ರಾಮನಗರದಲ್ಲಿ ಭಾರೀ ಮಳೆ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡೆತಡೆ

| Updated By: ವಿವೇಕ ಬಿರಾದಾರ

Updated on: Aug 30, 2022 | 9:43 AM

ರಾಮನಗರದಲ್ಲಿ ಧಾರಕಾರ ಮಳೆಯಾದ ಹಿನ್ನೆಲೆ ಬೆಂಗಳೂರು-ಮೈಸೂರು ಹೆದ್ದಾರಿಯ ಅತಿ ಉದ್ದದ ಕುಂಬಳಗೋಡು ಸೇತುವೆ ಮೇಲೆ ನೀರು ನಿಂತಿದೆ.

ರಾಮನಗರದಲ್ಲಿ ಭಾರೀ ಮಳೆ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡೆತಡೆ
ಬೆಂಗಳೂರು-ಮೈಸೂರು ಹೆದ್ದಾರಿ (ಸಂಗ್ರಹ ಚಿತ್ರ)
Follow us on

ರಾಮನಗರ: ರಾಮನಗರದಲ್ಲಿ ಧಾರಕಾರ ಮಳೆಯಾದ ಹಿನ್ನೆಲೆ ಬೆಂಗಳೂರು-ಮೈಸೂರು ಹೆದ್ದಾರಿಯ (Bengaluru-Mysore Highway) ಅತಿ ಉದ್ದದ ಕುಂಬಳಗೋಡು ಸೇತುವೆ ಮೇಲೆ ನೀರು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿದ್ದು. ಮೂರು ದಿನಗಳ ಹಿಂದ ಇದೇ ಸ್ಥಳದಲ್ಲಿ ನೀರು ತುಂಬಿತ್ತು.

ಭಕ್ಷಿಕೆರೆ ಹೊಡೆದು ಟ್ರೂಪ್ ಲೈನ್, ಗೌಸಿಯಾ ನಗರ, ಅರ್ಕೇಶ್ವರ ಕಾಲೋನಿಯ ನೂರಾರು ಮನೆಗಳು ಜಲಾವೃತಗೊಂಡಿವೆ. ಪರಿಣಾಮ ಮನೆಯಲ್ಲಿ ಇದ್ದ ವಸ್ತುಗಳು ಎಲ್ಲವೂ ನೀರಿನಲ್ಲಿ ಹೋಗಿವೆ. ಬಟ್ಟೆ, ದಿನಸಿ ಪದಾರ್ಥಗಳು ಇಲ್ಲದೇ ಮಹಿಳೆಯರು, ಮಕ್ಕಳು ಪರದಾಡುತ್ತಿದ್ದಾರೆ.

ಜನರಿಗೆ ಇರಲು ಆಶ್ರಯವಿಲ್ಲದೆ ಸಂಬಂಧಿಕರ ಮನೆಯಲ್ಲಿ, ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇದರಿಂದ ರೋಸಿ ಹೋದ ಜನರು ನಿನ್ನೆ (ಆ 29) ಸಿಎಂ ಬಸವರಾಜ ಬೊಮ್ಮಾಯಿ,‌ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಬಂದರೂ ನಮ್ಮ ಸಮಸ್ಯೆ ಕೇಳಿಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆ ಕೋಡಿ ತುಂಬಿ ಗುರುಕುಲ ಸಮೀಪದ ರಸ್ತೆಯಲ್ಲಿ ನೀರು ನಿಂತಿದ್ದು, ಇದರಿಂದ ರಸ್ತೆಯಲ್ಲಿ ಗುಂಡಿ ಬಿದ್ದಿವೆ. ಓರ್ವ ಬೈಕ್ ಸವಾರ ಗುಂಡಿಯಲ್ಲಿ ಸಿಲುಕಿಕೊಂಡಿದ್ದು ನಂತರ ತಾನೇ ಅಲ್ಲಿಂದ ತೆರಳಿದ್ದಾನೆ. ನಿಂತ ನೀರಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ತಡರಾತ್ರಿ ಧಾರಕಾರ ಮಳೆ ಹಿನ್ನೆಲೆ ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಗ್ರಾಮದ ತಿಗಳರ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಚನ್ನಪಟ್ಟಣ ತಾಲ್ಲೂಕಿನ ಕಣ್ವ ನದಿಗೆ ನಾಲ್ಕು ಸಾವಿರ ಕ್ಯೂಸೆಸ್ ನೀರು ಹರಿಬಿಡಲಾಗಿದೆ.

ರಾಮನಗರ ಜಿಲ್ಲೆಯಲ್ಲಿ ‌ಧಾರಕಾರ‌‌ ಮಳೆ, ಸಾಕಷ್ಟು ‌ಅವಾಂತರವಾದ ಹಿನ್ನೆಲೆ ಇಂದು ರಾಮನಗರ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ. ನೆನ್ನೆ ಸಿಎಂ ಭೇಟಿ ಬೆನ್ನಲ್ಲೇ ಇಂದು ತವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

Published On - 8:56 am, Tue, 30 August 22