ಗೃಹ ಜ್ಯೋತಿ ಯೋಜನೆ: ಅರ್ಹ ಫಲಾನುಭವಿಗಳ ಮೆನೆಗೆ ಇಂದಿನಿಂದ ಶೂನ್ಯ ವಿದ್ಯುತ್​ ಬಿಲ್​ ದರ

ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಇಂದಿನಿಂದ ಅನುಷ್ಠಾನಕ್ಕೆ ಬರಲಿದೆ. ಅರ್ಹ ಫಲಾನುಭವಿಗಳು ಶೂನ್ಯ ಬಿಲ್ ಪಡೆಯಲಿದ್ದಾರೆ.

ಗೃಹ ಜ್ಯೋತಿ ಯೋಜನೆ: ಅರ್ಹ ಫಲಾನುಭವಿಗಳ ಮೆನೆಗೆ ಇಂದಿನಿಂದ ಶೂನ್ಯ ವಿದ್ಯುತ್​ ಬಿಲ್​ ದರ
ಗೃಹಜ್ಯೋತಿ ಯೋಜನೆ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on:Aug 01, 2023 | 7:22 AM

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ (Guarantee scheme) ಒಂದಾದ ಗೃಹಜ್ಯೋತಿ ಯೋಜನೆ (Gruha Jyothi Scheme) ಇಂದಿನಿಂದ (ಆ.01) ಅನುಷ್ಠಾನಕ್ಕೆ ಬರಲಿದೆ. ಅರ್ಹ ಫಲಾನುಭವಿಗಳು ಶೂನ್ಯ ಬಿಲ್ ಪಡೆಯಲಿದ್ದಾರೆ. ಒಂದು ವರ್ಷದಲ್ಲಿ ಮನೆಯಲ್ಲಿ ಬಳಸಲಾಗಿರುವ ಸರಾಸರಿ ಯೂನಿಟ್‌ ಲೆಕ್ಕ ಮಾಡಿ ಆ ಸರಾಸರಿಯಲ್ಲಿ ಮಾಸಿಕ 200ಕ್ಕಿಂತ ಕಡಿಮೆ ಯೂನಿಟ್‌ ವಿದ್ಯುತ್‌ ಬಳಸಿರುವ ನೋಂದಾಯಿತ ಫಲಾನುಭವಿಗಳಿಗೆ ‘ಗೃಹಜ್ಯೋತಿ’ ಯೋಜನೆ ಪ್ರಯೋಜನ ದೊರೆಯಲಿದೆ. ಆಗಸ್ಟ್‌ನಲ್ಲಿ ಬರುವ ಬಿಲ್‌ನಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡ  ಗ್ರಾಹಕರಿಗೆ ಅವರ ಮನೆಯ ವಿದ್ಯುತ್‌ ಬಿಲ್‌ ಶೂನ್ಯವಾಗಿರಲಿದೆ.

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಜೂ.15 ರಿಂದ ಆರಂಭವಾಗಿದ್ದು, ಜು. 27 ಕಡೆ ದಿನಾಂಕವಾಗಿತ್ತು. ಈ ಅವಧಿಯಲ್ಲಿ ನೋಂದಣಿ ಮಾಡಿಕೊಂಡ ಅರ್ಹ ಫಲಾನುಭವಿಗಳಿಗೆ ಆಗಸ್ಟ್​ ತಿಂಗಳಲ್ಲಿ ಉಚಿತ ವಿದ್ಯುತ್​ ಸಿಗಲಿದೆ. ರಾಜ್ಯಾದ್ಯಂತ 1.40 ಕೋಟಿಗೂ ಹೆಚ್ಚು ಗ್ರಾಹಕರು ಗೃಹ ಜ್ಯೋತಿ ಯೊಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಶೇ 32 ರಷ್ಟು ಜನರು ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿಲ್ಲ. ಜುಲೈ 25 ರ ನಂತರ ಅರ್ಜಿ ಸಲ್ಲಿದ ಫಲಾನುಭವಿಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ವಿದ್ಯುತ್ ಬಿಲ್ ಸಿಗಲಿದೆ.

ಇದನ್ನೂ ಓದಿ: Gruha Jyothi: ಗೃಹಜ್ಯೋತಿ‌ ಯೋಜನೆ ಯಾರಿಗೆಲ್ಲಾ ಅನ್ವಯಿಸಲಿದೆ, ಇದರ ಲೆಕ್ಕಾಚಾರ ಹೇಗೆ?

2.14 ಕೋಟಿ ಗ್ರಾಹಕರು ಗೃಹಜ್ಯೋತಿಗೆ ಅರ್ಹತೆ ಪಡೆದಿದ್ದು, ಶೇ.66 ರಷ್ಟು ಫಲಾನುಭವಿಗಳು ನೋಂದಣಿಯಾಗಿ ಇಂದಿನಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ರಾಜ್ಯ ಸರ್ಕಾರ ಈ ಮೊದಲು ನಿಗದಿಪಡಿಸಿದ ಮಾನದಂಡದಂತೆ ತಿಂಗಳಿಗೆ 200 ಯುನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಬಳಕೆಗೆ ಅನುಮತಿಸಿದ್ದು, ಇಂದಿನಿಂದ ಯೋಜನೆ ಜಾರಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:18 am, Tue, 1 August 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ