ರಾಮನಗರ: ಹೆಚ್ಡಿ ಕುಮಾರಸ್ವಾಮಿ(HD Kumaraswamy) ಸ್ವಕ್ಷೇತ್ರ ಚನ್ನಪಟ್ಟಣ JDS ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ಮುಖಂಡರು(JDS Senior Leaders) ಜೆಡಿಎಸ್ ಪಕ್ಷವನ್ನು ತ್ಯಜಿಸಲು ಮುಂದಾಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ JDS ಮುಖಂಡರ ಆಕ್ರೋಶ ಭುಗಿಲೆದ್ದಿದೆ.
ದೇವೇಗೌಡರಿಗೆ ಇಂತಹ ಮಗ ಯಾಕಾದ್ರೂ ಹುಟ್ಟಿದ್ರೋ
ಚನ್ನಪಟ್ಟಣ JDS ಘಟಕದಲ್ಲಿ ಭಿನ್ನಮತ ಉಂಟಾಗಿದೆ. ಜೆಡಿಎಸ್ ಹಿರಿಯ ಮುಖಂಡರು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಹೆಚ್ಡಿ ದೇವೇಗೌಡರು ಇದ್ದಾಗ ನಮಗೆ ಎಲ್ಲಾ ರೀತಿಯ ಸ್ಪಂದನೆ ಸಿಗುತ್ತಿತ್ತು. ಆದ್ರೆ ಹೆಚ್ಡಿ ಕುಮಾರಸ್ವಾಮಿ ನಮಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಯಾವ ರಾಮನಗರ ಜಿಲ್ಲೆ ಚನ್ನಪಟ್ಟಣ JDS ಘಟಕದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ಹಿರಿಯ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಆನೆ ಹಾವಳಿ ಬಗ್ಗೆ ಅರಿವಿದೆ, ಆನೆ ಹೋದಮೇಲೆ ನಮ್ಮ ಬೀಗರೂ ಫೋನ್ ಮಾಡಿ ಅದರ ಹಾವಳಿ ಬಗ್ಗೆ ಹೇಳ್ತಾರೆ: ಸಿಎಂ ಬೊಮ್ಮಾಯಿ
ಚುನಾವಣೆ ವೇಳೆ ಹೆಚ್ಡಿಕೆ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಜನರಿಗೆ ಅನ್ಯಾಯವಾಗುತ್ತಿದೆ. ಹೆಚ್.ಡಿ.ದೇವೇಗೌಡರಂತವರು ಮತ್ತೊಮ್ಮೆ ಹುಟ್ಟಲು ಸಾಧ್ಯವೇ ಇಲ್ಲ. ದೇವೇಗೌಡರಿಗೆ ಇಂತಹ ಮಗ ಯಾಕಾದ್ರೂ ಹುಟ್ಟಿದ್ರೋ ಎಂದು ಸಿಂಗರಾಜಿಪುರ ರಾಜಣ್ಣ ಆಕ್ರೋಶ ಹೊರ ಹಾಕಿದ್ದಾರೆ. ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಲು ಮುಖಂಡರು ಮುಂದಾಗಿದ್ದಾರೆ.
ದೇವೇಗೌಡರ ಯೋಗಕ್ಷೇಮ ವಿಚಾರಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯದ ಹಿರಿಯ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಯೋಗಕ್ಷೇಮ ವಿಚಾರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಪುಟದ ಸಹೋದ್ಯೋಗಿಗಳು ಪದ್ಮನಾಭನಗರದಲ್ಲಿರುವ ಅವರ ನಿವಾಸಕ್ಕೆ ಇದೀಗತಾನೆ ಭೇಟಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಜೊತೆಗೆ ಸಚಿವರಾದ ಆರ್. ಅಶೋಕ್, ಸೋಮಣ್ಣ, ಕೆ. ಗೋಪಾಲಯ್ಯ, ಭೈರತಿ ಬಸವರಾಜ, ಮುನಿರತ್ನ, ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಸೇರಿ ಹಲವು ಸಚಿವರು ಆಗಮಿಸಿದ್ದಾರೆ. ಪ್ರಸ್ತುತ ರಾಜ್ಯ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ಮಧ್ಯೆ ಹಿರಿಯರಾದ ದೇವೇಗೌಡರ ಯೋಗಕ್ಷೇಮ ವಿಚಾರಿಸಲು ಸಚಿವರೆಲ್ಲ ಬಂದಿದ್ದಾರೆ.
ದೇವೇಗೌಡರ ಆರೋಗ್ಯ ವಿಚಾರಿಸುತ್ತಿರುವ ಸಿಎಂ ಬೊಮ್ಮಾಯಿ
ಆದರೆ ಸದನ ನಡೆಯುತ್ತಿರುವ ಕಾರಣ ಎಲ್ಲರೂ ತೆರಳುವುದು ಬೇಡ ಎಂಬ ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕೆಲ ಸಚಿವರು ಸದನಕ್ಕೆ ವಾಪಾಸಾದರು. ಇದೆ ವೇಳೆ, ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದ ಎರಡನೇ ಮಹಡಿಯಲ್ಲಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸುತ್ತಿದ್ದಾರೆ. ದೇವೇಗೌಡರ ಪಕ್ಕದಲ್ಲಿಯೇ ಕುಳಿತು, ಗೌಡರ ಕೈ ಹಿಡಿದು ಅವರ ಆರೋಗ್ಯದ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ಪಡೆದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:53 pm, Wed, 21 September 22