‘ಕರ್ನಾಟಕ ಬಂದ್‌ನಿಂದ ಮಹಾರಾಷ್ಟ್ರದವರಿಗೆ ತೊಂದರೆ ಆಗಲ್ಲ; ಬಂದ್‌ಗೆ ಕರೆ ನೀಡಿದವರು ಈ ಬಗ್ಗೆ ಯೋಚಿಸಬೇಕು’

| Updated By: ganapathi bhat

Updated on: Dec 25, 2021 | 4:14 PM

ಬಂದ್ ನಿಂದ ಕನ್ನಡಿಗರಿಗೆ ಅನನುಕೂಲ ಆಗಲಿದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಂದ್ ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಕರ್ನಾಟಕ ಬಂದ್‌ನಿಂದ ಮಹಾರಾಷ್ಟ್ರದವರಿಗೆ ತೊಂದರೆ ಆಗಲ್ಲ; ಬಂದ್‌ಗೆ ಕರೆ ನೀಡಿದವರು ಈ ಬಗ್ಗೆ ಯೋಚಿಸಬೇಕು’
ಎಚ್ ​ಡಿ ಕುಮಾರಸ್ವಾಮಿ
Follow us on

ರಾಮನಗರ: ಬಂದ್ ಮಾಡುವುದರಿಂದ ಅನುಕೂಲ ಯಾರಿಗೆ, ಅನಾನುಕೂಲ ಯಾರಿಗೆ ಎಂಬುದು ಮುಖ್ಯ. ಕರ್ನಾಟಕ ಬಂದ್ ಮಾಡುವುದರಿಂದ ಮಹಾರಾಷ್ಟ್ರದವರಿಗೇನು ತೊಂದರೆ ಇಲ್ಲ. ಕಾನೂನಿನ ವ್ಯಾಪ್ತಿಯಲ್ಲಿ ಯಾರೂ ಸಾರ್ವಜನಿಕ ಆಸ್ತಿ ನಾಶ ಮಾಡುತ್ತಾರೆ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಬಂದ್ ಘೋಷಣೆ ಮಾಡಿದ್ರೆ ನಮ್ಮ ರಾಜ್ಯದ ಜನರಿಗೆ ನಷ್ಟ ಅಷ್ಟೇ ಎಂದು ಕರ್ನಾಟಕ ಬಂದ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಈ ಬಂದ್ ದೊಡ್ಡವರ ಮೇಲೆ ಪ್ರಭಾವ ಬೀರಲ್ಲ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವ್ರಿಗೆ ಆಗುವ ಪರಿಣಾಮದ ಬಗ್ಗೆ ಯೋಚಿಸಬೇಕು. ಇದು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಷಯ. ಹೀಗಾಗಿ ಮರಾಠಿಗರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳ ಬೇಕು ಎಂಬುದು ನನ್ನ ಅಭಿಪ್ರಾಯ. ಬಂದ್ ಕರೆ ನೀಡಿದವರು ಯೋಚಿಸಬೇಕು. ಬಂದ್ ನಿಂದ ಕನ್ನಡಿಗರಿಗೆ ಅನನುಕೂಲ ಆಗಲಿದೆ. ಹೋರಾಟಗಾರರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಿಖಿಲ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಂದ್ ನಿಂದ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಒತ್ತಾಯಪೂರ್ವಕವಾಗಿ ಬಂದ್ ನಡೆಸುವಂತಿಲ್ಲ: ಕಮಲ್ ಪಂತ್
ಡಿಸೆಂಬರ್ 31 ರಂದು ಬಂದ್‌ ನಡೆಸಲಿರುವ ಬಗ್ಗೆ ಯಾವುದೇ ಮನವಿ ಪತ್ರ ನೀಡಿಲ್ಲ. ಒತ್ತಾಯಪೂರ್ವಕವಾಗಿ ಯಾವುದೇ ಬಂದ್ ನಡೆಸುವಂತಿಲ್ಲ. ಸ್ವ ಇಚ್ಛೆಯಿಂದ ಬಂದ್ ಆಚರಿಸಿದರೆ ಯಾವುದೇ ಅಡ್ಡಿ ಇಲ್ಲ. ಬಲವಂತವಾಗಿ ಬಂದ್ ಮಾಡಿಸಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ನಗರದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ವಿಚಾರವಾಗಿಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಗೈಡ್‌ಲೈನ್ಸ್‌ನಂತೆ ಹೊಸ ವರ್ಷ ಆಚರಿಸಬೇಕು. ಹೋಟೆಲ್‌, ಪಬ್‌ ಎಲ್ಲಿಯೂ ವಿಶೇಷ ಕಾರ್ಯಕ್ರಮ ಇರಲ್ಲ. ಬುಕ್ಕಿಂಗ್‌ ಇದ್ದವರು ಮಾತ್ರ ಸೆಲೆಬ್ರೇಷನ್‌ಗೆ ತೆರಳಬೇಕು. ನ್ಯೂ ಇಯರ್ ಸೆಲೆಬ್ರೇಷನ್‌ಗೆ ನಿಯಮ ಪಾಲನೆ ಕಡ್ಡಾಯ ಇರಲಿದೆ. ಬ್ರಿಗೇಡ್‌ ರೋಡ್‌ನಲ್ಲಿ ಯಾವುದೇ ಜನರು ಸೇರುವಂತಿಲ್ಲ. ಜನಜೀವನ ನಾರ್ಮಲ್‌ ಆಗಿರಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯನ್ನು ನಡೆಸಿದ್ದಾರೆ ಎಂದು ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಡಿ.31ರ ಬಂದ್ ಬಗ್ಗೆ ಯಾವುದೇ ಮನವಿ ಪತ್ರ ನೀಡಿಲ್ಲ; ಒತ್ತಾಯಪೂರ್ವಕವಾಗಿ ಬಂದ್ ನಡೆಸುವಂತಿಲ್ಲ: ಕಮಲ್ ಪಂತ್

ಇದನ್ನೂ ಓದಿ: Vatal Nagaraj: ಸ್ಯಾಂಡಲ್​ವುಡ್ ನೈತಿಕ ಬೆಂಬಲದ ಅವಶ್ಯಕತೆ ಇಲ್ಲ, ಅವರಿಗೋಸ್ಕರ ಬಂದ್ ದಿನಾಂಕ ಬದಲಾಯಿಸೋಕೆ ಆಗಲ್ಲ: ವಾಟಾಳ್ ನಾಗರಾಜ್

Published On - 4:10 pm, Sat, 25 December 21