Karnataka Assembly Election: ಕನಕಪುರದಲ್ಲಿ ಅಶೋಕ ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರ್ಯಾಟಜಿ: ಅಶ್ವತ್ಥ್ ನಾರಾಯಣ್ ಗೌಡ

|

Updated on: Apr 16, 2023 | 12:54 PM

ಕನಕಪುರದಲ್ಲಿ ಅಶೋಕ ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರಾಟಜಿ. ಆ ಭಾಗದಲ್ಲಿ ಬಿಜೆಪಿ ಅಷ್ಟಾಗಿ ಬೆಳೆದಿಲ್ಲ. ರಿಪಬ್ಲಿಕ್ ಕನಕಪುರ ಎಂದು ಮನೋಪಲ್ಲಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಎಮ್​ಎಲ್​ಸಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಗೌಡ ಹೇಳಿದ್ದಾರೆ.

Karnataka Assembly Election: ಕನಕಪುರದಲ್ಲಿ ಅಶೋಕ ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರ್ಯಾಟಜಿ: ಅಶ್ವತ್ಥ್ ನಾರಾಯಣ್ ಗೌಡ
ಬಿಜೆಪಿ ಮಾಜಿ ಎಮ್​ಎಲ್​ಸಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಗೌಡ
Follow us on

ರಾಮನಗರ: ‘ಈಗಾಗಲೇ ಕನಕಪುರದಲ್ಲಿ ಕಾರ್ಯಕರ್ತರ ಸಭೆ ಮಾಡಿದ್ದೇವೆ. ಇವತ್ತು ಸಹ ಸಭೆ ಮಾಡುತ್ತಿದ್ದೇವೆ. ಹತ್ತು ಸಾವಿರ ಕಾರ್ಯಕರ್ತರ ಸಮ್ಮುಖದಲ್ಲಿ ಏಪ್ರಿಲ್ 18 ರಂದು ಆರ್​ ಅಶೋಕ(R. Ashoka) ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮಾಜಿ ಎಮ್ ಎಲ್ ಸಿ, ರಾಜ್ಯ ಬಿಜೆಪಿ(BJP) ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಗೌಡ(Ashwath Narayan Gowda) ಹೇಳಿದ್ದಾರೆ. ‘ಅಶೋಕ ಅವರು ಸ್ವರ್ಧೆ ಒಂದು ಪೊಲಿಟಿಕಲ್ ಸ್ಟ್ರ್ಯಾಟಜಿ. ಕನಕಪುರ ಭಾಗದಲ್ಲಿ ಬಿಜೆಪಿ ಅಷ್ಟಾಗಿ ಬೆಳೆದಿಲ್ಲ. ರಿಪಬ್ಲಿಕ್ ಕನಕಪುರ ಎಂದು ಮನೋಪಲ್ಲಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕನಕಪುರ ಕ್ಷೇತ್ರದಿಂದ ಆರ್ ಅಶೋಕ್ ಸ್ವರ್ಧೆ ವಿಚಾರ ಕುರಿತು ಮಾತನಾಡಿದ ಅವರು‘ ಸರ್ಕಾರದ ಸವಲತ್ತುಗಳು ಜನರಿಗೆ ತಲುಪಿಲ್ಲ. ಕ್ಷೇತ್ರದಲ್ಲಿ ಪಕ್ಷವನ್ನು ಪ್ರಬಲವಾಗಿ ಬೆಳೆಸಬೇಕು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ನಿಂತಾಗ ಪಕ್ಷ ಸಂಘಟನೆ ಇರಲಿಲ್ಲ. ಆದರೂ ಗೆಲುವು ಸಾಧಿಸಿದ್ರು, ಇದೀಗ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಿದೆ ಎಂದರು.

ಇದನ್ನೂ ಓದಿ:‘Karnataka Polls: ಮೈಸೂರಿನಲ್ಲಿ ರಂಗೇರುತ್ತಿರುವ ಚುನಾವಣಾ ಕಣ; ಜೆಡಿಎಸ್, ಕಾಂಗ್ರೆಸ್ ನಡುವೆ ಪೈಪೋಟಿ

ಇನ್ನೂ ಕನಕಪುರ ತಾಂಡಾಗಳಲ್ಲಿ ನೀರಿನ ಸಮಸ್ಯೆ ಇದೆ. ರಿಪಬ್ಲಿಕ್ ಕನಕಪುರ ಆಗಿ ಕುಳಿತಿದ್ದು, ಇದನ್ನ ಒಡೆಯಬೇಕು.
‘ಪೆನ್ ನನ್ನ ಕೈಯಲ್ಲಿ ಇದೆ, ಇಂಕು ನಿಮ್ಮ ಕೈಯಲ್ಲಿ ಇದೆ ಎಂದು ಡಿಕೆಶಿ ಹೇಳಿದ್ರು, ನಾವು ಸಹ ಒಕ್ಕಲಿಗ ನಾಯಕರಾದ ಅಶೋಕರನ್ನ ನಿಲ್ಲಿಸಿದ್ದೇವೆ. ಅಶೋಕ ರಿಗೆ ಉತ್ತಮ ಅವಕಾಶ ಇದೆ. ಕನಕಪುರದಲ್ಲಿ ಕಾರ್ಯಕರ್ತರಿಗೆ ಸಾಥ್ ಬೇಕಿದ್ದು, ತೊಡೆತಟ್ಟಿ ನಿಲ್ಲುವ ಒಬ್ಬ ನಾಯಕ ಬೇಕಿತ್ತು. ಅದಕ್ಕೋಸ್ಕರ ಹೈಕಮಾಂಡ್ ನಮಗೆ ಅಶೋಕ​ರನ್ನ ಕೊಟ್ಟಿದೆ ಎಂದರು.

ಇನ್ನು ಅಶೋಕ ಕೂಡ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಅಶೋಕ ಪ್ರಚಾರ ಮಾಡಲಿದ್ದಾರೆ. ಕನಕಪುರದಲ್ಲಿ ಪಕ್ಷ ಸಂಘಟನೆ ಹಿಂದೆ ಇದೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ.
ಕಳೆದ ಲೋಕಸಭಾ ಚುನಾವಣೆಯಿಂದಲೂ ಜನರ ಮಧ್ಯೆ ನಾವು ಇದ್ದೇವೆ. ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕನಕಪುರದಲ್ಲಿ ನೂರಕ್ಕೆ ನೂರು ಅಶೋಕ ಅವರು ಗೆಲ್ಲುತ್ತಾರೆ. ಬಳಿಕ ನಾವು ಒಂದು ಕಂಡಿಷನ್ ಹಾಕಿದ್ದೇವೆ. ಕನಕಪುರ‌ ಉಳಿಸಿಕೊಂಡು ಬೇರೆ ಕಡೆ ರಾಜೀನಾಮೆ ಕೊಡಬೇಕು ಎಂದು ಕೇಳಿದ್ದೇವೆ ಎಂದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Sun, 16 April 23