AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್​ವೇ: ಆಗಸ್ಟ್ 1 ರಿಂದ ಬೈಕ್​​, ಆಟೋ ಸಂಚಾರ ನಿರ್ಬಂಧ, ಮಧ್ಯರಾತ್ರಿಯಿಂದಲೇ ಆದೇಶ ಜಾರಿ

Mysuru-Bengaluru Expressway: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಅಪಘಾತಗಳ ಹೆಚ್ಚಳ ಹಿನ್ನೆಲೆ ಆಗಸ್ಟ್ 1 ರಿಂದ ಬೈಕ್​, ಆಟೋ ಮತ್ತು ಟ್ರ್ಯಾಕ್ಟರ್‌ ಸಂಚಾರಕ್ಕೆ ನಿರ್ಬಂಧಿಸಿ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್​ವೇ: ಆಗಸ್ಟ್ 1 ರಿಂದ ಬೈಕ್​​, ಆಟೋ ಸಂಚಾರ ನಿರ್ಬಂಧ, ಮಧ್ಯರಾತ್ರಿಯಿಂದಲೇ ಆದೇಶ ಜಾರಿ
ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 31, 2023 | 5:13 PM

Share

ಮೈಸೂರು, ಜುಲೈ 31: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ (Mysuru-Bengaluru Expressway) ಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ಆಗಸ್ಟ್ 1 ರಿಂದ ಬೈಕ್​, ಆಟೋ ಮತ್ತು ಟ್ರ್ಯಾಕ್ಟರ್‌ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಆದೇಶ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಸದ್ಯ ಈ ಹೊಸ ನಿಯಮಕ್ಕೆ ಬೈಕ್​, ಆಟೋ ಚಾಲಕರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದೇಶದಿಂದ ಬೈಕ್ ಸವಾರರಿಗೆ ಶಾಕ್

ಕೆಲ ಬೈಕ್ ಸವಾರರಿಗೆ ಆದೇಶದಿಂದ ಶಾಕ್​​ ಆಗಿದ್ದು, ಅಪಘಾತ ಬರೀ ಬೈಕ್‌ನಿಂದ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಿ. ಸ್ಪೀಡ್ ಲಿಮಿಟ್ ಮಾಡಿ. ಆದರೆ ಬೈಕ್ ಪ್ರಯಾಣಕ್ಕೆ ಅವಕಾಶ ಮಾಡಿ ಕೊಡಿ ಎಂದು ಬೈಕ್ ಸವಾರರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ AI ಕ್ಯಾಮೆರಾ: ಮಿತಿಗಿಂತ ಜಾಸ್ತಿ ವೇಗವಾಗಿ ವಾಹನ ಓಡಿಸಿದ್ರೆ ಬೀಳುತ್ತೆ ಫೈನ್..!

ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಆಟೋ ಸವಾರರು

ಅದೇ ರೀತಿಯಾಗಿ ಆಟೋ ಸವಾರರಿಂದ ಮಿಶ್ರ ಪ್ರತಿಕ್ರಿಯೆವಾಗಿದ್ದು, ಗೂಡ್ಸ್ ಆಟೋ ಚಾಲಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ರಸ್ತೆಯಲ್ಲಿ ಖುಷಿಯಾಗಿ ಓಡಾಡುತ್ತೇವೆ. ಅದಕ್ಕೆ ಬ್ರೇಕ್ ಹಾಕಿರುವುದಿ ಬೇಜಾರಾಗಿದೆ. ಇಷ್ಟು ಚೆನ್ನಾಗಿ ರಸ್ತೆ ಮಾಡಿ ಓಡಾಡಬೇಡಿ ಅಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಎಐ ಕ್ಯಾಮೆರಾಗಳು; ಅಶಿಸ್ತಿನ ಚಾಲನೆ ಮಾಡಿದರೆ ಸಿಕ್ಕಿಬೀಳುವುದು ಖಂಡಿತ!

ರಸ್ತೆ ಮಾಡುವ ಮುನ್ನವೇ ಯೋಚನೆ ಮಾಡಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಚೆಂದ ರಸ್ತೆ ಮಾಡಿಸಿ ಈಗ ಓಡಾಡಬೇಡಿ ಅಂದರೆ ಹೇಗೆ? ವೇಗವಾಗಿ ಹೋದರೆ ಅಪಘಾತ ಆಗುತ್ತದೆ ಹೊರೆತು ನಮ್ಮಿಂದ ಅಲ್ಲ ಎಂದಿದ್ದಾರೆ.

ಮತ್ತೆ ಕೆಲ ಆಟೋ ಚಾಲಕರು ಆದೇಶ ಸ್ವಾಗತಿಸಿದ್ದು, ಒಳ್ಳೆಯದೇ ಆಯ್ತು ಸರ್, ನಾವು ಸರಿಯಾಗಿ ಓಡಿಸುತ್ತಿರಲಿಲ್ಲ. ನಮ್ಮಿಂದ ಬೈಕ್‌ನಿಂದ ಅಪಘಾತ ಜಾಸ್ತಿ ಆಗುತ್ತಿತ್ತು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.