ಕರ್ನಾಟಕದಲ್ಲಿ ಕೊನೆಗೊಂಡ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ

ಶ್ರೀಶೈಲ ಪೀಠಾಧಿಪತಿ ಡಾ.ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳ ನೇತೃತ್ವದ ಪಾದಯಾತ್ರೆ ರಾಜ್ಯದ ರಾಯಚೂರು ಜಿಲ್ಲೆ ಮೂಲಕ ಕೊನೆಗೊಂಡಿದೆ.

ಕರ್ನಾಟಕದಲ್ಲಿ ಕೊನೆಗೊಂಡ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ
ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ
Edited By:

Updated on: Nov 20, 2022 | 5:01 PM

ರಾಯಚೂರು: ಲೋಕ ಕಲ್ಯಾಣಾರ್ಥವಾಗಿ ಶ್ರೀಶೈಲ ಜಗದ್ಗುರುಗಳು ಯಡೂರದಿಂದ ಶ್ರೀಶೈಲವರೆಗೆ  ಹಮ್ಮಿಕೊಂಡಿರುವ ಪಾದಯಾತ್ರೆ ರಾಜ್ಯದಲ್ಲಿ ಮುಗಿದಿದೆ..ಇನ್ಮುಂದೆ ಶ್ರೀಗಳ ಪಾದಾಯತ್ರೆ ಆಂಧ್ರ ಪ್ರವೇಶಿಸಲಿದೆ.

ಲೋಕ ಕಲ್ಯಾಣಾರ್ಥವಾಗಿ ನಡೆದಿದ್ದ ಈ ಪಾದಯಾತ್ರೆಯು ಯಡಿಯೂರದಿಂದ ಶ್ರೀಶೈಲದ ವರೆಗೆ ಸುಮಾರು‌ 550 ಕಿಮಿ, 33 ದಿನಗಳ ಈ ಯಾತ್ರೆಯು ಇಂದು ರಾಜ್ಯದ ರಾಯಚೂರಿನಲ್ಲಿ ಮುಗಿದಿದೆ. ರಾಯಚೂರು ತಾಲ್ಲೂಕಿನಿಂದ ಬೀಜನಗೇರಾ ಮೂಲಕ ತೆಲಂಗಾಣಕ್ಕೆ ತೆರಳುವ ಶ್ರೀಗಳ ಪಾದಯಾತ್ರೆಯ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಸೇರಿದ್ದರು. ರಾಯಚೂರು ತಾಲ್ಲೂಕಿನ ಭಕ್ತರು, ಸ್ಥಳೀಯ ಜನಪ್ರತಿನಿಧಿಗಳಿಂದ ಲಕ್ಷಾಂತರ ರೂಪಾಯಿ ದೇಣಿಗೆ ರೂಪದಲ್ಲಿ ಹರಿದು ಬರುತ್ತಿದೆ.

ಡಿಸೆಂಬರ್ 1 ರಿಂದ ಧರ್ಮ ಅನುಷ್ಟಾನಕ್ಕಾಗಿ ಎರಡನೇ ಹಂತದ ಪಾದಯಾತ್ರೆ ನಡೆಯಲಿದ್ದು. ರಾಷ್ಟ್ರೀಯ ಧರ್ಮ ಜಾಗೃತಿಯ ಮಹಾ ಸಮ್ಮೇಳನವೂ ಡಿಸೆಂಬರ್ ತಿಂಗಳಿನಲ್ಲಿ ಆಯೋಜನೆ ಮಾಡಲಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:ರಾಯಚೂರು: ಹತ್ತಿಗೆ ಬಂದಿದೆ ಬಂಗಾರದ ಬೆಲೆ, ಆದರೆ ಬೆಳೆ ಕುಸಿತದಿಂದ ರೈತರು ಕಂಗಾಲು

ಮಾರ್ಗ ಮಧ್ಯದಲ್ಲಿ ವಿವಿಧ ಗ್ರಾಮಸ್ಥರಿಂದ ಭಕ್ತರಿಗೆ ಊಟ ಮತ್ತು ತಂಗಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಊರುಗಳಲ್ಲಿಯೂ ಊರಿನ ಗಡಿ ದಾಟುವವರೆಗೂ ಗ್ರಾಮಸ್ಥರು ಪಾದಯಾತ್ರೆಗೆ ಬಂದಿರುವ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಾರೆ. ಅವರಿಗೆ ನಿತ್ಯದ ಊಟೋಪಚಾರ ನಿರ್ವಹಿಸಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ