ರಾಮನಗರದಲ್ಲಿ ಆರಂಭವಾದ ಕರ್ನಾಟಕದ ಪ್ರಥಮ ತ್ಯಾಜ್ಯ ಇಂಧನ ಘಟಕ

ರಾಮನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ತ್ಯಾಜ್ಯ ಇಂಧನ ಘಟಕಗಳ ಪೈಕಿ ಒಂದನ್ನು ಇಂದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ತ್ಯಾಜ್ಯದಿಂದ 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ರಾಜ್ಯ ಇಂಧನ ಇಲಾಖೆ ಪ್ಲಾನ್ ಮಾಡಿಕೊಂಡಿದೆ.

ರಾಮನಗರದಲ್ಲಿ ಆರಂಭವಾದ ಕರ್ನಾಟಕದ ಪ್ರಥಮ ತ್ಯಾಜ್ಯ ಇಂಧನ ಘಟಕ
ರಾಮನಗರದಲ್ಲಿ ಆರಂಭವಾದ ಕರ್ನಾಟಕದ ಪ್ರಥಮ ತಾಜ್ಯ ಇಂಧನ ಘಟಕ (ಸಾಂದರ್ಭಿಕ ಚಿತ್ರ)
Edited By:

Updated on: Aug 03, 2023 | 7:05 PM

ರಾಮನಗರ, ಆಗಸ್ಟ್ 3: ಜಿಲ್ಲೆಯ ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿರ್ಮಾಣವಾದ ರಾಜ್ಯದ ಪ್ರಥಮ ತ್ಯಾಜ್ಯ ಇಂಧನ ಘಟಕ ಇಂದಿನಿಂದ ಕಾರ್ಯಾರಂಭವಾಗಿದೆ. ತ್ಯಾಜ್ಯದಿಂದ 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ರಾಜ್ಯ ಇಂಧನ ಇಲಾಖೆ ಈ ಘಟನವನ್ನು ಆರಂಭಿಸಿದೆ.

ರಾಜ್ಯ ಸರ್ಕಾರವು ಪ್ರತಿ ಯುನಿಟ್​ಗೆ 8 ರೂಪಾಯಿ ಖರ್ಚು ಮಾಡಲಿದೆ. ತಾಜ್ಯ ವಿದ್ಯುತ್ ಸ್ಥಾವರವು 15 ಎಕರೆ‌ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಪ್ರಾಯೋಗಿಕವಾಗಿ ಒಂದು ಸ್ಥಾವರಕ್ಕೆ ಇಂದು ಚಾಲನೆ ನೀಡಲಾಗಿದೆ. ವಿದ್ಯುತ್ ಉತ್ಪಾದನಾ‌ ಸಾಮರ್ಥ್ಯ ತಿಳಿದ ನಂತರ ಮತ್ತಷ್ಟು ಸ್ಥಾವರ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗುತ್ತದೆ.

ಇದನ್ನೂ ಓದಿ: ಜಮೀನು ವಿಚಾರಕ್ಕಾಗಿ‌ ಎರಡು ಸಮುದಾಯಗಳ ನಡುವೆ ಮಾರಾಮಾರಿ: ದೂರು ದಾಖಲು

ಯೋಜನೆ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೊರೆ ಹೋಗಲಿದೆ. ಸಬ್ಸಿಡಿ ಸಿಕ್ಕರೆ ಇನ್ನಷ್ಟು ಸ್ಥಾವರಗಳ ನಿರ್ಮಾಣಕ್ಕೆ ಚಿಂತನೆ ಮಾಡಲಾಗುತ್ತಿದೆ. ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮತ್ತು ಬಿಬಿಎಂಪಿ ಜಂಟಿಯಾಗಿ ಸ್ಥಾವರ ನಿರ್ಮಾಣ ಮಾಡಲಿದೆ.

ನಾಡಕಚೇರಿಯಿಂದ ಧ್ವಜ ಸಂಹಿತೆ ಉಲ್ಲಂಘನೆ

ರಾಮನಗರ ಪಟ್ಟಣದ ತಹಶಿಲ್ದಾರ್​ ಕಚೇರಿಯು ಧ್ವಜ ಸಂಹಿತೆ ಉಲ್ಲಂಘನೆ ಮಾಡಿದೆ. ಹಳೇಯ ಹಾಗೂ ಕೊಳೆ ಹತ್ತಿದ ಧ್ವಜ ಹಾರಾಟ ಆಗಬಾರದು ಎಂದು ನೀತಿ ಸಂಹಿತಿ ಹೇಳುತ್ತದೆ. ಆದರೆ, ರಾಮನಗರದ‌ ಮುಖ್ಯ ಹೆದ್ದಾರಿಯಲ್ಲಿರುವ ನಾಡಕಚೇರಿಯಲ್ಲಿಯಲ್ಲಿ ಬಣ್ಣ ಹೋಗಿ ಹಳೇಯದಾದರೂ ಧ್ವಜ ಹಾರಿಸಲಾಗಿದೆ. ಆ ಮೂಲಕ ಸರ್ಕಾರಿ ಅಧಿಕಾರಿಗಳೇ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Thu, 3 August 23