ಸಿಪಿ ಯೋಗೇಶ್ವರ್ ಭಾವ ಮಹಾದೇವಯ್ಯ ಕೊಲೆ ಪ್ರಕರಣ; ಅಕ್ರಮ ಸಂಬಂಧದ ಆಯಾಮದಲ್ಲಿ ತೀವ್ರಗೊಂಡ ಪೊಲೀಸರ ತನಿಖೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 16, 2023 | 3:48 PM

ಬಿಜೆಪಿ ಎಂಎಲ್​ಸಿ ಸಿಪಿ ಯೋಗೇಶ್ವರ್ (CP Yogeshwar) ಅವರ ಭಾವ ಮಹದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಅದರಂತೆ ಇದರಲ್ಲಿ ಓರ್ವ ಮಹಿಳೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಸಿಪಿ ಯೋಗೇಶ್ವರ್ ಭಾವ ಮಹಾದೇವಯ್ಯ ಕೊಲೆ ಪ್ರಕರಣ; ಅಕ್ರಮ ಸಂಬಂಧದ ಆಯಾಮದಲ್ಲಿ ತೀವ್ರಗೊಂಡ ಪೊಲೀಸರ ತನಿಖೆ
ಮೃತ ಮಹದೇವಪ್ಪ
Follow us on

ರಾಮನಗರ, ಡಿ.16: ಸಿ.ಪಿ ಯೋಗೇಶ್ವರ್(CP Yogeshwar) ಭಾವ ಮಹಾದೇವಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ಯಮಿ ಮಹಾದೇವಯ್ಯ ಕೊಲೆಗೆ ಬೆಂಗಳೂರಿನ ದೀಪಾಂಜಲಿ ನಗರ(Deepanjali Nagar) ದ ಓರ್ವ ಮಹಿಳೆ‌ಯ ಲಿಂಕ್ ಇರುವ ಬಗ್ಗೆ ಅನುಮಾನ ಬಂದಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಮಹಾದೇವಯ್ಯ ಹಾಗೂ ಆ ಮಹಿಳೆ ಹಲವು ಬಾರಿ ಭೇಟಿಯಾಗಿದ್ದು, ಆಗಾಗ ಚನ್ನಪಟ್ಟಣದ ಫಾರ್ಮ್ ಹೌಸ್​ಗೆ ಬರುತ್ತಿದ್ದರ ಮಾಹಿತಿ ದೊರೆತಿದೆ.

ಅಕ್ರಮ ಸಂಬಂಧದ ಆಯಾಮದಲ್ಲಿ ತೀವ್ರಗೊಂಡ ಪೊಲೀಸರ ತನಿಖೆ

ಮೃತ ಮಹಾದೇವಯ್ಯ, ಚನ್ನಪಟ್ಟಣ ಬಸ್ ನಿಲ್ದಾಣದಿಂದ ತೋಟದಲ್ಲಿ ಕೆಲಸ ಮಾಡುವವರನ್ನು ಕರೆದುಕೊಂಡು ಬರುತ್ತಿದ್ದರಂತೆ. ಈ ಹಿನ್ನಲೆ ಆ ಮಹಿಳೆ ಜೊತೆ ಅಕ್ರಮ ಸಂಬಂಧ ಏನಾದ್ರೂ ಇದೆಯಾ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಲೆಯಲ್ಲಿ ಆ ಮಹಿಳೆ ಪಾತ್ರವಿರುವ ಶಂಕೆ ವ್ಯಕ್ತವಾಗಿದ್ದು, ಮಹಿಳೆ ಮನೆಗೆ ಹೋಗಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕೊಲೆಯಾದ ಮಹದೇವಯ್ಯ ಮನೆಯಲ್ಲಿ ದರೋಡೆ ನಡೆದಿಲ್ಲ: ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ

ಘಟನೆ ವಿವರ

ಡಿಸೆಂಬರ್ 2 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಏಕಾಏಕಿ ನಾಪತ್ತೆಯಾಗಿದ್ದರು. ಇವರ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ಕೂಡ ರಚನೆ ಮಾಡಿದ್ದರು. ಬಳಿಕ ಮಾರನೇ ದಿನ, ಡಿಸೆಂಬರ್ 3 ರಂದು ಮಹದೇವಯ್ಯ ಅವರ ಕಾರು ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಶೋಧಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ನಂತರ ಚಾಮರಾಜನಗರ  ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹದೇವಯ್ಯನವರ ಮೃತದೇಹ ಪತ್ತೆಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Sat, 16 December 23