ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್-ಆಟೋ, ಟ್ರ್ಯಾಕ್ಟರ್ಗೆ ನಿರ್ಬಂಧ: ಫಸ್ಟ್ ಸರ್ವಿಸ್ ರಸ್ತೆ ಸರಿ ಮಾಡಿ ಎಂದ ಸ್ಥಳೀಯರು
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ನಿರ್ಬಂಧ ಹಿನ್ನಲೆ ಮೊದಲು ಸರ್ವಿಸ್ ರಸ್ತೆಯನ್ನು ಸರಿಯಾಗಿ ಮಾಡಿ ಎಂದು ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರ, ಆ.1: ಬೆಂಗಳೂರು-ಮೈಸೂರು ಹೆದ್ದಾರಿ(Bangalore-Mysore Highway)ಯಲ್ಲಿ ಬೈಕ್, ಆಟೋ, ಟ್ರ್ಯಾಕ್ಟರ್ ನಿರ್ಬಂಧ ಹಿನ್ನಲೆ ‘ಮೊದಲು ಸರ್ವಿಸ್ ರಸ್ತೆಯನ್ನು ಸರಿಯಾಗಿ ಮಾಡಿ ಎಂದು ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಕ್, ಅಟೋ, ಟ್ರ್ಯಾಕ್ಟರ್ ನಿಷೇಧ ಮಾಡಿರುವುದು ಒಳ್ಳೆಯದು. ಆದ್ರೆ, ಮೊದಲು ಸರ್ವಿಸ್ ರಸ್ತೆ ಪೂರ್ಣಗೊಳಿಸಲಿ. ಮಹಾರಾಜರು ಮಾಡಿರುವ ರಸ್ತೆಯನ್ನ ಯಾರು ಬಂದೂ ಉದ್ದಾರ ಮಾಡಬೇಕಾಗಿಲ್ಲ. ಅವರು ಮಾಡಿರುವ ರಸ್ತೆ ನಮಗೆ ಒಳ್ಳೆಯದು. ಮಹಾರಾಜರು ಮಾಡಿ ಬಿಟ್ಟಿರುವ ಕೆಲಸ ಮುಂದುವರೆಸಿಕೊಂಡು ಹೋಗಿ ಎಂದಿದ್ದಾರೆ.
ಈಗ ಮಾಡಿರುವ ಸರ್ವಿಸ್ ರಸ್ತೆಯಲ್ಲಿ ಮೋರಿ ನೀರು ರಸ್ತೆಗೆ ಹರಿಯುತ್ತಿದ್ದು, ಸರ್ವಿಸ್ ರಸ್ತೆಯಲ್ಲಿ ಮಣ್ಣು ಕೂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಟೋಲ್ ಕಟ್ಟುವ ರಸ್ತೆಯನ್ನ ಮಾತ್ರ ಹೆದ್ದಾರಿಯವರು ಸ್ವಚ್ಚವಾಗಿ ಇಡುತ್ತಾರೆ. ಸರ್ವಿಸ್ ರಸ್ತೆಯಲ್ಲಿ ಸಂಚಾರ ಮಾಡುವ ನಮ್ಮಂತವರ ಪಾಡೇನು?, ನಾವೇನು ಭಾರತೀಯ ಪ್ರಜೆಗಳು ಅಲ್ವಾ, ನಾವು ಓಟ್ ಹಾಕಿಲ್ಲವೇ. ಈಗಾಗಲೇ ಹಳೆ ರಸ್ತೆಯೆಲ್ಲ ಕಿತ್ತು ಹೋಗಿದೆ. ಅದಕ್ಕೆ ಡಾಂಬರೀಕರಣ ಮಾಡಿಕೊಡಬೇಕು, ಹಳೆ ರಸ್ತೆ ಬಗ್ಗೆ ಅಧಿಕಾರಿಗಳ ಕ್ರಮ ಏನು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಎಐ ಕ್ಯಾಮೆರಾಗಳು; ಅಶಿಸ್ತಿನ ಚಾಲನೆ ಮಾಡಿದರೆ ಸಿಕ್ಕಿಬೀಳುವುದು ಖಂಡಿತ!
ನಿಯಮ ಮೀರಿ ಹೆದ್ದಾರಿಗೆ ಇಳಿದಿದ್ದ ವಾಹನ ಸವಾರರಿಗೆ ದಂಡ ವಿಧಿಸಿದ ಪೊಲೀಸರು
ಇನ್ನು ಈಗಾಗಲೇ ಹೆದ್ದಾರಿಗೆ ಬೈಕ್, ಆಟೋ, ಟ್ರ್ಯಾಕ್ಟರ್ ನಿರ್ಬಂಧ ಹೇರಲಾಗಿದ್ದು, ಆದರೂ, ನಿಯಮ ಮೀರಿ ಬರುವ ವಾಹನಗಳಿಗೆ ರಾಮನಗರ ಪೊಲೀಸರು ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಹೌದು ನಿಯಮ ಮೀರಿ ಹೆದ್ದಾರಿಗೆ ಇಳಿದ ಹಿನ್ನಲೆ ಹೆದ್ದಾರಿಯ ಸಂಗಬಸವನದೊಡ್ಡಿ ಬಳಿ ಪೊಲೀಸರು 500 ರೂಪಾಯಿ ಫೈನ್ ಹಾಕುತ್ತಿದ್ದಾರೆ. ಈ ವೇಳೆ ಇದೊಂದು ಬಾರಿ ಬಿಟ್ಟುಬೀಡಿ ಎಂದು ವಾಹನ ಸವಾರರು ಕೇಳಿಕೊಳ್ಳುತ್ತಿದ್ದು, ಎಷ್ಟೇ ಬೇಡಿಕೊಂಡರೂ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ