ರಾಮನಗರ: ರೈತನಿಗೆ ಉಪಯೋಗವಿಲ್ಲದ ಈ ಬಂದ್ ಯಾಕೆ? ರಸ್ತೆಗೆ ಸೌತೆಕಾಯಿ ಬಿಸಾಡಿ ಕಣ್ಣೀರಿಟ್ಟ ರೈತ

| Updated By: ಆಯೇಷಾ ಬಾನು

Updated on: Sep 26, 2023 | 11:10 AM

ರಾಮನಗರದಲ್ಲಿ ರೈತ ಕಣ್ಣೀರಾಕಿದ್ದು 400 ರೂಪಾಯಿಗೆ ಸೇಲ್ ಆಗುತ್ತಿದ್ದ ಸೌತೆಕಾಯಿ ಮೂಟೆಯನ್ನು 50 ರೂಗೆ ಕೊಡುತ್ತೀನಿ ಅಂದರೂ ಯಾರು ಖರೀದಿಸುತ್ತಿಲ್ಲ. ಬೆಂಗಳೂರು ಬಂದ್​ನಿಂದಾಗಿ ಜನರಿಲ್ಲ. ಬೇಡಿಕೆ ಕುಸಿದಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ರಾಮನಗರದ ಐಜೂರು ಸರ್ಕಲ್ ಬಳಿ ಜಯ ಕರ್ನಾಟಕ ಧರಣಿ ನಡೆಸುತ್ತಿದೆ. ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಘೋಷಣೆ ಕೂಗಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.

ರಾಮನಗರ: ರೈತನಿಗೆ ಉಪಯೋಗವಿಲ್ಲದ ಈ ಬಂದ್ ಯಾಕೆ? ರಸ್ತೆಗೆ ಸೌತೆಕಾಯಿ ಬಿಸಾಡಿ ಕಣ್ಣೀರಿಟ್ಟ ರೈತ
ರೈತ ಶ್ರೀಧರ್
Follow us on

ರಾಮನಗರ, ಸೆ.26: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಖಂಡನೆ (Cauvery Water Dispute) ವ್ಯಕ್ತಪಡಿಸಿ ರಾಮನಗರದ (Ramanagara) ಐಜೂರು ಸರ್ಕಲ್ ಬಳಿ ಜಯ ಕರ್ನಾಟಕ ಧರಣಿ ನಡೆಸುತ್ತಿದೆ. ತಮಿಳುನಾಡು ಸಿಎಂ ಸ್ಟಾಲಿನ್ (MK Stalin) ವಿರುದ್ಧ ಘೋಷಣೆ ಕೂಗಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಹಾಗೂ ಸಿಎಂ ಸ್ಟಾಲಿನ್ ಭಾವಚಿತ್ರ ಇಟ್ಟು ಮೌನಾಚರಣೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮತ್ತೊಂದೆಡೆ ರೈತನಿಗೆ ಉಪಯೋಗವಿಲ್ಲದ ಬಂದ್ ಯಾಕೆ? ಎಂದು ರೈತನೋರ್ವ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರು ಬಂದ್ ಕಾರಣ ಜನರಿಲ್ಲ. ಬೇಡಿಕೆ ಕುಸಿದಿದೆ ಎಂದು ತಲೆ ಮೇಲೆ ಕೈ ಇಟ್ಟು ಕೂತಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್‌ ಭಾವ ಚಿತ್ರವಿಟ್ಟು ಮೌನಾಚರಣೆ

ಐಜೂರು ಸರ್ಕಲ್ ಬಳಿ ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಧರಣಿ ನಡೆಸಲಾಗುತ್ತಿದೆ. ದೇಶದ ಪಾಲಿಗೆ ಸ್ಟಾಲಿನ್ ಸತ್ತೋದ ಎಂದು ಊದಿನ ಕಡ್ಡಿ ಹಚ್ಚಿ, ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಮೌನಾಚರಣೆ ಮಾಡಿ ಸ್ಟಾಲಿನ್‌ ಮತ್ತೆ ಹುಟ್ಟಿ ಬರಬೇಡ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗಿದೆ. ಕಾವೇರಿ ವಿಚಾರವಾಗಿ ತಮಿಳುನಾಡು ನಡೆದುಕೊಂಡ ರೀತಿಗೆ ಜಯ ಕರ್ನಾಟಕ ಸಂಘಟನೆ ವಿರೋಧ ಹೊರ ಹಾಕಿದೆ.

ರೈತನಿಗೆ ಉಪಯೋಗಿಲ್ಲದ ಬಂದ್ ಯಾಕೆ ಬೇಕು?

ಇನ್ನು ಮತ್ತೊಂದೆಡೆ ರಾಮನಗರದಲ್ಲಿ ರೈತ ಕಣ್ಣೀರಾಕಿದ್ದು 400 ರೂಪಾಯಿಗೆ ಸೇಲ್ ಆಗುತ್ತಿದ್ದ ಸೌತೆಕಾಯಿ ಮೂಟೆಯನ್ನು 50 ರೂಗೆ ಕೊಡುತ್ತೀನಿ ಅಂದರೂ ಯಾರು ಖರೀದಿಸುತ್ತಿಲ್ಲ. ಬೆಂಗಳೂರು ಬಂದ್​ನಿಂದಾಗಿ ಜನರಿಲ್ಲ. ಬೇಡಿಕೆ ಕುಸಿದಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಐವತ್ತು ರೂಪಾಯಿಗೆ ಒಂದು ಮೂಟೆ ಅಂದ್ರೂ ಯಾರು ಸೌತೆಕಾಯಿ ಖರೀದಿಸುತ್ತಿಲ್ಲ. ಮಾರಾಟಕ್ಕಾಗಿ ನೂರಾರು ಮೂಟೆ ಸೌತೆಕಾಯಿ ತಂದಿದ್ದೆ. ಜನರಿಲ್ಲದೆ ಮಾರಾಟವಾಗುತ್ತಿಲ್ಲ ಎಂದು ರೈತ ಶ್ರೀಧರ್ ಕಂಗಾಲಾಗಿದ್ದಾರೆ. ತನಗೆ ನ್ಯಾಯ ದೊರಕಿಸುವಂತೆ ಕೋರಿ ಕಣ್ಣೀರಿಟ್ಟಿದ್ದಾರೆ. ಇನ್ನು ಜನರಿಲ್ಲದೆ ರಾಮನಗರ ಎಪಿಎಂಪಿ ಖಾಲಿ ಖಾಲಿಯಾಗಿದೆ.

ಇದನ್ನೂ ಓದಿ: ಬೆಂಗಳೂರು ಬಂದ್: ಬಸ್ ಇದ್ದರೂ, ಪ್ರಯಾಣಿಕರಿಲ್ಲದೆ ಬಿಕೋ ಎನುತಿದೆ ಮೆಜೆಸ್ಟಿಕ್

ಸೌತೆಕಾಯಿ ರಸ್ತೆಗೆ ಬಿಸಾಡಿ ಆಕ್ರೋಶ

ಇನ್ನು ಬೆಂಗಳೂರು ಬಂದ್, ಪ್ರತಿಭಟನೆ ಹಿನ್ನೆಲೆ ಬೇಡಿಕೆ‌ ಕುಸಿದಿರುವ ಕಾರಣ ರೈತ ಶ್ರೀಧರ್ ಮೂಟೆಯಿಂದ ಸೌತೆಕಾಯಿ ನೆಲಕ್ಕೆ ಬಿಸಾಡಿ ಆಕ್ರೋಶ ಹೊರ ಹಾಕಿದರು. ಬಂದ್ ಮಾಡಿ ಕೂತ್ರೆ ನಮ್ ಸಂಸಾರ ನಡೆಯೋದು ಹೇಗೆ? ನಾವೇನು ಅನ್ನ ತಿನಬೇಕಾ,‌ ಮಣ್ಣು ತಿನಬೇಕಾ? ಬಂದ್ ಕಾರಣ ಜನನೇ ಇಲ್ಲ. ಬೆಂಗಳೂರು ಬಂದ್ ಮಾಡಿ ಕೂತ್ರೆ ನಮ್ಮ ಗತಿ ಏನು ಅಂತ‌ ಆಕ್ರೋಶ ಹೊರ ಹಾಕಿದ್ದಾರೆ.

ರಾಮನಗರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ