ಇದು ನಿಜವಾ? ವಿಆರ್​​ಎಸ್ ತಗೊಂಡು ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ಕೈಜೋಡಿಸ್ತಿದಾರಾ ರಾಯಚೂರು ಪೊಲೀಸರು? ​

| Updated By: ಸಾಧು ಶ್ರೀನಾಥ್​

Updated on: Jun 30, 2023 | 12:25 PM

ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮವಾಗ್ತಿದೆ. ಮಟ್ಕಾ ಹಾಗು ಸ್ಯಾಂಡ್ ಮಾಫಿಯಾದ 27 ಜನರನ್ನ ಗಡಿಪಾರು ಮಾಡಲಾಗಿದೆ. ಇನ್ನು ಶಾಸಕ ಬಸನಗೌಡ ಅವರು ಹೇಳಿದಂತೆ ವಾಲಂಟರಿ ರಿಟೈರ್ಡ್​ ಮೆಂಟ್ ಸಿಬ್ಬಂದಿ ಬಗ್ಗೆ ತನಿಖೆ ನಡೆಸಲಾಗುತ್ತೆ ಅಂತ ರಾಯಚೂರು ಎಸ್​ಪಿ ನಿಖಿಲ್ ಪ್ರತಿಕ್ರಿಯಿಸಿದ್ದಾರೆ.

ಬಿಸಿಲುನಾಡು ರಾಯಚೂರಿನಲ್ಲಿ ಇಡೀ ವ್ಯವಸ್ಥೆ ವಿರುದ್ಧವೇ ಅಕ್ರಮ ಮರಳು ದಂಧೆಕೋರರು (sand mafia) ತೊಡೆತಟ್ಟಿದ್ದಾರೆ. ಸ್ಯಾಂಡ್ ಮಾಫಿಯಾ ಬಗ್ಗೆ ಬೆಚ್ಚಿಬೀಳಿಸೊ ಸತ್ಯ ಬಿಚ್ಚಿಟ್ಟಿರೊ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್, ವಾಲಂಟರಿ ರಿಟೈರ್ಡ್​ಮೆಂಟ್ ಆಗಿರೊ ಕೆಲ ಪೊಲೀಸ್ ಸಿಬ್ಬಂದಿಯೇ (Retired police) ದಂಧೆಯಲ್ಲಿ ಭಾಗಿಯಾಗಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಕಮಿಟಿ ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರೂ ಈ ವರೆಗೆ ಯಾವೊಂದು ಕ್ರಮವಾಗಿಲ್ಲ. ಹೌದು.. ರಾಯಚೂರು ಜಿಲ್ಲೆಯಲ್ಲಿ ಸ್ಯಾಂಡ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದೆ.. ಅದೆಷ್ಟೋ ಹೋರಾಟಗಾರರು ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗ್ತಿಲ್ಲ. ಈ ಮಧ್ಯೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನಲ್ಲಿ ಮರಳು ಮಾಫಿಯಾದ ಜೆಸಿಬಿ ಹರಿದು ಮೂವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಈ ಹಿಂದೆ ಮಾನ್ವಿಯಲ್ಲಿ ಓರ್ವ ಸರ್ಕಾರಿ ಅಧಿಕಾರಿಯನ್ನ ಸ್ಯಾಂಡ್ ಮಾಫಿಯಾ ಮಂದಿ ಕೊಂದು ಹಾಕಿದ್ರು.. ಇಷ್ಟೆಲ್ಲಾ ಸರಣಿ ಅನಾಹುತಗಳಾಗುತ್ತಿದ್ರೂ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ತಡೆಯಲಾಗ್ತಿಲ್ಲ ಅಂತ ಇತ್ತೀಚೆಗೆ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನೇತೃತ್ವದ ಸಭೆಯಲ್ಲಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ ಇದೇ ಸಭೆಯಲ್ಲಿ ಮತ್ತೊಂದು ಬೆಚ್ಚಿ ಬೀಳಿಸೊ ಸತ್ಯವನ್ನೂ ಅವರು ಬಿಚ್ಚಿಟ್ಟಿದ್ರು. ಅಕ್ರಮ ಮರಳು ದಂಧೆಯಲ್ಲಿ ವಾಲಂಟರಿ ರಿಟೈರ್ಡ್ ಮೆಂಟ್ ತೆಗೆದುಕೊಂಡಿರುವ ಕೆಲ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೆಲಸ ಮಾಡಿರೊ ಅನುಭವ ಹೊಂದಿರೊ ಸಿಬ್ಬಂದಿ ವಾಲಂಟರಿ ರಿಟೈರ್ಡ್​ಮೆಂಟ್ ಆಗಿದ್ದಾರೆ. ಅವ್ರು ಐದಾರು ಟಿಪ್ಪರ್​ಗಳನ್ನ ಇಟ್ಟುಕೊಂಡು ಸ್ಯಾಂಡ್ ಮಾಫಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಅವರಿಗೆ ಸ್ಥಳೀಯ ಜನಪ್ರತಿನಿಧಿಯೋ ಅಥವಾ ಐಎಎಸ್ ಅಧಿಕಾರಿಯೇ ಅಡ್ಡಬಂದರೂ ಡೋಂಟ್​ ಕೇರ್​, ಅವರಿಗೂ ನಮಗೂ ಸಂಬಂಧ ಇಲ್ಲ ಅನ್ನೋಷ್ಟು ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಈ ಬಗ್ಗೆ ಕಮಿಟಿ ರಚಿಸಿ ತನಿಖೆ ನಡೆಸಿ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ (raichur rural congress mla basavarj duddal).

ಹೀಗೆ ಉಸ್ತುವಾರಿ ಸಚಿವರ ನೇತೃತ್ವದ ಸಭೆಯಲ್ಲಿ ವಾಲಂಟರಿ ರಿಟೈರ್ಡ್​ಮೆಂಟ್ ಆದ ಪೊಲೀಸ್ ಸಿಬ್ಬಂದಿ ವಿರುದ್ಧ ಶಾಸಕ ದದ್ದಲ್ ಧ್ವನಿ ಎತ್ತಿದ್ರು.. ನಂತ್ರ ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಎಲ್ಲಾ ಅಕ್ರಮ ಚಟುವಟಿಕೆಗಳು ಬಂದ್ ಆಗ್ಬೇಕು ಅಂತ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರು ರಾಯಚೂರು ಎಸ್​ಪಿ ನಿಖಿಲ್​ ಅವ್ರಿಗೆ ಸೂಚಿಸಿದ್ರು. ನಂತ್ರ ವಿವಿಧೆಡೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿಗಳು ಕೂಡ ನಡೆದಿದ್ವು.

ಆದ್ರೆ ಈ ಮಧ್ಯೆ ಸ್ಯಾಂಡ್ ಮಾಫಿಯಾ ಅಡ್ಡೆ ಮೇಲೆ ದೇವದುರ್ಗ ಶಾಸಕಿ ಕರಿಯಮ್ಮ ನಾಯಕ್ ದಾಳಿ ನಡೆಸಿದ್ರು. ಈ ವೇಳೆ ದಂಧೆ ವಿರುದ್ಧ ಹೋರಾಟ ನಡೆಸ್ತಿರೋದಕ್ಕೆ ನನ್ನನ್ನ ಕೊಲ್ಲೊ ಬೆದರಿಕೆಗಳು ಬರ್ತಿವೆ.. ಜೀವ ಬೆದರಿಕೆ ಹಾಕ್ತಿದ್ದಾರೆ ಅಂತ ಖುದ್ದು ಅವರೇ ಹೇಳಿದ್ರು. ಆದ್ರೆ ಸ್ಯಾಂಡ್ ಮಾಫಿಯಾ ಬಗ್ಗೆ ರಾಯಚೂರು ಎಸ್​ಪಿ ನಿಖಿಲ್ ಬಿ ಇಲಾಖೆಯಿಂದ ತೆಗೆದುಕೊಳ್ಳಲಾಗಿರೊ ಕ್ರಮಗಳ ಬಗ್ಗೆ ಹೇಳಿದ್ರು.

ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮವಾಗ್ತಿದೆ. ಮಟ್ಕಾ ಹಾಗು ಸ್ಯಾಂಡ್ ಮಾಫಿಯಾದ 27 ಜನರನ್ನ ಗಡಿಪಾರು ಮಾಡಲಾಗಿದೆ. ನಿತ್ಯ ಈ ಬಗ್ಗೆ ನಿಗಾ ವಹಿಸಲಾಗಿದೆ. ಶಾಸಕರು ಹೇಳಿದಂತೆ ವಾಲಂಟರಿ ರಿಟೈರ್ಡ್​ ಮೆಂಟ್ ಆಗಿರೊ ಸಿಬ್ಬಂದಿ ಬಗ್ಗೆ ತನಿಖೆ ನಡೆಸಲಾಗುತ್ತೆ ಅಂತ ಪ್ರತಿಕ್ರಿಯಿಸಿದ್ರು.

ಇಲ್ಲಿ ಇನ್ನೊಂದು ವಿಷ್ಯ ಇದೆ..ಸ್ಯಾಂಡ್ ಮಾಫಿಯಾ ಹತ್ತಿಕ್ಕೋದು ಕೇವಲ ಪೊಲೀಸ್ ಇಲಾಖೆ ಜವಾಬ್ದಾರಿಯಲ್ಲ. ಜನ ಸಹ ಪೊಲೀಸ್ ಇಲಾಖೆಯಯತ್ತಲೇ ಬೆರಳು ಮಾಡ್ತಾರೆ. ಆದ್ರೆ ಈ ಬಗ್ಗೆ ಮಾನಿಟರ್ ಮಾಡಬೇಕಾದದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜವಾಬ್ದಾರಿ. ಆದ್ರೆ ಇಷ್ಟೆಲ್ಲಾ ಸಂಚಲನ ಸೃಷ್ಟಿಯಾಗಿದ್ರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಸ್ಥಳೀಯ ಶಾಸಕರೇ ತನಿಖೆ ನಡೆಸುವಂತೆ ಸೂಚಿಸಿದರೂ ಈ ವರೆಗೆ ಕಮಿಟಿ ರಚನೆಯಾಗಿಲ್ಲ. ತನಿಖೆ ಕೈಗೊಳ್ಳದೇ ಇರೋದು ದುರಂತ.

ರಾಯಚೂರು ಜಿಲ್ಲಾ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:43 am, Fri, 30 June 23