ರಾಮನಗರ: ಆ ರೈತರು ಕಣ್ವ ಜಲಾಶಯಕ್ಕಾಗಿ ತಮಗಿದ್ದ ಗೂಡು ಕಳೆದುಕೊಂಡಿದ್ರು. ಅನ್ನ ಕೊಡ್ತಿದ್ದ ಬಂಗಾರದಂತಹ ಭೂಮಿಯನ್ನೂ ಮಿಸ್ ಮಾಡ್ಕೊಂಡಿದ್ರು. ಈ ವೇಳೆ ಜಿಲ್ಲಾಡಳಿತ ರೈತರಿಗೆ ಕೃಷಿ ಭೂಮಿ ನೀಡಿತ್ತು. ಅದೇ ಜಾಗದಲ್ಲಿ ಕಳೆದ 50 ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ರು. ಆದ್ರೀಗ ಅದೇ ರೈತರು ಮತ್ತೆ ಬೀದಿಗೆ ಬಿದ್ದಿದ್ದಾರೆ.
ಕಾಮಗಾರಿ ಸ್ಥಗಿತಕ್ಕೆ ರೈತರ ಮನವಿ:
ಇನ್ನು, ಇವರೆಲ್ಲಾ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯ ಮುಳುಗಡೆ ರೈತರು. 1945ರಲ್ಲಿಯೇ ಇರೋ ಜಾಗ ಕಳೆದುಕೊಂಡಿದ್ರು. ಆಗ ಜಿಲ್ಲಾಡಳಿತ ರೈತರಿಗೆ ಇಲ್ಲಿನ ಜಮೀನುಗಳನ್ನ ನೀಡಿದೆಯಂತೆ. ಹೀಗಾಗಿ ನೂರಾರು ರೈತರು ವ್ಯವಸಾಯ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ರು. ಆದ್ರೆ ಈ ಮಧ್ಯೆ ಅರಣ್ಯ ಇಲಾಖೆ ಈ ಜಮೀನು ನಮಗೆ ಸೇರಿದ್ದು ಅಂತಾ ಕೋರ್ಟ್ ಮೆಟ್ಟಿಲೇರಿತ್ತು.
ಮತ್ತೆ ಬೀದಿಗೆ ಬಿದ್ದ ರೈತರು:
ಈ ಮಧ್ಯೆ ಸುಮಾರು 42 ರೈತರುಗಳ 25 ಎಕರೆ ಜಮೀನಿನಲ್ಲಿ ಎರಡು ಕಿಲೋಮೀಟರ್ ದೂರ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಹಾದು ಹೋಗುತ್ತಿದೆ. ಹೀಗಾಗಿ ಇಲ್ಲಿನ ರೈತರು ಮತ್ತೆ ಬೀದಿಗೆ ಬೀಳ್ತಿದ್ದಾರೆ. ಹೋಗ್ಲಿ ಪರಿಹಾರವಾದ್ರೂ ಸಿಗುತ್ತಾ ಅಂದ್ರೆ ಅದು ಇಲ್ಲ. ಯಾಕಂದ್ರೆ. ಕೋರ್ಟ್ನಲ್ಲಿ ವಿವಾದ ಇರೋದ್ರಿಂದ ಪರಿಹಾರ ಕೊಡಲು ಆಗಲ್ಲ ಅಂತಾ ಅಧಿಕಾರಿಗಳು ಹೇಳ್ತಿದ್ದಾರೆ. ಒಟ್ನಲ್ಲಿ, ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಇದೀಗ ರೈತರು ಪರದಾಟುವಂತಾಗಿದೆ. ಇತ್ತ ಜಮೀನು ಇಲ್ಲದೆ, ಅತ್ತ ಪರಿಹಾರವೂ ಸಿಗದೆ ಪರದಾಡ್ತಿದ್ದಾರೆ.