ಈದ್ಗಾ ಮೈದಾನದಲ್ಲಿ ಕನ್ನಡ ಧ್ವಜ ಹಾರಿಸುತ್ತೇವೆ, ಈದ್ಗಾ ಮೈದಾನ ಬಗ್ಗೆ ಮಾತಾಡಲು SDPI ಯಾರು? -ಸಚಿವ ಆರ್. ಅಶೋಕ್

ಈದ್ಗಾ ಮೈದಾನದ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ನಮ್ಮದು ಸಂವಿಧಾನದ ಅಡಿಯಲ್ಲಿ ಬಂದ ಸರ್ಕಾರ. ಯಾಕೆ 75 ವರ್ಷ ರಾಷ್ಟ್ರ ಧ್ವಜ ಹಾರಿಸಲು ಬಿಟ್ಟಿಲ್ಲ. ನಾಚಿಕೆ ಅಗಾಲ್ವ. ಕನ್ನಡದ ಧ್ವಜ ಕೂಡ ಹಾರಿಸುತ್ತೇವೆ ಎಂದರು.

ಈದ್ಗಾ ಮೈದಾನದಲ್ಲಿ ಕನ್ನಡ ಧ್ವಜ ಹಾರಿಸುತ್ತೇವೆ, ಈದ್ಗಾ ಮೈದಾನ ಬಗ್ಗೆ ಮಾತಾಡಲು SDPI ಯಾರು? -ಸಚಿವ ಆರ್. ಅಶೋಕ್
ಸಚಿವ ಆರ್ ಅಶೋಕ
Follow us
TV9 Web
| Updated By: ಆಯೇಷಾ ಬಾನು

Updated on:Aug 29, 2022 | 8:30 PM

ರಾಮನಗರ: ಬೆಂಗಳೂರಿನ ಚಾಮರಾಜಪೇಟೆಯ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಈದ್ಗಾ ಮೈದಾನದಲ್ಲಿ ಕನ್ನಡದ ಧ್ವಜವನ್ನು(Kannada Flag) ಕೂಡ ಹಾರಿಸುತ್ತೇವೆ ಎಂದು ರಾಮನಗರದಲ್ಲಿ ಕಂದಾಯ ಸಚಿವ ಆರ್​.ಅಶೋಕ್(R Ashok) ಹೇಳಿಕೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಬೆಂಗಳೂರಿನ ಈದ್ಗಾ ಮೈದಾನ ಕಂದಾಯ ಇಲಾಖೆಯದ್ದು ಕೋರ್ಟ್ ಕೂಡ ಸೂಚನೆ ಕೊಟ್ಟಿದ್ದೆ. ಅರ್ಜಿ ಹಾಕಿರುವವರ ಜೊತೆ ಮೀಟಿಂಗ್ ಮಾಡಲಾಗಿದೆ. ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲಿ ಅರಳಿಮರ, ಶೌಚಾಲಯ‌ ಇದೆ. ಚಾಮರಾಜಪೇಟೆಯ ಈದ್ಗಾ ಮೈದಾನ 7 ಕೋಟಿ ಕನ್ನಡಿಗರ ಸ್ವತ್ತು. ಈದ್ಗಾ ಮೈದಾನ ಬಗ್ಗೆ ಮಾತಾಡಲು ಎಸ್​ಡಿಪಿಐನವರು ಯಾರು? ಆಗಸ್ಟ್ 31ರೊಳಗೆ ರಾಜ್ಯ ಸರ್ಕಾರದ ನಿಲುವು ತಿಳಿಸಲಾಗುವುದು. ಈದ್ಗಾ ಮೈದಾನದಲ್ಲಿ ಕನ್ನಡದ ಧ್ವಜವನ್ನು ಕೂಡ ಹಾರಿಸುತ್ತೇವೆ ಎಂದು ರಾಮನಗರದಲ್ಲಿ ಕಂದಾಯ ಸಚಿವ ಆರ್​.ಅಶೋಕ್ ಗುಡುಗಿದ್ದಾರೆ.

ಈದ್ಗಾ ಮೈದಾನದ ಬಗ್ಗೆ ಸರ್ಕಾರ ತೀರ್ಮಾನ ಮಾಡುತ್ತದೆ. ನಮ್ಮದು ಸಂವಿಧಾನದ ಅಡಿಯಲ್ಲಿ ಬಂದ ಸರ್ಕಾರ. ಯಾಕೆ 75 ವರ್ಷ ರಾಷ್ಟ್ರ ಧ್ವಜ ಹಾರಿಸಲು ಬಿಟ್ಟಿಲ್ಲ. ನಾಚಿಕೆ ಅಗಾಲ್ವ. ಕನ್ನಡದ ಧ್ವಜ ಕೂಡ ಹಾರಿಸುತ್ತೇವೆ ಎಂದರು.

ರಾಜ್ಯದಲ್ಲಿ ಹಿಂದೂಗಳಾಗಲಿ, ಮುಸ್ಲಿಮುರಾಗಲಿ ತೀರ್ಪು ಗೌರವಿಸಬೇಕು

ಇನ್ನು ಇದೇ ವಿಚಾರವಾಗಿ ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ಇಮ್ರಾನ್ ಮಾತನಾಡಿದ್ದಾರೆ. ಈದ್ಗಾ ಮೈದಾನ ವಿವಾದದ ಬಗ್ಗೆ ನಾಳೆ ಸುಪ್ರೀಂಕೋರ್ಟ್​ ತೀರ್ಪು ಬರಲಿದೆ. ಸುಪ್ರೀಂಕೋರ್ಟ್​ನಿಂದ ತೀರ್ಪು ಏನೇ ಬಂದರೂ ಸ್ವಾಗತಿಸೋಣ. ಈದ್ಗಾ ಮೈದಾನ ವಿವಾದ ನೂರಾರು ವರ್ಷಗಳಿಂದಲೂ ಇದೆ. ಈದ್ಗಾ ಮೈದಾನದ ಬಗ್ಗೆ ಸುಪ್ರೀಂಕೋರ್ಟ್​ನಿಂದ ನಾಳೆ ತೀರ್ಪು ಬರಲಿದೆ. ರಾಜ್ಯದಲ್ಲಿ ಹಿಂದೂಗಳಾಗಲಿ, ಮುಸ್ಲಿಮರಾಗಲಿ ತೀರ್ಪು ಗೌರವಿಸಬೇಕು. ಈ ಹಿಂದೆ ಸುಪ್ರೀಂಕೋರ್ಟ್​ ಈದ್ಗಾ ಮೈದಾನವೆಂದು ತೀರ್ಪು ನೀಡಿತ್ತು. ಆದ್ದರಿಂದ ಕಂದಾಯ ಸಚಿವರಿಗೆ ಮತ್ತೊಮ್ಮೆ ಮನವಿ ಮಾಡುತ್ತಿದ್ದೇವೆ. ಸುಪ್ರೀಂಕೋರ್ಟ್​ ಮೊದಲು ನೀಡಿದ್ದ ತೀರ್ಪನ್ನು ಗೌರವಿಸಿ ಎಂದು ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ಇಮ್ರಾನ್​ ಮನವಿ ಮಾಡಿದ್ದಾರೆ.

Published On - 8:20 pm, Mon, 29 August 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ