ಸದೃಢ ದೇಶಕ್ಕಾಗಿ ನರೇಂದ್ರ ಮೋದಿ ಹೆಚ್ಡಿ ದೇವೇಗೌಡ್ರು ಒಂದಾಗಿದ್ದಾರೆ -ಸಿ.ಪಿ. ಯೋಗೇಶ್ವರ್
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ್ರು ಇಬ್ಬರೂ ಸದೃಢ ದೇಶಕ್ಕಾಗಿ ಒಂದಾಗಿದ್ದಾರೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತ ಜೆಡಿಎಸ್ ಒಂದಾಗಿವೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ರಾಮನಗರದಲ್ಲಿ ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಂದೇ ಪಕ್ಷ ಎಂದರು.
ರಾಮನಗರ, ಮಾರ್ಚ್.23: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಮಾಜಿ ಪ್ರಧಾನಿ ದೇವೇಗೌಡ್ರು (HD Deve Gowda) ಇಬ್ಬರೂ ಸದೃಢ ದೇಶಕ್ಕಾಗಿ ಒಂದಾಗಿದ್ದಾರೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತ ಜೆಡಿಎಸ್ ಒಂದಾಗಿವೆ. ಅದೇ ಥರಾ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಒಂದಾಗಬೇಕು ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ರಾಮನಗರದಲ್ಲಿ ಹೇಳಿದರು.
32 ವರ್ಷಗಳ ಹಿಂದೆ ರಾಮನಗರದಲ್ಲಿ ಪಕ್ಷ ಇರಲಿಲ್ಲ. ಆಗ ದೇವೇಗೌಡರು ಪಕ್ಷ ಕಟ್ಟಿದ್ರೂ. ರಾಮಕೃಷ್ಣ ಹೆಗಡೆ ಇದ್ದರು, ಬೊಮ್ಮಾಯಿ ಇದ್ರು, ಆ ಪಕ್ಷ ಪಡೆದುಹೋಯ್ತು. ಕೆಲವರು ಜನತಾದಳಕ್ಕೆ ಹೋದ್ರು, ಕೆಲವರು ಬಿಜೆಪಿಗೆ ಹೋದ್ರು. ಹಾಗೆ ನೋಡಿದ್ರೆ ಬಿಜೆಪಿ ಮತ್ತು ಜೆಡಿಎಸ್ ಎರಡೂ ಒಂದೇ ಪಕ್ಷ. ಮೂರು ಬಾರಿ ಸಂಸದರಾದ ಡಿ.ಕೆ. ಸುರೇಶ್ ಮತ್ತೊಮ್ಮೆ ಆಯ್ಕೆ ಮಾಡಿ ಅಂತ ತಿರುಗುತ್ತಿದ್ದಾರೆ. ಸೀರೆಗಳನ್ನೆಲ್ಲ ಹಂಚುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಕೂಡ ಪತ್ರಿಕಾಗೋಷ್ಟಿ ನಡೆಸಿ ಹೇಳಿದ್ರು. ಇಕ್ಬಾಲ್ ಹುಸೇನ್ ಇದೆಲ್ಲಾ ಮಾಡಿದ್ದಾರೆ ಅಂತ. ಡಿಕೆ ಬ್ರದರ್ಸ್ ಯಾರೋ ಬರ್ತಾರೆ ಅಂತ ಊಹಿಸಿದ್ರು. ಬೇರೆ ಯಾರಾದ್ರೂ ಬಂದ್ರೆ ದಬಾಯಿಸಿಬಿಡಬಹುದು ಅಂದ್ಕೊಂಡಿದ್ರು. ಆದರೆ ಡಾ. ಮಂಜುನಾಥ್ ಬಂದ ನಂತರ ಏನ್ ಮಾಡೋದಕ್ಕೂ ತಿಳಿಯುತ್ತಿಲ್ಲ. ಹಾಗಾಗಿ ತಡಬಡಾಯಿಸ್ತಿದ್ದಾರೆ.
ನಮ್ಮದು ದೊಡ್ಡ ಕ್ಷೇತ್ರ. ಇಪ್ಪತ್ತೇಳು ವರೆ ಲಕ್ಷ ಮತದಾರರಿದ್ದಾರೆ. ಮೊನ್ನೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸಿಕ್ಕಿದ್ದು 14 ಸಾವಿರ ಓಟು. ಉಳಿದಿದ್ದು ನಾನೂ ಕುಮಾರಸ್ವಾಮಿ ಹಂಚಿಕೊಂಡ್ವಿ. ಆರ್.ಆರ್. ನಗರದಲ್ಲಿ 50 ಸಾವಿರ ಲೀಡ್ ಸಿಗುತ್ತೆ. ಬೆಂಗಳೂರು ದಕ್ಷಿಣದಲ್ಲಿ 1 ಲಕ್ಷ ಲೀಡ್ ಬರುತ್ತೆ. ಡಾ ಮಂಜುನಾಥ್ ರವರು ಸಂಸದರಾಗಿ, ಮಂತ್ರಿ ಆಗ್ತಾರೆ. ಜೆಡಿಎಸ್ – ಬಿಜೆಪಿ ಅಣ್ಣ ತಮ್ಮಂದಿರಿದ್ದಂಗೆ. ಇವರ ಗೆಲವು ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತೆ ಎಂದರು.
ಇದನ್ನೂ ಓದಿ: ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ನಮ್ಮದೇ: ರಾಮನಗರದಲ್ಲಿ ಇನ್ನೂ ಏನೇನೆಂದರು ನೋಡಿ ಡಾ ಮಂಜುನಾಥ್
ಮಂಡ್ಯದಲ್ಲಿ ಸ್ಪರ್ಧಿಸುವಂತೆ ನಿಖಿಲ್‌ಗೆ ಒತ್ತಾಯ
ಮಂಡ್ಯ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಸಾಧ್ಯತೆ ಹಿನ್ನೆಲೆ, ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಿಖಿಲ್‌ಗೆ ಕಾರ್ಯಕರ್ತರ ಮುತ್ತಿಗೆ ಹಾಕಿದ್ರು. ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗಬಾರದೆಂದು ಆಗ್ರಹಿಸಿದ್ರು. ಮಂಡ್ಯ ಕ್ಷೇತ್ರದಲ್ಲಿ ನೀವೇ ಸ್ಪರ್ಧಿಸಿ, ನಾವು ಬಂದು ಪ್ರಚಾರ ಮಾಡ್ತೇವೆ. ಆದ್ರೆ ಮಂಡ್ಯ ಕ್ಷೇತ್ರದಿಂದ ಹೆಚ್ಡಿಕೆ ಸ್ಪರ್ಧೆ ಮಾಡಲು ಬಿಡುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದ್ರು.
‘ಬಿಜೆಪಿಯಿಂದ ಒಬ್ಬ ಶಾಸಕರಿಗೆ ₹50 ಕೋಟಿ ಆಫರ್’
ಬಿಜೆಪಿಯವರು ಒಬ್ಬ ಶಾಸಕನಿಗೆ ₹50 ಕೋಟಿ ಆಫರ್ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಚುನಾವಣಾ ಖರ್ಚು ನಾವೇ ನೋಡಿಕೊಳ್ತೀವಿ ಅಂತಿದ್ದಾರೆ. ಸೋಲಿನ ಭಯದಿಂದ ಕಾಂಗ್ರೆಸ್ ಖಾತೆ ಫ್ರೀಜ್ ಮಾಡಿದ್ದಾರೆ. ಕಾಂಗ್ರೆಸ್ನವರು 1 ರೂಪಾಯಿ ಬಳಸದಂತೆ ಮಾಡಿದ್ದಾರೆ ಅಂದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ