ರಾಜ್ಯಸಭೆ ಚುನಾವಣೆ: ಮತದಾನದ ವೇಳೆ ಬಸವರಾಜ ರಾಯರೆಡ್ಡಿಗೆ ಗೊಂದಲ; ಯಾರಿಗೆ ಹಾಕಿದರು ವೋಟ್?

| Updated By: Rakesh Nayak Manchi

Updated on: Feb 27, 2024 | 7:28 PM

ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಒಂದು ಸ್ಥಾನವನ್ನು ಬಿಜೆಪಿ ಗೆದ್ದುಕೊಂಡರೆ ಉಳಿದ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್​ಟಿ ಸೋಮಶೇಖರ್ ಕಾಂಗ್ರೆಸ್​ಗೆ ಮತ ಚಲಾಯಿಸಿದ್ದರೆ, ಮತ್ತೊಬ್ಬ ಶಾಸಕ ಶಿವರಾಮ್ ಹೆಬ್ಬಾರ್ ಗೈರಾಗಿದ್ದಾರೆ. ಈ ಬಗ್ಗೆ ಬಿಜೆಪಿ ಕ್ರಮಕ್ಕೆ ಮುಂದಾಗಿದೆ. ಈ ಎಲ್ಲದರ ನಡುವೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ಮತದಾನದ ವೇಳೆ ಗೊಂದಲಕ್ಕೊಳಗಾದ ಸನ್ನಿವೇಶವೂ ನಡೆದಿದೆ.

ರಾಜ್ಯಸಭೆ ಚುನಾವಣೆ: ಮತದಾನದ ವೇಳೆ ಬಸವರಾಜ ರಾಯರೆಡ್ಡಿಗೆ ಗೊಂದಲ; ಯಾರಿಗೆ ಹಾಕಿದರು ವೋಟ್?
ರಾಜ್ಯಸಭೆ ಚುನಾವಣೆ: ಮತದಾನದ ವೇಳೆ ಗೊಂದಲಕ್ಕೊಳಗಾದ ಬಸವರಾಜ ರಾಯರೆಡ್ಡಿ
Follow us on

ಬೆಂಗಳೂರು, ಫೆ.27: ರಾಜ್ಯಸಭೆ ಚುನಾವಣೆ (Rajya Sabha Elections) ಫಲಿತಾಂಶ ಪ್ರಕಟಗೊಂಡಿದ್ದು, ಒಂದು ಸ್ಥಾನವನ್ನು ಬಿಜೆಪಿ (BJP) ಗೆದ್ದುಕೊಂಡರೆ ಉಳಿದ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್​ಟಿ ಸೋಮಶೇಖರ್ ಕಾಂಗ್ರೆಸ್​ಗೆ ಮತ ಚಲಾಯಿಸಿದ್ದರೆ, ಮತ್ತೊಬ್ಬ ಶಾಸಕ ಶಿವರಾಮ್ ಹೆಬ್ಬಾರ್ ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ್ದಾರೆ. ಈ ಇಬ್ಬರು ನಾಯಕರ ವಿರುದ್ಧ ಬಿಜೆಪಿ ಕ್ರಮಕ್ಕೆ ಮುಂದಾಗಿದೆ. ಈ ಎಲ್ಲದರ ನಡುವೆ, ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಅವರು ಮತದಾನದ ವೇಳೆ ಗೊಂದಲಕ್ಕೊಳಗಾದ ಸನ್ನಿವೇಶವೂ ನಡೆದಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಜಿ.ಸಿ.ಚಂದ್ರಶೇಖರ್​ ಮತ ಹಾಕುವಂತೆ ಕಾಂಗ್ರೆಸ್ ನಾಯಕರು ಬಸವರಾಜ ರಾಯರೆಡ್ಡಿ ಅವರಿಗೆ ಸೂಚನೆ ನೀಡಿದ್ದರು. ಆದರೆ, ಚಂದ್ರಶೇಖರ್ ಬದಲು ಅಜಯ್ ಮಕೇನ್​ಗೆ ಮತ ಚಲಾಯಿಸಿದ್ದಾರೆ. ಇಲ್ಲಿ ರಾಯರೆಡ್ಡಿ ಗೊಂದಲಕ್ಕೆ ಒಳಗಾಗಲು ಕಾರಣವೇನೆಂದು ನೋಡುವುದಾದರೆ, ಜಿ.ಸಿ.ಚಂದ್ರಶೇಖರ್​ಗೆ ಮತ ಹಾಕುವಂತೆ ಕಾಂಗ್ರೆಸ್ ನಾಯಕರು ಸೂಚಿಸಿದ್ದರು. ಮತ್ತೊಮ್ಮೆ ಅಜಯ್ ಮಕೇನ್​ ಅವರಿಗೆ ಮತ ಹಾಕುವಂತೆಯೂ ಸೂಚನೆಯಿತ್ತು. ಎರಡೆರಡು ಸೂಚನೆಯಿದ್ದ ಕಾರಣದಿಂದ ರಾಯರೆಡ್ಡಿ ಗೊಂದಲಕ್ಕೊಳಗಾದರು.

ಇದನ್ನೂ ಓದಿ: ಎಸ್​ಟಿ ಸೋಮಶೇಖರ್ ಮತ 25 ಕೋಟಿ ರೂ.ಗೆ ಸೇಲ್: ಜೆಡಿಎಸ್ ನಾಯಕ ರಮೇಶ್ ಗೌಡ ಗಂಭೀರ ಆರೋಪ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​ನ ಅಜಯ್ ಮಾಕೇನ್ -47, ನಾಸೀರ್ ಹುಸೇನ್ 47, ಜಿ.ಸಿ. ಚಂದ್ರಶೇಖರ 45 ಮತಗಳೊಂದಿಗೆ ಗೆಲುವು ಸಾಧಿಸಿದರೆ, ಬಿಜೆಪಿಯ ನಾರಾಯಣಸಾ ಭಾಂಡಗೆ 47 ಮತಗಳನ್ನ ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಇನ್ನು ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರಿಗೆ 36 ಮತಗಳು ಬಿದ್ದಿವೆ. ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಜೆಡಿಎಸ್​​ನ 19 ಮತಗಳು ಬಿದ್ದಿದ್ದರೆ, ಮಿತ್ರ ಪಕ್ಷ ಬಿಜೆಪಿಯಿಂದ 16 ಮತಗಳು ಮಾತ್ರ ಬಿದ್ದಿವೆ. ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಅವರು ಕಾಂಗ್ರೆಸ್​ನ ಅಜಯ್ ಮೇಕನ್​ ಅವರಿಗೆ ಅಡ್ಡಮತದಾನ ಹಾಕಿದ್ದಾರೆ. ಮತ್ತೊಬ್ಬ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತಚಲಾವಣೆಗೆ ಗೈರಾಗಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ 3 ಸ್ಥಾನ ಗೆದ್ದ ಕಾಂಗ್ರೆಸ್‌, 1 ಸ್ಥಾನ ಬಿಜೆಪಿಗೆ: ಮೈತ್ರಿಗೆ ಮುಖಭಂಗ!

ಹಲವು ಲೆಕ್ಕಾಚಾರಗೊಂದಿಗೆ ಜೆಡಿಎಸ್ ಹಾಗೂ ಬಿಜೆಪಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದು ಸಹಜವಾಗಿಯೇ ಆಡಳಿತರೂಢ ಕಾಂಗ್ರೆಸ್​​ಗೆ ಅಡ್ಡಮತದಾನ ಭೀತಿ ಶುರುವಾಗಿತ್ತು. ಇದರಿಂದ ಎಚ್ಚೆತ್ತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಣತಂತ್ರಗಳನ್ನು ಹೆಣೆದು ತಮ್ಮ ಶಾಸಕರ ಜೊತೆ ಜೊತೆಗೆ ಬಿಜೆಪಿ ಹಾಗೂ ಪಕ್ಷೇತರ ಶಾಸಕರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Tue, 27 February 24