ರಾಮನಗರ: ಇದೇ ರೀತಿ ದಂಡ ವಿಧಿಸುತ್ತಿದ್ದರೆ ಎಸ್‌ಪಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ- ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

| Updated By: ganapathi bhat

Updated on: Mar 07, 2022 | 2:07 PM

ಮೇಕೆದಾಟು ಪಾದಯಾತ್ರೆ ಹಣೆಬರಹ ಎಲ್ಲಿಗೆ ಬಂದಿದೆ. 10 ದಿನ ಭೂರಿ ಭೋಜನ ತಿಂದಿದ್ದೇ ಸಿಕ್ಕಿದ್ದು ಇವರಿಗೆ. ಬಜೆಟ್‌ನಲ್ಲಿ 1,000 ಕೋಟಿ ಪಡೆದು ಏನು ಮಾಡ್ತೀರಾ. ಸಾವಿರ ಕೋಟಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ರಾಮನಗರ: ಇದೇ ರೀತಿ ದಂಡ ವಿಧಿಸುತ್ತಿದ್ದರೆ ಎಸ್‌ಪಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ- ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ
Follow us on

ರಾಮನಗರ: ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ. ಆದರೆ ರೈತನಿಗೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ಇದೇ ರೀತಿ ದಂಡ ವಿಧಿಸುತ್ತಿದ್ದರೆ ಪ್ರತಿಭಟನೆ ಮಾಡುತ್ತೇನೆ. ಎಸ್‌ಪಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ. ಅವನು ಇಲ್ಲಿಗೆ ಏಕೆ ಬಂದಿದ್ದಾನೆಂದು ನನಗೆ ಗೊತ್ತಿದೆ ಎಂದು ರಾಮನಗರ ಎಸ್.ಪಿ ಸಂತೋಷ್ ಬಾಬು ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಇಲ್ಲಿ ಪೊಲೀಸರು ದಂಡ ವಿಧಿಸುವುದು ಹೆಚ್ಚಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರಿಂದ ಕುಮಾರಸ್ವಾಮಿಗೆ ದೂರು ನೀಡಲಾಗಿದೆ. ಈ ವೇಳೆ ಪೊಲೀಸರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೀಗೆ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ಪೊಲೀಸರಿಗೆ ಸಂಬಳ ನೀಡುವುದಿಲ್ಲವಾ? ನಾನು ರಾಮನಗರ ಎಸ್‌ಪಿ ಜತೆ ಮಾನತಾಡುವುದಿಲ್ಲ. ನೀವು ಹೋಗಿ ಎಸ್‌ಪಿಯನ್ನು ಕೇಳಿ ಎಂದು ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಚನ್ನಪಟ್ಟಣ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಇಂಜಿನಿಯರ್ ಕರೆದೊಯ್ದು MLCಯಿಂದ ಕೆರೆ ವೀಕ್ಷಣೆ ಮಾಡಲಾಗಿದೆ. ಕೆಲಸ ಮಾಡಿಸ್ತಿರುವುದು ನಾನು, ಸ್ಕೋಪ್ ಬೇರೆಯವರದ್ದು. ಸಿ.ಪಿ. ಯೋಗೇಶ್ವರ್ ಸ್ಕೋಪ್ ತೆಗೆದುಕೊಳ್ಳಲು ಬಂದಿದ್ದಾರೆ ಎಂದು ಇದಕ್ಕೂ ಮೊದಲು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಮಾತನಾಡಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಪಾದಯಾತ್ರೆ ಹಣೆಬರಹ ಎಲ್ಲಿಗೆ ಬಂದಿದೆ. 10 ದಿನ ಭೂರಿ ಭೋಜನ ತಿಂದಿದ್ದೇ ಸಿಕ್ಕಿದ್ದು ಇವರಿಗೆ. ಬಜೆಟ್‌ನಲ್ಲಿ 1,000 ಕೋಟಿ ಪಡೆದು ಏನು ಮಾಡ್ತೀರಾ. ಸಾವಿರ ಕೋಟಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ರಾಮನಗರ: ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ದೇಗುಲದಲ್ಲಿದ್ದ ಪವಾಡ ಬಸವಪ್ಪ ನಿಧನ

ಇದನ್ನೂ ಓದಿ: ಉಕ್ರೇನ್​ನಿಂದ ಬಂದ ಎಂಬಿಬಿಎಸ್ ವಿದ್ಯಾರ್ಥಿಗಳ ಭವಿಷ್ಯವೇನು? ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್

Published On - 2:04 pm, Mon, 7 March 22