ಬಿಡದಿ ಟೊಯೊಟ ಕಿರ್ಲೋಸ್ಕರ್ ಘಟಕದ 45 ಕಾರ್ಮಿಕರು‌ ವಜಾ; ಕಾರ್ಮಿಕ ಸಂಘದ ಆಕ್ರೋಶ

ಕಂಪನಿಯು ತನ್ನ ಹಠಮಾರಿ ಧೋರಣೆ ಹಾಗೂ ಕಾರ್ಮಿಕ‌ ವಿರೋಧಿ ನೀತಿಯನ್ನು ಮತ್ತೆ ಮುಂದುವರಿಸಿದೆ. ಇದು ದುರಹಂಕಾರದ ಪರಮಾವಧಿ ಎಂದು ಕಾರ್ಮಿಕ  ಸಂಘವು ಟೀಕಿಸಿದೆ.

ಬಿಡದಿ ಟೊಯೊಟ ಕಿರ್ಲೋಸ್ಕರ್ ಘಟಕದ 45 ಕಾರ್ಮಿಕರು‌ ವಜಾ; ಕಾರ್ಮಿಕ ಸಂಘದ ಆಕ್ರೋಶ
ಟೊಯೊಟಾ ಕಿರ್ಲೋಸ್ಕರ್
Edited By:

Updated on: Oct 02, 2021 | 2:36 PM

ರಾಮನಗರ: ತಾಲೂಕಿನ ಬಿಡದಿ‌ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ತನ್ನ 45 ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡಿದೆ. ಕಾರ್ಮಿಕರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಟಿಕೆಎಂ ನೌಕರರ ಸಂಘದ ನೇತೃತ್ವದಲ್ಲಿ ಕಳೆದ ವರ್ಷ ಕೆಲ ತಿಂಗಳುಗಳ ಕಾಲ ಸಾವಿರಾರು‌ ಕಾರ್ಮಿಕರು ಮುಷ್ಕರ ನಡೆಸಿದ್ದರು. ಇದರಿಂದಾಗಿ ಎರಡೆರಡು ಬಾರಿ ಕಂಪನಿ‌ ಲಾಕೌಟ್ ಘೋಷಿಸಿತ್ತು. ನಂತರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದು‌ ಮತ್ತೆ ಉತ್ಪಾದನೆ ಪುನರಾರಂಭಗೊಂಡಿತ್ತು. ಆರೋಪ ಇರುವ ಕಾರ್ಮಿಕರು ಹೊರತು ಪಡೆಸಿ ಉಳಿದ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದರು.

ಇನ್ನು ನಿಯಮಬಾಹಿರವಾಗಿ ಮುಷ್ಕರ ನಡೆಸಿದ ಆರೋಪದ‌ ಮೇಲೆ ಟಿಕೆಎಂ ತನ್ನ 66 ನೌಕರರನ್ನು ಸೇವೆಯಿಂದ ಅಮಾನತು ಮಾಡಿ, ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕಂಪನಿ‌ ನಿಯಮಗಳ ಪ್ರಕಾರ ಈ ಕಾರ್ಮಿಕರನ್ನು ಸೇವೆಯಿಂದ ವಜಾ‌ ಮಾಡಿರುವುದಾಗಿ ಟಿಕೆಎಂ‌ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಮಿಕ ಸಂಘದ ಆಕ್ರೋಶ: ಕಂಪನಿಯ ಕ್ರಮಕ್ಕೆ ಟಿಕೆಎಂ ಕಾರ್ಮಿಕ ಸಂಘದ ಆಕ್ರೋಶ
ಕಂಪನಿಯು ತನ್ನ ಹಠಮಾರಿ ಧೋರಣೆ ಹಾಗೂ ಕಾರ್ಮಿಕ‌ ವಿರೋಧಿ ನೀತಿಯನ್ನು ಮತ್ತೆ ಮುಂದುವರಿಸಿದೆ. ಇದು ದುರಹಂಕಾರದ ಪರಮಾವಧಿ ಎಂದು ಕಾರ್ಮಿಕ  ಸಂಘವು ಟೀಕಿಸಿದೆ.

ಇದನ್ನೂ ಓದಿ: 

40ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಿರ್ಲೋಸ್ಕರ್​ ಕಾರ್ಮಿಕರ ಮುಷ್ಕರ: DC ಕಚೇರಿ ಮುತ್ತಿಗೆಗೆ ಯತ್ನ

ಬಿಡದಿ: ಈಗಲ್ಟನ್​ ರೆಸಾರ್ಟ್ ಒತ್ತುವರಿ ಮಾಡ್ಕೊಂಡಿದ್ದ 928 ಕೋಟಿ ರೂ. ಮೌಲ್ಯದ 77 ಎಕರೆ ಸರ್ಕಾರಿ ಭೂಮಿ ಜಿಲ್ಲಾಡಳಿತ ವಶಕ್ಕೆ