ಮೈಸೂರು ಹೆದ್ದಾರಿಯಲ್ಲಿ ಈಜಾಡಲು ಹೆಚ್​ ಡಿ ಕುಮಾರಸ್ವಾಮಿ ‘ಆಹ್ವಾನ’ -ಸಂಸದ ಪ್ರತಾಪ್ ಸಿಂಹ ತಿರುಗೇಟು ಹೀಗಿದೆ

| Updated By: ಸಾಧು ಶ್ರೀನಾಥ್​

Updated on: Aug 30, 2022 | 4:39 PM

ಗೌರವಾನ್ವಿತ ಕುಮಾರಣ್ಣ ಮತ್ತು DK ಸುರೇಶಣ್ಣ ಅನ್ಯಥಾ ಭಾವಿಸಬೇಡಿ, ಜಿಲ್ಲಾಡಳಿತ, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ರಾಮನಗರ ಜಿಲ್ಲೆಯ ಎಲ್ಲ ಕೆರೆಗಳ ಹಾಗು ನಾಲಾಗಳ ಸರ್ವೇ ಮಾಡಿಸಿ, ಒತ್ತುವರಿ ತೆರವು ಮಾಡಿಸಿ ಕೊಡಿ. ಹೈವೆಯಿಂದ ಎಲ್ಲೆಲ್ಲಿ ಅಡಚಣೆಯಾಗಿದೆ ಅದನ್ನೂ ತೋರಿಸಿ, ಸರಿಪಡಿಸಿಕೊಡುವ ಜವಾಬ್ದಾರಿಯನ್ನು ನನಗೆ ಬಿಡಿ - ಸಂಸದ ಪ್ರತಾಪ್ ಸಿಂಹ

ಮೈಸೂರು ಹೆದ್ದಾರಿಯಲ್ಲಿ ಈಜಾಡಲು ಹೆಚ್​ ಡಿ ಕುಮಾರಸ್ವಾಮಿ ‘ಆಹ್ವಾನ’ -ಸಂಸದ ಪ್ರತಾಪ್ ಸಿಂಹ ತಿರುಗೇಟು ಹೀಗಿದೆ
ಮೈಸೂರು ಹೆದ್ದಾರಿಯಲ್ಲಿ ಈಜಾಡಲು ಹೆಚ್​ ಡಿ ಕುಮಾರಸ್ವಾಮಿ ‘ಆಹ್ವಾನ’ -ಸಂಸದ ಪ್ರತಾಪ್ ಸಿಂಹ ತಿರುಗೇಟು ಹೀಗಿದೆ
Follow us on

ಇತ್ತೀಚಿನ ದಶಕಗಳಲ್ಲಿ ಕಂಡುಕೇಳರಿಯದಂತಹ ಮಹಾಮಳೆಗೆ ರಾಮನಗರ-ಮಂಡ್ಯ ತತ್ತರಿಸಿದೆ. ಇಂದು ಗೌರಿ ಹಬ್ಬದ ದಿನ ವರುಣ ಮಹಾಪ್ರಭು ತುಸು ವಿರಾಮ ಹಾಕಿದ್ದಾನೆ ಅನಿಸುತ್ತಿದೆ. ಆದರೆ ನಿನ್ನೆ-ಮೊನ್ನೆ ಭರ್ಜರಿ ಹಾವಳಿ ಎಬ್ಬಿಸಿದ್ದಾನೆ. ಇದನ್ನು ಪರಾಮರ್ಶಿಸಲು ಸಾಕ್ಷಾತ್​ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳ ಪಟಾಲಂ ಕೆಲ ಸ್ಥಳಗಳಿಗೆ ಭೇಟಿ ನೀಡಿ, ಜನರಿಗೆ ಸಮಾಧಾನದ ಮಂತ್ರ ಹೇಳಿದ್ದಾರೆ. ಆದರೆ ಈ ಮಧ್ಯೆ ಮಾಜಿ ಮುಖ್ಯಮಂತ್ರಿಗಳೂ ಆದ ಚನ್ನಪಟ್ಟಣ ಶಾಸಕ, ಜೆಡಿಎಸ್ ನಾಯಕ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಅವರು ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಪ್ರಸ್ತಾಪಿಸುತ್ತಾ ಮೈಸೂರು ಸಂಸದ ಪ್ರತಾಪ್​ ಸಿಂಹ ಬಗ್ಗೆ ಬಾಲಿಶವಾಗಿ ಮಾತನಾಡಿದ್ದರು. ಹೆದ್ದಾರಿ ನಿರ್ಮಿಸಿಕೊಡಿ ಅಂದರೆ ಈಜುಕೊಳ ನಿರ್ಮಿಸಿಬಿಟ್ಟಿದ್ದಾರೆ ನಮ್ಮ ಸಂಸದರು. ಪ್ರತಾಪ್ ಸಿಂಹ ಇಲ್ಲಿ ( MP Pratap Simha) ಸ್ವಿಮ್ (Swimming) ಮಾಡಬಹುದಿತ್ತು ಎಂದು ವ್ಯಂಗ್ಯೋಕ್ತಿ ಹೇಳಿದ್ದರು. ​​

ಸಂಸದ ಪ್ರತಾಪ್ ಸಿಂಹ Mysore-Bangalore ಹೈವೆಲಿ ಬಂದು Swimming ಮಾಡಬಹುದಿತ್ತು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ದ ‘ಆಹ್ವಾನಕ್ಕೆ’ ಸಂಸದ ಪ್ರತಾಪ್ ಸಿಂಹ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಫೇಸ್​ ಬುಕ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಪ್ರತಾಪ್ ಸಿಂಹ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಹೆಚ್​ ಡಿ ಕುಮಾರಸ್ವಾಮಿ ಅವರ ಹೇಳಿಕೆಗಳ ಕ್ಲಿಪ್ಪಿಂಗ್​​ ಗಳನ್ನು ಜೋಡಿಸಿ, ಪೋಸ್ಟ್​ ಮಾಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ತಿರುಗೇಟು ಹೀಗಿದೆ:

ಗೌರವಾನ್ವಿತ ಕುಮಾರಣ್ಣ ಮತ್ತು DK ಸುರೇಶಣ್ಣ ಅನ್ಯಥಾ ಭಾವಿಸಬೇಡಿ, ಜಿಲ್ಲಾಡಳಿತ, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ರಾಮನಗರ ಜಿಲ್ಲೆಯ ಎಲ್ಲ ಕೆರೆಗಳ ಹಾಗು ನಾಲಾಗಳ ಸರ್ವೇ ಮಾಡಿಸಿ, ಒತ್ತುವರಿ ತೆರವು ಮಾಡಿಸಿ ಕೊಡಿ. ಹೈವೆಯಿಂದ ಎಲ್ಲೆಲ್ಲಿ ಅಡಚಣೆಯಾಗಿದೆ ಅದನ್ನೂ ತೋರಿಸಿ, ಸರಿಪಡಿಸಿಕೊಡುವ ಜವಾಬ್ದಾರಿಯನ್ನು ನನಗೆ ಬಿಡಿ.