ಸಾವಿನಲ್ಲೂ ಸಾರ್ಥಕತೆ ಮೆರೆದ ಮೈಸೂರಿನ ಯುವಕ: ಐದು ಜೀವಗಳಿಗೆ ನೆರವಾಯ್ತು ಅಂಗಾಗ ದಾನ
Mysuru News: ಮೈಸೂರಿನ ಹೆಚ್ಆರ್ ರಾಕೇಶ್ ಎಂಬ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಆತನ ಅಂಗಾಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಮಾನವೀಯತೆ ಮೆರೆದಿದೆ.

ಮೈಸೂರು, ಜುಲೈ 31: ಅನಾರೋಗ್ಯದಿಂದ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಆತನ ಅಂಗಾಗ ದಾನ (organs donates) ಮಾಡುವ ಮೂಲಕ ಕುಟುಂಬ ಮಾನವೀಯತೆ ಮೆರೆದಿದ್ದಾರೆ. 2 ಕಿಡ್ನಿ, 1 ಲಿವರ್, ಹೃದಯ ಕವಾಟಗಳು ಮತ್ತು ಕಾರ್ನಿಯ ದಾನ ಮಾಡುವ ಮೂಲಕ ಯುವಕನ ಅಂಗಾಗಳು ಐದು ಜೀವಗಳಿಗೆ ನೆರವಾಗಿವೆ.
ಅನಾರೋಗ್ಯದ ಹಿನ್ನೆಲೆ ರಾಜು ಮತ್ತು ಸುಮಂಗಲ ದಂಪತಿ ಪುತ್ರ 28 ವರ್ಷದ ಹೆಚ್ಆರ್. ರಾಕೇಶ್ ಎಂಬ ಯುವಕ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ. ಸಿಟಿ ಸ್ಕ್ಯಾನ್‌ನಲ್ಲಿ ಮೆದುಳಿನ ಸಮಸ್ಯೆ ಪತ್ತೆಯಾದ ಹಿನ್ನೆಲೆ ತಕ್ಷಣ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವು
ಆಸ್ಪತ್ರೆಯಲ್ಲಿ ಎರಡು ರೀತಿಯಯಲ್ಲಿ ನಾಲ್ಕು ದಿನ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಐದನೇ ದಿನ ಮೆದುಳಿನ ಅಂಗಾಂಶಗಳ ವೈಫಲ್ಯ ಉಂಟಾಗಿ ಮೃತಪಟ್ಟಿದ್ದಾನೆ. ಬಳಿಕ ಪೋಷಕರು ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ: ಆಗಸ್ಟ್ 1 ರಿಂದ ಬೈಕ್, ಆಟೋ ಸಂಚಾರ ನಿರ್ಬಂಧ, ಮಧ್ಯರಾತ್ರಿಯಿಂದಲೇ ಆದೇಶ ಜಾರಿ
ತನ್ನ ಅಂಗಾಂಗ ದಾನದ ಮೂಲಕ ರಾಕೇಶ್ ಕೂಡ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 pm, Mon, 31 July 23