ರಾಯಚೂರು: ಬಿಜೆಪಿ ಶಾಸಕರೊಬ್ಬರು ತಮ್ಮ ಪಕ್ಷದ ನಾಯಕ, ಪ್ರಧಾನಿ ನರೇಂದ್ರ ಮೋದಿ(Narendra Modi) ವಿರುದ್ಧವೇ ಕೀಳು ಮಟ್ಟದ ಮಾತುಗಳನ್ನಾಡಿರುವ ಆರೋಪ ಕೇಳಿಬಂದಿದೆ. ಮೋದಿನೂ ಇಲ್ಲ ಯಾರೂ ಇಲ್ಲ, ನಾನು ಸಿಂಗಲ್ ಮ್ಯಾನ್ ಅಂತೆಲ್ಲಾ ಮಾತನಾಡಿರುವ ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್(Dr Shivaraj Patil) ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಕಾರ್ಯಕ್ರಮವೊಂದರ ಸಂಬಂಧ ಮಾತನಾಡಿದ್ದು ಎನ್ನಲಾದ ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋ ಇದಾಗಿದೆ. ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆಯೂ ಉಡಾಫೆ ಮಾತುಗಳನ್ನಾಡಿದ್ದಾರೆ. ಇದೀಗ ಚುನಾವಣೆ ಹೊತ್ತಲ್ಲೇ ಸ್ಫೋಟಗೊಂಡಿದ್ದು, ಭಾರೀ ಸಂಚಲನ ಮೂಡಿಸಿದೆ. ಹಾಗಾದ್ರೆ, ಆಡಿಯೋನಲ್ಲಿ ಏನೆಲ್ಲ ಮಾತನಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಯಾವ ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ಮೋದಿ ರೈಟ್ ಹ್ಯಾಂಡ್ ಗೆ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು ನಾನೇ ಮೋದಿ,ನಾನೇ ಟ್ರಂಪ್..ಯಾವನ ಬದನೆಕಾಯಿ ಮಾತು ಸಹ ನಾನು ಕೇಳಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ಲೀಡರ್ ಗಳಿಗೆ ಬಾ ಅಂತೀನಾ..? ನನಗೆ ಯಾರೂ ಇಲ್ಲ..ನಾನು ಸಿಂಗಲ್ ಆರ್ಮಿ. ಎಲೆಕ್ಷನ್ ನಲ್ಲಿ ಸೋತರು ಚಿಂತೆಯಿಲ್ಲ,ಗೆದ್ರು ಚಿಂತೆಯಿಲ್ಲ,ಮಲಗಿದರು ಚಿಂತೆಯಿಲ್ಲ.. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ,ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ..ನಾನೇ ದೈವ ಬರಿತೀನಿ ಎಂದು ಮಾತುಗಳನ್ನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ.
ಚುನಾವಣೆ ಹೊಸ್ತಿಲಲ್ಲೇ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಬಾರೀ ಸಂಚಲನ ಮೂಡಿಸಿದೆ. ಆದ್ರೆ, ಈ ಬಗ್ಗೆ ಶಿವರಾಜ್ ಪಾಟೀಲ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಯಚೂರು ಜಿಲ್ಲೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:44 am, Fri, 31 March 23