ನಡು ರಸ್ತೆಯಲ್ಲೇ ಯೂ ಟರ್ನ್ ಹೊಡೆದ ಕೆಎಸ್​ಆರ್​ಟಿಸಿ ಬಸ್​: ಟೋಲ್​ನಿಂದ ಬಚಾವ್​ ಆಗಲು ಪ್ರಯಾಣಿಕರ ಪ್ರಾಣ ಸಂಕಟಕ್ಕೆ ದೂಡಿದ ಡ್ರೈವರ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Jul 31, 2023 | 5:58 PM

ಟೋಲ್ ಉಳಿಸುವ ಕಾರಣಕ್ಕೆ ನಡು ರಸ್ತೆಯಲ್ಲೇ ಕೆಎಸ್​ಆರ್​ಟಿಸಿ ಬಸ್​ ಡ್ರೈವರ್​ ಯೂ ಟರ್ನ್ ಮಾಡಿ ರಾಂಗ್ ಸೈಡ್​ನಲ್ಲಿ ಹೋಗಿರುವಂತಹ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಸಮೀಪದಲ್ಲಿ ನಡೆದಿದೆ. ಸದ್ಯ ಸಾಮಾಜಿಕ ಜಾಲಾತಣದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದು, ಬಸ್​ ಡ್ರೈವರ್​ ವಿರುದ್ಧ ಕಿಡಿಕಾರಲಾಗಿದೆ.

ರಾಮನಗರ, ಜುಲೈ 31: ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿ ಸಮೀಪದಲ್ಲಿ ನಡು ರಸ್ತೆಯಲ್ಲೇ ಕೆ ಎ 42 F 2233 ನಂಬರಿನ ಕೆಎಸ್​ಆರ್​ಟಿಸಿ ಬಸ್ (KSRTC bus)​​ ಯೂ ಟರ್ನ್ ಮಾಡಲಾಗಿದೆ. ಟೋಲ್ ಉಳಿಸುವ ಕಾರಣಕ್ಕೆ ಯೂ ಟರ್ನ್ ಮಾಡಲಾಗಿದೆ ಎನ್ನಲಾಗುತ್ತಿದ್ದು, ಆದರೆ ಪ್ರಯಾಣಿಕರ ಪ್ರಾಣ ಸಂಕಟಕ್ಕೆ ತಳ್ಳಿದ ಡ್ರೈವರ್​ ವಿರುದ್ಧ ಜನರು ಕಿಡಿಕಾರಿದ್ದಾರೆ. ಜೊತೆಗೆ ಬಸ್ ಹಿಂದೆ ಬರುತ್ತಿದ್ದ ಇತರೆ ವಾಹನ ಸವಾರರಲ್ಲಿಯೂ ಇದು  ಆತಂಕ ಮೂಡಿಸಿದೆ.

ಸದ್ಯ ಸಾಮಾಜಿಕ ಜಾಲಾತಣದಲ್ಲಿ ವಾಹನ ಸವಾರರು ವಿಡಿಯೋ ಹಂಚಿಕೊಂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟ್ಟರ್​ಗೆ ವಿಡಿಯೋ ಟ್ಯಾಗ್​ ಮಾಡಲಾಗಿದೆ. ಇನ್ನೂ ನಾಳೆಯಿಂದ ಬೈಕ್ ಬ್ಯಾನ್ ಬಗ್ಗೆ ತಯಾರಿ ಪ್ರಾಧಿಕಾರ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್​ವೇ: ಆಗಸ್ಟ್ 1 ರಿಂದ ಬೈಕ್​​, ಆಟೋ ಸಂಚಾರ ನಿರ್ಬಂಧ, ಮಧ್ಯರಾತ್ರಿಯಿಂದಲೇ ಆದೇಶ ಜಾರಿ


ನರಸಿಂಹ ಉಪಾಧ್ಯಾಯ ಎಂಬುವವರು ಈ ಘಟನೆ ಕುರಿತಾಗಿ ಟ್ವೀಟ್​ ಮಾಡಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇನಲ್ಲಿ ಸಂಭವಿಸುತ್ತಿರುವ ಅನೇಕ ಅಪಘಾತಗಳಿಗೆ ಯಾರು ಜವಾಬ್ದಾರರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರನಾ ಅಥವಾ ಇಂತಹ ಅರ್ಥಹೀನ ಚಾಲಕರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ AI ಕ್ಯಾಮೆರಾ: ಮಿತಿಗಿಂತ ಜಾಸ್ತಿ ವೇಗವಾಗಿ ವಾಹನ ಓಡಿಸಿದ್ರೆ ಬೀಳುತ್ತೆ ಫೈನ್..!

ಇಂದು ಬೆಳಿಗ್ಗೆ 8 ಗಂಟೆಗೆ ಬಿಡದಿ ಬಳಿ ಕೆಎಸ್​ ಆರ್​ಟಿಸಿ ಬಸ್​ ಚಾಲಕ ಯೂ ಟರ್ನ್ ತೆಗೆದುಕೊಂಡು ರಾಂಗ್ ಸೈಡ್​ನಲ್ಲಿ ಹೋಗುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೂ ಟ್ಯಾಗ್​ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 5:57 pm, Mon, 31 July 23