ಗುರೂಜಿ ಆರ್ಯವೇದಿಕ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ 13 ಪುಟ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು

| Updated By: ಸಾಧು ಶ್ರೀನಾಥ್​

Updated on: Jan 27, 2022 | 11:52 AM

ತಮ್ಮ ಸಹೋದರ ಈಶ್ವರ್ ಕುಮಾರ್ ಅವರು ಎಸಿಪಿ ಶ್ರೀನಿವಾಸ್, ಪತ್ನಿ ರಶ್ನಿ, ರಶ್ಮಿ ತಮ್ಮ ಬಸವರಾಜು, ತಂಗಿ ರೂಪ, ಪಾವಿನ್ ಒತ್ತಡ ಹಾಗೂ ಬೆದರಿಕೆಗೆ ನೊಂದು ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ಮೃತನ ಸೋದರ  ರೇವಣ ಸಿದ್ದೇಶ್ವರ್ ದೂರು ನೀಡಿದ್ದಾರೆ.

ಗುರೂಜಿ ಆರ್ಯವೇದಿಕ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ 13 ಪುಟ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು
ಗುರೂಜಿ ಆರ್ಯವೇದಿಕ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ 13 ಪುಟ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು
Follow us on

ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲಿಪುರದ ಬಿಗ್ರೇಡ್ ಮೆಡೋಸ್ ಅಪಾರ್ಟ್ ಮೆಂಟ್ ನಲ್ಲಿ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಲಾಟ್ ನಂ 102 ರಲ್ಲಿ ವಾಸಿಸುತ್ತಿದ್ದ ಈಶ್ವರ್ ಕುಮಾರ್ 13 ಪುಟಗಳ ಡೆತ್ ನೋಟ್ ಬರೆದಿಟ್ಟು, ಜನವರಿ 20 ರಂದು ನೇಣಿಗೆ ಶರಣಾಗಿದ್ದಾರೆ. ಈಶ್ವರ್ ಕುಮಾರ್ ಅವರು ರವಿಶಂಕರ್ ಗುರೂಜಿ ಆರ್ಯವೇದಿಕ್ ಫ್ಯಾಕ್ಟರಿಯಲ್ಲಿ ಪ್ರೊಡೆಕ್ಷನ್ ಮ್ಯಾನೇಜರ್ ಆಗಿ‌ ಕೆಲಸ ನಿರ್ವಹಿಸುತ್ತಿದ್ದರು. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಈಶ್ವರ್ ಕುಮಾರ್ ಅತ್ಮಹತ್ಯೆಗೆ ಎಸಿಪಿ‌ ಹಾಕಿದ್ದ ಬೆದರಿಕೆ ಕಾರಣವೆಂದು ಮೃತನ ಸಹೋದರ ರೇವಣ ಸಿದ್ದೇಶ್ವರ್ ಜಯನಗರ ಎಸಿಪಿ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಈಶ್ವರ್ ಕುಮಾರ್ ಅವರ ಪತ್ನಿ ರಶ್ಮಿ, ಅಕೆಯ ತಮ್ಮ ಬಸವರಾಜು, ತಂಗಿ‌ ರೂಪಾ ಹಾಗೂ ಪಾವಿನ್ ಎಂಬುವವರ ವಿರುದ್ಧವೂ ದೂರು ನೀಡಿದ್ದಾರೆ. ಪತಿ ಈಶ್ವರ್ ಅವರಿಂದ ತನಗೆ ಡೈವರ್ಸ್ ಕೊಡಿಸುವಂತೆ ರಶ್ಮಿ ಎಸಿಪಿ ಶ್ರೀನಿವಾಸ್ ಅವರ‌ ಮೊರೆ ಹೋಗಿದ್ದರು. ಹೀಗಾಗಿ ಎಸಿಪಿ ಕಚೇರಿಗೆ ಕರೆಸಿ ಮಾತುಕತೆ ನಡೆಸಿದ್ದರು. ನಂತರ ಸೀದಾ ಫ್ಲಾಟ್ ಗೆ ಬಂದು‌ ನೇಣಿಗೆ ಶರಣಾಗಿದ್ದಾರೆ ಈಶ್ವರ್ ಕುಮಾರ್.

ಈ ಹಿನ್ನೆಲೆಯಲ್ಲಿ ತಮ್ಮ ಸಹೋದರ ಈಶ್ವರ್ ಕುಮಾರ್ ಅವರು ಎಸಿಪಿ ಶ್ರೀನಿವಾಸ್, ಪತ್ನಿ ರಶ್ನಿ, ರಶ್ಮಿ ತಮ್ಮ ಬಸವರಾಜು, ತಂಗಿ ರೂಪ, ಪಾವಿನ್ ಒತ್ತಡ ಹಾಗೂ ಬೆದರಿಕೆಗೆ ನೊಂದು ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ನೀಡಿದ್ದಾರೆ. ದೂರಿನ ಅನ್ವಯ ರಶ್ಮಿ, ಬಸವರಾಜು, ರೂಪ, ಪಾವಿನ್ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಅನುಮತಿ‌ ಪಡೆಯದ ಹಿನ್ನೆಲೆ ಎಸಿಪಿ‌ ವಿರುದ್ದ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಬಾಂಗ್ಲಾ ಮಹಿಳೆ ಬಂಧನ, ಹಿನ್ನೆಲೆ ಏನಿತ್ತು?
ಬೆಂಗಳೂರು: ಬಾಂಗ್ಲಾ ದೇಶದಿಂದ ಬಂದು, ಹಿಂದೂ ಆಗಿ ಭಾರತದಲ್ಲಿ ಅಕ್ರಮವಾಗಿ ನೆಲಸಿದ್ದ ಮಹಿಳೆಯೊಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಭಾರತೀಯ ಪೌರತ್ವ ಪಡೆದಿದ್ದ ಮಹಿಳೆಯನ್ನು ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ. ರೋನಿ ಬೇಗಂ 2006 -2007 ರಲ್ಲಿ ಅಕ್ರಮವಾಗಿ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದಳು. ಮುಂದೆ.. ರೋನಿ ಬೇಗಂ 2015 ರಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದ ಸದರಿ ವಿದೇಶಿ ಮಹಿಳೆ, ನೀತಿನ್ ಕುಮಾರ್ ಎಂಬಾತನನ್ನು ಮುಂಬೈನಲ್ಲಿ ವಿವಾಹವಾಗಿದ್ದಳು. ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ ರೋನಿ ಬೇಗಂ ತನ್ನ ಹೆಸರು ಬದಲಿಸಿಕೊಂಡಿದ್ದಳು. ಪಾಯಲ್ ಗೋಷ್ ಎಂದು ಆಕೆಗೆ ಮರು ನಾಮಕರಣವಾಗಿತ್ತು. ನಕಲಿ ದಾಖಲೆ ಕೊಟ್ಟು ಭಾರತದ ಪ್ರಜೆಯಾಗಿ ದಾಖಲೆ ಮಾರ್ಪಾಡು ಮಾಡಿಕೊಂಡಿದ್ದಳು. ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ.

ನಕಲಿ ದಾಖಲೆ ಮುಖಾಂತರ ಓಟರ್ ಐಡಿ, ಆಧಾರ್ ಕಾರ್ಡ್ ಸಹ ರೋನಿ ಬೇಗಂ ಯಾನಿ ಪಾಯಲ್ ಗೋಷ್ ಪಶ್ಚಿಮ ಬಂಗಾಳದ ಏರ್ ಪೋರ್ಟ್ ನಲ್ಲಿ ಲಾಕ್ ಆಗಿದ್ದಾಳೆ. FRRO ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಂದೂವರೆ ವರ್ಷದ ನಂತರ ರೋನಿ ಬೇಗಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ರೋನಿ ಬೇಗಂ ಯಾನಿ ಪಾಯಲ್ ಗೋಷ್ ಎಂಬ ಈ ಮಹಿಳೆಗೆ ಅಕ್ರಮವಾಗಿ ದಾಖಲಾತಿ ಮಾಡಿಕೊಟ್ಟವರಿಗೂ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಭಾಲ್ಕಿ ಪೊಲೀಸ್​ ಸರ್ಕಲ್​ ಇನ್ಸ್​ಪೆಕ್ಟರ್​ ಮನೆಗೆ:
ಬೀದರ್ ಜಿಲ್ಲೆಯ ಭಾಲ್ಕಿ ಪೊಲೀಸ್​ ಸರ್ಕಲ್​ ಇನ್ಸ್​ಪೆಕ್ಟರ್​ (ಸಿಪಿಐ) ಪಿ ಆರ್​ ರಾಘವೇಂದ್ರ ಅವರನ್ನು ಜಿಲ್ಲಾ ಎಸ್​​ಪಿ ಅಮಾನತು ಮಾಡಿದ್ದಾರೆ. ರಾಘವೇಂದ್ರ ವಿರುದ್ಧ ಸಮವಸ್ತ್ರ ಧರಿಸಿದ್ದಾಗಲ್ಲೇ ಭಾಲ್ಕಿಯಲ್ಲಿ ಅಂಗಡಿ ಮಾಲೀಕರೊಬ್ಬರಿಂದ ಹಣ ಪಡೆದಿದ್ದ ಆರೋಪವಿದೆ. P.R. ರಾಘವೇಂದ್ರ ಹಣ ಪಡೆಯುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ಬಗ್ಗೆ ಬೀದರ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ (ಎಸ್‌ಪಿ) ಡಿಎಲ್​ ನಾಗೇಶ್ ಅವರು ತನಿಖೆಗೆ ಆದೇಶಿಸಿದ್ದರು. ಹೆಚ್ಚುವರಿ ಎಸ್‌ಪಿ ಗೋಪಾಲ್ ಬ್ಯಾಕೋಡ್ ಅವರು ತನಿಖೆ ನಡೆಸಿ ವರದಿ ನೀಡಿದ್ದರು. ಆ ವರದಿ ಆಧರಿಸಿ ಕಲಬುರಗಿ ಐಜಿಪಿಯಿಂದ ಅಮಾನತು ಆದೇಶ ಹೊರಬಿದ್ದಿದೆ.

ಇದನ್ನೂ ಓದಿ:

ಪ್ರಧಾನಿ ಮೋದಿ ಸರ್ಕಾರದ ಒತ್ತಡದಿಂದ ಟ್ವಿಟರ್​ ಫಾಲೋವರ್​ಗಳ ಸಂಖ್ಯೆ ಸೀಮಿತಗೊಳಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ

ಇದನ್ನೂ ಓದಿ:

ನುಚ್ಚು ನೂರಾದ ಸಿ ಎಂ ಇಬ್ರಾಹಿಂ ಕನಸು; ರಾಜ್ಯ ಕಾಂಗ್ರೆಸ್​ನಲ್ಲಿ ಇನ್ನೊಂದು ಶಕ್ತಿ ಕೇಂದ್ರ ಸ್ಥಾಪಿಸಿತಾ ಹೈಕಮಾಂಡ್?

Published On - 10:48 am, Thu, 27 January 22