ರಾಮನಗರ, ಮಾ.22: ಕಳೆದ 20 ದಿನಗಳಲ್ಲಿ ಸುಮಾರು 10 ಲಕ್ಷ ಕುಕ್ಕರ್ ಆರ್ಡ್ ಮಾಡಿದ್ದಾರೆ. ಈಗಾಗಲೇ 4 ರಿಂದ 5 ಲಕ್ಷ ಕುಕ್ಕರ್ ಯಶಸ್ವಿಯಾಗಿ ಹಂಚಿದ್ದಾರೆ ಎಂದು ಡಿಕೆ ಸಹೋದರರ ವಿರುದ್ದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆರೋಪಿಸಿದ್ದಾರೆ. ಇಂದು (ಮಾ.22) ರಾಮನಗರ(Ramanagara) ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಆಮಿಷಗಳನ್ನ ಒಡ್ಡಿ ಚುನಾವಣೆ ನಡೆಸುತ್ತಿದೆ. ಮೊನ್ನೆಯಷ್ಟೇ ಸೀರೆ, ತವಾಗಳನ್ನು ಕೂಡ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಜ್ಞಾವಂತ ಮತದಾರರು ಈ ಬಗ್ಗೆ ಯೋಚನೆ ಮಾಡಿ ಮತಹಾಕಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್ ಕೊಟ್ಟಿದ್ದಾರೆ.
ಇನ್ನು ಕಾಂಗ್ರೆಸ್ನಿಂದ ಆಪರೇಷನ್ ಹಸ್ತ ವಿಚಾರ, ‘ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ವೀಕ್ ಮೈಂಡೆಡ್ ಅಲ್ಲ, ಒಂದಷ್ಟು ಜನ ನಮ್ಮ ಚುನಾವಣೆಯಲ್ಲಿ ಜೆಡಿಎಸ್ ಸವಲತ್ತು ಪಡೆದು ಅನ್ಯಾಯ ಮಾಡಿದರು. ಇದು ಚುನಾವಣೆಗಳಲ್ಲಿ ಸಹಜ,
ಒಂದು ಐದತ್ತು ಪರ್ಸೆಂಟ್ ಜೊತೆಯಲ್ಲೇ ಇದ್ದು ಮೋಸ ಮಾಡುತ್ತಾರೆ. ಇವರು, ‘ನನ್ನ ಚುನಾವಣೆಯಲ್ಲೇ ಕಾಂಗ್ರೆಸ್ಗೆ ಒಂದು ಹೆಜ್ಜೆ ಇಟ್ಟಿದ್ರು, ಇದೀಗ ಎರಡೂ ಕಾಲುಗಳನ್ನು ಕಾಂಗ್ರೆಸ್ಗೆ ಇಟ್ಟಿದ್ದಾರೆ. ಆದರೆ, ಪಕ್ಷ ಕಟ್ಟಿ ಬೆಳೆಸಿರುವ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಜೊತೆಯಲ್ಲೇ ಇದ್ದಾರೆ. ಕಾಂಗ್ರೆಸ್ ಲಕ್ಷ ಲಕ್ಷ ಕೊಟ್ಟರೂ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಮಂಡ್ಯ ಲೋಕಸಭಾ ಕಣದಿಂದ ಹಿಂದೆ ಸರಿದಿದ್ದ ನಿಖಿಲ್ ಕುಮಾರಸ್ವಾಮಿ ಯೂಟರ್ನ್
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಏ.26, ಮೇ 7ರಂದು ಮತದಾನ ನಡೆಯಲಿದೆ. ಹಾಗಾಗಿ ಇಂದು ಕಾರ್ಯಕರ್ತರನ್ನ ಸಜ್ಜುಗೊಳಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡ್ತಿದ್ದೇವೆ. ಇನ್ನು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಸರಳ ಸಜ್ಜನಿಕೆ ವ್ಯಕ್ತಿ, ಸುಮಾರು 8 ಲಕ್ಷ ಜನಕ್ಕೆ ಹೃದಯ ಆಪರೇಷನ್ ಮಾಡಿದ್ದಾರೆ. ಅವರ ಸೇವೆ ಬಗ್ಗೆ ಜನ ಮಾತನಾಡ್ತಿದ್ದಾರೆ.
ಅವರು ಗೆಲುವು ನಿಶ್ಚಿತ ಎಂದರು.
ಇದೇ ವೇಳೆ ಮಾಜಿ ಸಿಎಂ ಹೆಚ್ಡಿಕೆ ಆರೋಗ್ಯದ ಬಗ್ಗೆ ಮಾತನಾಡಿ, ‘ನಿನ್ನೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಸ್ವತಃ ಡಾ.ಮಂಜುನಾಥ್ ಹಾಗೂ ಹಿರಿಯ ವೈದ್ಯ ಸಾಯಿ ಸತೀಶ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಆಗಿದೆ. ಮೂರುವರೆ ಗಂಟೆಗಳ ಕಾಲ ಆಪರೇಷನ್ ನಡೆದಿದೆ. ರಾಜ್ಯದ ಜನರ ಆಶೀರ್ವಾದದಿಂದ ಗುಣಮುಖರಾಗಿದ್ದಾರೆ. ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಲಿದ್ದಾರೆ. ಮುಂದಿನ ತಿಂಗಳು 1ತಾರೀಖಿನ ಒಳಗೆ ಚುನಾವಣಾ ಕಾರ್ಯಕ್ರಮಗಳಲ್ಲಿ ಕುಮಾರಣ್ಣ ಭಾಗಿಯಾಗ್ತಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ