ಪುರಾತತ್ವ ಜಾಗದಲ್ಲಿ‌ ಮಸೀದಿ ಕಮಾನ್ ನಿರ್ಮಾಣಕ್ಕೆ ಬಿಜೆಪಿ ವಿರೋಧ; ಉದ್ವಿಗ್ನ ವಾತಾವರಣ ನಿರ್ಮಾಣ; ಪೊಲೀಸ್​ ಭದ್ರತೆ

| Updated By: ವಿವೇಕ ಬಿರಾದಾರ

Updated on: Nov 30, 2023 | 2:59 PM

ರಾಯಚೂರು ನಗರದ ತೀನ್ ಕಂದೀಲ್ ಬಳಿ ಹಜರತ್ ಸೈಯದ್ ಶಾಹ ಅಲ್ಲಾವುದ್ದೀನ್ ದರ್ಗಾದ ಕಮಾನ್ ನಿರ್ಮಾಣವಾಗುತ್ತಿದೆ. ಇದು ಪುರಾತತ್ವ ಇಲಾಖೆ ಜಾಗವಾಗಿದ್ದು, ಇಲ್ಲಿ ಕಮಾನ್​ ನಿರ್ಮಾಣಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪುರಾತತ್ವ ಜಾಗದಲ್ಲಿ‌ ಮಸೀದಿ ಕಮಾನ್ ನಿರ್ಮಾಣಕ್ಕೆ ಬಿಜೆಪಿ ವಿರೋಧ; ಉದ್ವಿಗ್ನ ವಾತಾವರಣ ನಿರ್ಮಾಣ; ಪೊಲೀಸ್​ ಭದ್ರತೆ
ಕಮಾನ್​ ನಿರ್ಮಾಣಕ್ಕೆ ವಿರೋಧ
Follow us on

ರಾಯಚೂರು ನ.30: ಪುರಾತತ್ವ ಇಲಾಖೆ ಜಾಗದಲ್ಲಿ‌ ಮಸೀದಿ ಕಮಾನ್ (Mosque Kaman) ನಿರ್ಮಾಣಕ್ಕೆ ಬಿಜೆಪಿ ನಿಯೋಗ ವಿರೋಧ ವ್ಯಕ್ತಪಡಿಸಿದೆ. ರಾಯಚೂರು (Raichur) ನಗರದ ತೀನ್ ಕಂದೀಲ್ ಬಳಿ ಸಂರಕ್ಷಿತ ಸ್ಮಾರಕದ 100 ಮೀ ಅಂತರದಲ್ಲಿ ಹಜರತ್ ಸೈಯದ್ ಶಾಹ ಅಲ್ಲಾವುದ್ದೀನ್ ದರ್ಗಾದ ಕಮಾನ್ ನಿರ್ಮಾಣವಾಗುತ್ತಿದೆ. ಇದು ಪುರಾತತ್ವ ಇಲಾಖೆ (Archaeology Department) ಜಾಗವಾಗಿದ್ದು, ಇಲ್ಲಿ ಕಮಾನ್​ ನಿರ್ಮಾಣಕ್ಕೆ ಬಿಜೆಪಿ (BJP) ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಘೋಷಣೆಗಳು ಮೊಳಗಿದವು. ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರವಾಗಿ ಬಿಜೆಪಿ ನಿಯೋಗ ರಾಯಚೂರು ನಗರಸಭೆ ಕಮಿಷನರ್ ಸಿದ್ದಯ್ಯಸ್ವಾಮಿ ಅವರನ್ನು ಭೇಟಿ ಮಾಡಿ ಕೂಡಲೇ ಕ್ರಮಕೈಗೊಳ್ಳುವಂತೆ ಪಟ್ಟು ಹಿಡಿಯಿತು. ಕಾಮಗಾರಿ ತಡೆಹಿಡಿಯುವಂತೆ ಬಿಜೆಪಿ ನಾಯಕರು ಒತ್ತಾಯಿಸಿತು.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಮತ್ತೆ ಪೂಜೆ: ಗಂಗಾವತಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಬಿಜೆಪಿ ನಾಯಕರು ನಗರಸಭೆಗೆ ಭೇಟಿ ನೀಡುತ್ತಿದ್ದಂತೆ ಮುಸ್ಲೀಂ‌ ಸಮುದಾಯದ ಮುಖಂಡರು ಕೂಡ ದೌಡಾಯಿಸಿದರು. ನಗರಸಭೆಯಲ್ಲಿ ಕೆಲ ಕಾಲ ಚರ್ಚೆ ನಡೆಯಿತು. ಕಮಾನ್​ ನಿರ್ಮಾಣಕ್ಕೆ ನಗರಸಭೆ ಅನುಮತಿ ನೀಡಿದ್ದು, ಪುರಾತತ್ವ ಸ್ಥಳದಲ್ಲಿ ಕಾಮಗಾರಿ ನಡೆಸಲು ಹೇಗೆ ಅನುಮತಿ ನೀಡಿದಿರಿ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಕಮಾನ್ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭದ್ರೆತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ