AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

30 ದಿನಗಳ ಪೆರೋಲ್ ಕೇಳಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿ ವಜಾ

ಸರಣಿ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಯಾಗಿರುವ ಉಮೇಶ್ ರೆಡ್ಡಿ. ವಯೋವೃದ್ದೆಯಾದ ತಾಯಿಯೊಂದಿಗಿರಲು, ಜೊತೆಗೆ ದುಸ್ಥಿತಿಯಲ್ಲಿರುವ ಮನೆಯನ್ನು ದುರಸ್ತಿ ಮಾಡಬೇಕೆಂಬ ಕಾರಣ ನೀಡಿ  30 ದಿನ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರನೆ ನಡೆಸಿದ ಹೈಕೋರ್ಟ್​ ಎರಡೂ ಕಾರಣಗಳಿಗೆ ಪೆರೋಲ್ ನೀಡಲು ನಿರಾಕರಿಸಿದೆ.

30 ದಿನಗಳ ಪೆರೋಲ್ ಕೇಳಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿ ವಜಾ
ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿ ವಜಾ
Ramesha M
| Edited By: |

Updated on:Feb 27, 2024 | 7:39 PM

Share

ಬೆಂಗಳೂರು, ಫೆ.27: 30 ದಿನಗಳ ಪೆರೋಲ್ ಕೇಳಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ ಅರ್ಜಿಯನ್ನು ಹೈಕೋರ್ಟ್(High Court) ವಜಾಗೊಳಿಸಿದೆ.‌ ಸರಣಿ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಯಾಗಿರುವ ಉಮೇಶ್ ರೆಡ್ಡಿ. ವಯೋವೃದ್ದೆಯಾದ ತಾಯಿಯೊಂದಿಗಿರಲು, ಜೊತೆಗೆ ದುಸ್ಥಿತಿಯಲ್ಲಿರುವ ಮನೆಯನ್ನು ದುರಸ್ತಿ ಮಾಡಬೇಕೆಂಬ ಕಾರಣ ನೀಡಿ  30 ದಿನ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರನೆ ನಡೆಸಿದ ಹೈಕೋರ್ಟ್​ ಎರಡೂ ಕಾರಣಗಳಿಗೆ ಪೆರೋಲ್ ನೀಡಲು ನಿರಾಕರಿಸಿದೆ. ‘ಪೆರೋಲ್‌ ನೀಡಿದರೆ ಉಮೇಶ್ ರೆಡ್ಡಿ ಪ್ರಾಣಕ್ಕೆ ಅಪಾಯವೆಂದು ವರದಿಯಿದೆ. ಅಪರಾಧಿಗೆ ಇಬ್ಬರು ಸಹೋದರರಿದ್ದು  ಅವರೇ ತಾಯಿಯನ್ನು ನೋಡಿಕೊಳ್ಳುತ್ತಾರೆ. ಸುಪ್ರೀಂ ಕೋರ್ಟ್ 30 ವರ್ಷ ಸೆರೆವಾಸದ ನಂತರ ಕ್ಷಮಾಧಾನ ಕೋರಬಹುದೆಂದು ಹೇಳಿದೆ. ಈ ಹಿನ್ನಲೆ ಸಾರ್ವಜನಿಕ ಹಿತದೃಷ್ಟಿಯಿಂದ ಪೆರೋಲ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ.

ಚಿತ್ರದುರ್ಗ ಮೂಲದ ವಿಕೃತಕಾಮಿ ಉಮೇಶ್ ರೆಡ್ಡಿ ಫೆಬ್ರವರಿ 28, 1998 ರಂದು ಬೆಂಗಳೂರಿನ  ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007 ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದಲ್ಲದೇ ಹಲವು ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಆರೋಪಿಯಾಗಿದ್ದ. 6 ಬಾರಿ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ.

ಇದನ್ನೂ ಓದಿ:ಯಾರೀತ ಉಮೇಶ್ ರೆಡ್ಡಿ? ಈತನ ಹೆಸರು ಕೇಳಿದರೆ ಜನರೇಕೆ ಭಯ ಪಡುತ್ತಿದ್ದರು?

ಮೊದಲಿಗೆ ಪೊಲೀಸ್ ಕೆಲಸದಲ್ಲಿದ್ದು, ಸೇವೆಯಿಂದ ವಜಾಗೊಂಡಿದ್ದ. ಉಮೇಶ್ ರೆಡ್ಡಿ ಜೈಲಿನಲ್ಲಿ ಬೆತ್ತಲಾಗಿ ತಿರುಗುತ್ತಿದ್ದ ಎಂದು ಸಹ ವರದಿಯಾಗಿತ್ತು. ಹೈಕೋರ್ಟ್ ಅರ್ಜಿಯ ವಿರುದ್ಧ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಎತ್ತಿ ಹಿಡಿದಿತ್ತು. ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಉಮೇಶ್ ರೆಡ್ಡಿ ತಾಯಿ ಸಲ್ಲಿಸಿದ್ದ ಅರ್ಜಿ 2013 ರಲ್ಲಿ ತಿರಸ್ಕರಿಸಲ್ಪಟ್ಟಿತ್ತು. ತದನಂತರ ಗಲ್ಲು ಶಿಕ್ಷೆ ಜೀವಾವಧಿಯಾಗಿ ಮಾರ್ಪಡಿಸಲು ಉಮೇಶ್ ರೆಡ್ಡಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:33 pm, Tue, 27 February 24