುವ ರಸ್ತೆ ಮಾತ್ರ ಕ್ಲೀನಿಂಗ್ ಮಾಡಲಾಗಿದೆ. ಉಳಿದಂತೆ ಎಲ್ಲಾ ರಸ್ತೆಗಳು ಕಸಮಯವಾಗಿವೆ. ರಸ್ತೆಗಳು ಕಸಮಯವಾಗಿರುವ ಹಿನ್ನೆಲೆ ರೋಗ ಹರಡುವ ಆತಂಕ ಜನರನ್ನು ಕಾಡುತ್ತಿದೆ.
ರಸ್ತೆಗಳಲ್ಲಿ ಬಿದ್ದಿರುವ ಕಸವನ್ನು ವಿಲೆವಾರಿ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆ. ರಾಯಚೂರು ನಗರದಾದ್ಯಂತ ಬಹುತೇಕ ಕಡೆ ಕಸದ ಸಮಸ್ಯೆ ಇದೆ. ರಾಯಚೂರು ಕೃಷಿ ವಿವಿ 11 ನೇ ಘಟಿಕೋತ್ಸವ ಉದ್ಘಾಟನೆಗೆ ರಾಜ್ಯಪಾಲರು ಆಗಮಿಸುತ್ತಿರುವುದರಿಂದ ಮುಖ್ಯ ರಸ್ತೆಯಲ್ಲಿ ಮಾತ್ರ ಕಸ ಕಾಣದಂತೆ ರಸ್ತೆ ಬದಿಗಳ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ನಗರ ಸಭೆ & ಜಿಲ್ಲಾಡಳಿತದಿಂದ ಕಸದ ಸಮಸ್ಯೆ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ರಾಯಚೂರು ಮತ್ತು ಲಿಂಗಸೂರು ಮಾರ್ಗದ ರಸ್ತೆ ಮಾತ್ರ ಕ್ಲೀನಿಂಗ್ ಮಾಡಲಾಗಿದ್ದು ಜನರ ಆರೋಗ್ಯ ದೃಷ್ಟಿಯಿಂದ ಸ್ವಚ್ಛತಾ ಕಾರ್ಯ ಮಾಡದ ನಗರ ಸಭೆ ಸಮಸ್ಯೆ ಕಾಣದಂತೆ ಮುಚ್ಚಿ ಹಾಕಲು ದೊಡ್ಡವರ ಕಣ್ಣೊರೆಸುವ ತಂತ್ರ ಮಾಡ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೊವಿಡ್ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಿದ ಬಿಎಂಆರ್ಸಿಎಲ್; ಮೆಟ್ರೋದಲ್ಲಿ ಓಡಾಟಕ್ಕೆ ಮಾಸ್ಕ್ ಕಡ್ಡಾಯ