ಆ.5ರಂದು ಕಲಬುರಗಿಯಲ್ಲಿ ಗೃಹಜ್ಯೋತಿಗೆ ಚಾಲನೆ, ಜು. 27ರೊಳಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಉಚಿತ ವಿದ್ಯುತ್
ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆ ಯೋಜೆನೆಗೆ ಚಾಲನೆ ನೀಡಲು ಕೊನೆಗೂ ಮುಹೂರ್ತ ಫೀಕ್ಸ್ ಆಗಿದೆ. ಆದ್ರೆ, ಜುಲೈ 27ರ ಬಳಿಕ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಶಾಕ್ ಎದುರಾಗಿದೆ.
ಬೆಂಗಳೂರು, (ಆಗಸ್ಟ್ 01): ಜುಲೈ ತಿಂಗಳ 200 ಯೂನಿಟ್ ಯೊಳಗೆ ಬಳಸಿದ ಯಾವುದೇ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸುವಂತಿಲ್ಲ. ಶೇ.10 ರಷ್ಟು ಹೆಚ್ಚುವರಿ ಕೊಡುವ ಉದ್ದೇಶದಿಂದ ಒಂದು ವರ್ಷದ ಸರಾಸರಿ ವಿದ್ಯುತ್ ಬಿಲ್ ಪರಿಗಣಿಸಿದ್ದು, ಈ ಯೋಜನೆಗೆ 1 ಕೋಟಿ 43 ಲಕ್ಷ ಗ್ರಾಹಕರು ಅಪ್ಲೈ ಮಾಡಿದ್ದಾರೆ. ಆಗಸ್ಟ್ 5ರಂದು ಕಲಬುರಗಿಯಲ್ಲಿ ಗೃಹಜ್ಯೋತಿ ಯೋಜನೆಗೆ (gruha jyothi scheme )ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಖರ್ಗೆ ಭಾಗಿಯಾಗಲಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಮಾಹಿತಿ ನೀಡಿದರು.
ಇದನ್ನೂ ಓದಿ: ಗೃಹ ಜ್ಯೋತಿ ಯೋಜನೆ: ಅರ್ಹ ಫಲಾನುಭವಿಗಳ ಮೆನೆಗೆ ಇಂದಿನಿಂದ ಶೂನ್ಯ ವಿದ್ಯುತ್ ಬಿಲ್ ದರ
ಬೆಂಗಳೂರಿನಲ್ಲಿ ಇಂದು (ಆಗಸ್ಟ್ 01) ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆಜೆ ಜಾರ್ಜ್. ಎಸ್ಕಾಂಗಳಲ್ಲಿಂದಲೂ 200 ಯುನಿಟ್ ಒಳಗೆ ವಿದ್ಯುತ್ ಬಳಸಿದ ಗ್ರಾಹಕರಿಗೆ ಶೂನ್ಯ ಬಿಲ್ ನೀಡುವ ಪ್ರಕ್ರಿಯೆ ಆರಂಭ ಆಗಿದೆ ಎಂದು ಸುದ್ದಿಗಾರರಿಗೆ ಶೂನ್ಯ ಬಿಲ್ ಪ್ರದರ್ಶಿಸಿದರು. ಮುಂದಿನ ತಿಂಗಳು 200 ಯೂನಿಟ್ ಗೂ ಅಧಿಕ ಬಿಲ್ ಬಂದ್ರೆ, ಪೂರ್ಣ ಪ್ರಮಾಣದ ಬಿಲ್ ಅನ್ನ ಗ್ರಾಹಕರು ಪಾವತಿಸಬೇಕು. ಮುಂದೆ ಈ ರೀತಿಯ ಗ್ರಾಹಕರಿಗೆ ಏನು ಮಾಡಬೇಕು ಎನ್ನುವುದನ್ನು ಸಚಿವ ಸಂಪುಟದಲ್ಲಿ ಸಭೆದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ 2 ಕೋಟಿ 16 ಲಕ್ಷ RR ನಂಬರ್ ಇವೆ. ಈ ಪೈಕಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಗಿಂತಲೂ ಕಡಿಮೆ ಬಳಕೆ ಮಾಡುತ್ತಿದ್ದಾರೆ. ಒಬ್ಬೊಬ್ಬರು ಎರಡ್ಮೂರು ಬಾರಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಇದುವರೆಗೂ ನೋಂದಣಿ ಮಾಡಿಕೊಳ್ಳದವರಿಗೆ ಇನ್ನೂ ಕಾಲಾವಕಾಶ ಇದೆ. ಜು.22ರ ನಂತರ ಅರ್ಜಿ ಸಲ್ಲಿಸಿದ್ದವರು ಜುಲೈ ತಿಂಗಳ ಬಿಲ್ ಪಾವತಿಸಬೇಕು. ಇದು ಸರ್ಕಾರದ ಯೋಜನೆ, ಇಂಧನ ಇಲಾಖೆಯ ಯೋಜನೆ ಅಲ್ಲ. ಇಲಾಖೆಗೆ ಇದರಿಂದ ಯಾವುದೇ ಹೊರೆ ಆಗುವುದಿಲ್ಲ ಎಂದು ಹೇಳಿದರು.
ಇನ್ನಷ್ಟು ಕರ್ನಾಟಕ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 1:22 pm, Tue, 1 August 23