ಮಗುವಿನ ಜೊತೆಯಿದ್ದ ಮಹಿಳೆಯ ಮೇಲೆ ಟಂಟಂ ಚಾಲಕನಿಂದ ಅತ್ಯಾಚಾರಕ್ಕೆ ಯತ್ನ

| Updated By: ಸಾಧು ಶ್ರೀನಾಥ್​

Updated on: Jan 27, 2021 | 11:38 AM

ಟಂಟಂನಲ್ಲಿ ಮಗುವಿನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪದಲ್ಲಿ ವಾಹನ ನಿಲ್ಲಿಸಿ ಮಗು ಎತ್ತಿಕೊಂಡು ಚಾಲಕ ಜೋಳದ ಹೊಲದತ್ತ ಓಡುತ್ತಾನೆ.

ಮಗುವಿನ ಜೊತೆಯಿದ್ದ ಮಹಿಳೆಯ ಮೇಲೆ ಟಂಟಂ ಚಾಲಕನಿಂದ ಅತ್ಯಾಚಾರಕ್ಕೆ ಯತ್ನ
ಅತ್ಯಾಚಾರಕ್ಕೆ ಯತ್ನಿಸಿದ ಚಾಲಕ
Follow us on

ರಾಯಚೂರು: ಮಗುವಿನೊಂದಿಗೆ ಆಸ್ಪತ್ರೆಗಾಗಿ ಲಿಂಗಸುಗೂರಿಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಟಂಟಂ ವಾಹನ ಚಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಂಟಂನಲ್ಲಿ ಮಗುವಿನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪದಲ್ಲಿ ವಾಹನ ನಿಲ್ಲಿಸಿ ಮಗು ಎತ್ತಿಕೊಂಡು ಚಾಲಕ ಜೋಳದ ಹೊಲದತ್ತ ಓಡಿದ್ದಾನೆ. ತನ್ನ ಮಗುವನ್ನು ರಕ್ಷಿಸಲು ಆತನ ಹಿಂದೆ ಮಹಿಳೆಯೂ ಓಡಿದ್ದಾಳೆ.

ಈ ವೇಳೆ ಮಹಿಳೆಯ ಮೇಲೆ ಚಾಲಕ ಅತ್ಯಾಚಾರ ನಡೆಸಲು ಯತ್ನಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ಜನರು ಮಹಿಳೆಯನ್ನು ರಕ್ಷಣೆ ಮಾಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರಲ್ಲಿ ಹತ್ಯೆ ಮಾಡಿದ್ದವರು ತಮಿಳುನಾಡಿನಲ್ಲಿ ಬಂಧನ!