Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2022: ಮತ್ತ ಬರಾಕತಾರ ಹುಬ್ಬಳ್ಳಿ ಕಾ ರಾಜ; ನೋಡ ಬರಿ 21 ಅಡಿ ಗಣಪತಿನ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವವನ್ನು ಬಹಳಷ್ಟು ವಿಜೃಂಭನೆಯಿಂದ ಆಚರಿಸಲಾಗುತ್ತಿದ್ದು, ಈ ಭಾರಿ ಹುಬ್ಬಳ್ಳಿ ಕಾ ರಾಜ 21 ಅಡಿ ಇರಲಿದ್ದಾನೆ.

Ganesh Chaturthi 2022: ಮತ್ತ ಬರಾಕತಾರ ಹುಬ್ಬಳ್ಳಿ ಕಾ ರಾಜ; ನೋಡ ಬರಿ 21 ಅಡಿ ಗಣಪತಿನ
ಹುಬ್ಬಳ್ಳಿ ಕಾ ರಾಜ ಗಣಪತಿ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 29, 2022 | 7:13 PM

ಛೋಟಾ ಬಾಂಬೆ ಎಂದೇ ಖ್ಯಾತಿಯಾಗಿರುವ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕಳೆದ ಎರಡು ವರ್ಷ ಕರೊನಾ ಕಾರಣದಿಂದ ಅದ್ಧೂರಿಯಾಗಿ ಆಚರಿಸಲಿಲ್ಲ. ಆದರೆ ಈ ಭಾರಿ ಬಹಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹುಬ್ಬಳ್ಳಿ ಗಣೇಶೋತ್ಸವ ಅಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದಿದೆ.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜನ ಆಗಮಿಸಿ ಹೂ-ಬಳ್ಳಿ ಗಣೇಶೋತ್ಸವವನ್ನು ಕಣ್ತುಂಬಿಕೊಳ್ಳುತ್ತಾರೆ. ಹುಬ್ಬಳ್ಳಿಯ ಗಲ್ಲಿಗಳಲ್ಲಿ ಗಣೇಶನನ್ನು 5, 7, 9, 11 ದಿನಗಳವರೆಗೆ ಕೂಡಿಸುತ್ತಾರೆ. ಈ ಎಲ್ಲ ದಿನಗಳಲ್ಲಿ ಮೆರವಣಿಗಳು ಬಹಳಷ್ಟು ಅದ್ದೂರಿಯಾಗಿ ನಡೆಯುತ್ತವೆ. ಅದರಲ್ಲಂತೂ ಈ ಮಾರ್ಕೆಟ್​ ಏರಿಯಾಗಳಲ್ಲಿ (ದುರ್ಗದ ಬೈ, ಮೂರಸಾವಿರ ಮಠ, ಮರಾಟ ಗಲ್ಲಿ) ಸುತ್ತಮುತ್ತಲಿನ ಏರಿಯಾಗಳಲ್ಲಿ ಬಹಷ್ಟು ವಿಜೃಂಭಣೆಯಾಗಿ ಆಚರಿಸಲಾಗುತ್ತದೆ.

ಇಲ್ಲಿಯ ಗಣೇಶೋತ್ಸವ ವಿಶೇಷ ಅಂದರೇ ಅತಿ ಎತ್ತರದ ಗಣಪತಿಗಳು. ಹೌದು, ಮೂರುಸಾವಿರ ಮಠದ ಹತ್ತಿರ, ಹುಬ್ಬಳ್ಳಿ ಕಾ ರಾಜ ವೃತ್ತದಲ್ಲಿ ಅತಿ ಎತ್ತರದ ಗಣೇಶನನ್ನು ಕೂಡಿಸುತ್ತಾರೆ. ಸಾಮಾನ್ಯವಾಗಿ ಇಂತಹ ಗಣಪತಿಗಳು ನಿಮಗೆ ಮಹರಾಷ್ಟ್ರದಲ್ಲಿ ನೋಡಲು ಸಿಗುತ್ತವೆ. ಆದರೆ ಕಳೆದ 15 ವರ್ಷಗಳಿಂದ ಪ್ರತಿಷ್ಠಪಿಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಶ್ರೀ ಗಜಾನನ ಉತ್ಸವ ಸಮೀತಿ 1975 ರಿಂದ ಗಣೇಶನನ್ನು ಪ್ರತಿಷ್ಠಾಪಿಸಲು ಪ್ರಾರಂಭಿಸಿದೆ. 1975 ರಿಂದ 2007-08ರ ವರೆಗೆ ಸಮಿತಿ ಚಿಕ್ಕ ಗಣಪಿಯನ್ನು ಪ್ರತಿಷ್ಠಪಿಸುತ್ತಿತ್ತು. ಮುಂದೆ, ಕಳೆದ 15 ವರ್ಷಗಳಿಂದ ಅತಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸಲು ಪ್ರಾರಂಭಿಸಿತು. ಈ ಗಣೇಶನಿಗೆ ಹುಬ್ಬಳ್ಳಿ ಕಾ ರಾಜ ಎಂದು ಹೆಸರಿಡಲಾಯಿತು.

ಸರಿ ಸುಮಾರು 21-22 ಅಡಿ ಎತ್ತರದ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರಿಂದ ಈತನಿಗೆ ಹುಬ್ಬಳ್ಳಿ ಕಾ ರಾಜ ಎನ್ನಲಾಗುತ್ತಿದೆ. ಈ ಭಾರಿ 21 ಅಡಿಯ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಸಂಪೂರ್ಣ ಮಣ್ಣಿನಿಂದ ಮಾಡಲಾಗಿದೆ. ಈ ಗಣೇಶನನ್ನು ಕಲ್ಕಾತ್ತಾದ ಕಲಾವಿದಾರದ ಸಂಜಯ ತಾಲ್ ತಯಾರಿಸಿದ್ದಾರೆ.

ಗಜಾನನಿಗೆ ಬೆಳ್ಳಿ ಆಭರಣಗಳಿದ್ದು, ಬೆಳ್ಳಿ ಹಸ್ತ, ಬೆಳ್ಳಿ ಪಾದುಕೆ, ಬೆಳ್ಳಿ ಡಾಬು, ಬೆಳ್ಳಿ ಹಾರವನ್ನು ತೊಡಿಸಲಾಗುತ್ತದೆ. ಸತತ 11 ದಿನಗಳ ಗಣೇಶನಿಗೆ ಪೂಜೆ ನೆರವೇರುತ್ತದೆ. ಗಣೇಶನನ್ನು ಪ್ರತಿಷ್ಠಾಪಿಸಿ 5 ದಿನಗಳ ನಂತರ ಅನ್ನಸಂತರ್ಪಣೆ ಪ್ರಾರಂಭಿಸಲಾಗುತ್ತದೆ. ಕೊನೆಗೆ 11ನೇ ದಿನ ಭವ್ಯ ಮೆರವಣಿಗೆಯೊಂದಿಗೆ ಗಣೇಶನನ್ನು ವಿಸರ್ಜಿಸಲಾಗುತ್ತದೆ.

Published On - 7:01 pm, Mon, 29 August 22